
ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಭಾರಿ ಹಿಟ್ ಎನಿಸಿಕೊಂಡಿದೆ. ಸೋಮವಾರವೂ ಸಹ ಶೋಗಳು ಹೌಸ್ಫುಲ್ ಆಗಿವೆ. ಜನ ಮುಗಿದು ಸಿನಿಮಾ ನೋಡುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ‘ಧುರಂಧರ 2’ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಇಷ್ಟೆಲ್ಲದರ ನಡುವೆಯೂ ‘ಧುರಂಧರ 2’ ಸಿನಿಮಾಕ್ಕೆ ಭಾರಿ ನಷ್ಟವೇ ಆಗುತ್ತಿದೆ. ಅದಕ್ಕೆ ಕಾರಣ ಪೈರಸಿ.
ಪಾಕಿಸ್ತಾನದಲ್ಲಿ ಮತ್ತು ಸಿನಿಮಾದ ಪೈರಸಿ ಆಗಿದ್ದು, ಗಲ್ಲಿ-ಗಲ್ಲಿಗಳಲ್ಲಿ ‘ಧುರಂಧರ’ ‘ಧುರಂಧರ 2’ ಸಿನಿಮಾದ ಪೈರಸಿ ಸಿಡಿಗಳು ಸಿಗುತ್ತಿವೆ. ಸಾಮಾನ್ಯ ಜನರು ಮಾತ್ರವೇ ಅಲ್ಲದೆ ಪಾಕಿಸ್ತಾನದ ರಾಜಕಾರಣಿಗಳು ಸಹ ಪೈರಸಿಯಲ್ಲಿ ‘ಧುರಂಧರ’ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿಯೂ ಸಹ ‘ಧುರಂಧರ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ. ಚಿತ್ರತಂಡ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಸಹ ‘ಧುರಂಧರ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ:’ಧುರಂಧರ್ 2′ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್
ಭಾರತದಲ್ಲಿ ಸಕ್ರಿಯವಾಗಿರುವ ಕ್ಯಾಸ್ಟಲ್, ಮೂವಿರೂಲ್ಜ್ ಇನ್ನೂ ಹಲವಾರು ಪೈರಸಿ ವೆಬ್ ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ ‘ಧುರಂಧರ 2’ ಸಿನಿಮಾ ಅಕ್ರಮವಾಗಿ ಪ್ರದರ್ಶನವಾಗುತ್ತಿದೆ. ಕಾಲೇಜುಗಳು, ಕಚೇರಿಗಳಲ್ಲಿ ‘ಧುರಂಧರ 2’ ಸಿನಿಮಾದ ಪೈರಸಿ ಕಾಪಿಯ ವರ್ಗಾವಣೆ ಜೋರಾಗಿ ನಡೆಯುತ್ತಿದೆ. ಥಿಯೇಟರ್ ಪ್ರಿಂಟ್ ಅನ್ನೇ ಜನ ಮೊಬೈಲ್ ನಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಪರಿಣಾಮಕಾರಿ ಸಿನಿಮಾ ತಂಡಕ್ಕೆ ದೊಡ್ಡ ನಷ್ಟವೇ ಆಗುತ್ತಿದೆ. ಆದರೆ ಭಾರಿ ಲಾಭದಲ್ಲಿರುವ ಕಾರಣ ಸಿನಿಮಾ ತಂಡ ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ.
ಸಿನಿಮಾ ಬಿಡುಗಡೆಗೆ ಮುಂಚೆಯೇ ಚಿತ್ರತಂಡವು ಸುಮಾರು 12 ಸಾವಿರ ಲಿಂಕ್ ಡಿಲೀಟ್ ಮಾಡಿದೆ. ಜೊತೆಗೆ ಮದ್ರಾಸ್ ಪ್ರದರ್ಶನ ಇಂಜೆಕ್ಷನ್ ಆರ್ಡಸ್ ಸಹ ನೀಡಿ, ಸಿನಿಮಾದ ಅಕ್ರಮಕ್ಕೆ ತಡೆ ಹಾಕಿತ್ತು. ಇದೆಲ್ಲದರ ನಡುವೆಯೂ ಸಹ ಸಿನಿಮಾದ ಪೈರಸಿ ಕಾಪಿಗಳು ಯಥೇಚ್ಛವಾಗಿ ಹರಿದಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ