
ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಟಾಕ್ಸಿಕ್’ ಸಿನಿಮಾ ರೇಸಿನಿಂದ ಹಿಂದೆ ಸರಿದಿರುವ ಕಾರಣ ‘ಧುರಂಧರ 2’ ಸಿನಿಮಾಕ್ಕೆ ಎದುರಾಳಿಗಳೇ ಇಲ್ಲದಾಗಿದೆ. ಸಿನಿಮಾದ ಪ್ರೀಮಿಯರ್ ಶೋನ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಭಾರತದ ಹಲವು ಪ್ರಮುಖ ನಗರಗಳಲ್ಲಿ ಮಾರ್ಚ್ 18ರ ಸಂಜೆ ಸಿನಿಮಾದ ಪ್ರೀಮಿಯರ್ ಶೋಗಳ ಪ್ರದರ್ಶನ ಆಗಲಿದೆ. ಭಾರಿ ದುಬಾರಿ ಬೆಲೆಯಲ್ಲಿ ‘ಧುರಂಧರ 2’ ಸಿನಿಮಾ ಪ್ರೀಮಿಯರ್ ಶೋ ಟಿಕೆಟ್‌ಗೆ ನಿಗದಿಯಾಗಿದೆ. ಅಷ್ಟಕ್ಕೂ ಯಾವ ‘ಧುರಂಧರ 2’ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಎಲ್ಲಿ ದುಬಾರಿ? ಎಲ್ಲಿ ಕಡಿಮೆ?
‘ಧುರಂಧರ 2’ ಸಿನಿಮಾದ ಪ್ರೀಮಿಯರ್ ಶೋಗಳು, ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿ, ಪುಣೆ ಇನ್ನೂ ಹಲವಾರು ಪ್ರಮುಖ ನಗರಗಳಲ್ಲಿ ಚಾಲನೆಗೊಂಡಿದೆ. ಇಷ್ಟರಲ್ಲಿ ಅತಿ ಹೆಚ್ಚು ಬೆಲೆ ಇರುವುದು ಮುಂಬೈನಲ್ಲಿ. ಮುಂಬೈನ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ಟಿಕೆಟ್ 3200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇತರೆ ನಗರಗಳಲ್ಲಿಯೂ ಸಹ ಟಿಕೆಟ್ ಬೆಲೆ ಕಡಿಮೆ ಇಲ್ಲ. ಬೆಂಗಳೂರಿನ ರೆಕ್ಸ್‌ನಲ್ಲಿ ಟಿಕೆಟ್ ಬೆಲೆ 2000 ರೂಪಾಯಿಗಳು, ಎಲ್ಲೋ ಸೋಲ್ಡ್ ಔಟ್ ಆಗಿವೆ.
ಇನ್ನು ದೆಹಲಿಯಲ್ಲೂ ಸಹ ದೊಡ್ಡ ಮೊತ್ತಕ್ಕೆ ಟಿಕೆಟ್ ಮಾರಾಟವಾಗುತ್ತಿದೆ. ದೆಹಲಿಯ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ 2200 ರೂಪಾಯಿಗೆ ಟಿಕೆಟ್ ಮಾರಾಟವಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿನಿಮಾ ನೋಡಬಹುದೆಂದರೆ ಅದು ಚೆನ್ನೈನಲ್ಲಿ. ‘ಧುರಂಧರ 2’ ಸಿನಿಮಾದ ಪ್ರೀಮಿಯರ್ ಶೋ ನ ಟಿಕೆಟ್ ಚೆನ್ನೈನಲ್ಲಿ ಗರಿಷ್ಟ 190 ರೂಪಾಯಿಗಳು ಕೇವಲ 54 ರೂಪಾಯಿಗಳಿವೆ. ಹೈದರಾಬಾದ್‌ನಲ್ಲಿಯೂ ಸಹ ಟಿಕೆಟ್ ಬೆಲೆ ಕಡಿಮೆಯಾಗಿದೆ. ದೇಶದ ಗರಿಷ್ಟ ಬೆಲೆ 350 ಆಗಿದ್ದು, ಕನಿಷ್ಠ ಬೆಲೆ 150 ರೂಪಾಯಿ.
ಇದನ್ನೂ ಓದಿ:ಮತ್ತೆ ಬಂತು ಬೆದರಿಕೆ: ರಣವೀರ್ ಸಿಂಗ್-ದೀಪಿಕಾಗೆ ಭದ್ರತೆ
ಕೇರಳದ ಕೊಚ್ಚಿಯಲ್ಲಿ ಭಿನ್ನ-ಭಿನ್ನ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಲಕ್ಷುರಿ ಮಲ್ಟಿಪ್ಲೆಕ್ಸ್‌ಗಳಲ್ಲಿ 1200 ರೂಪಾಯಿಗಳಿದ್ದರೆ ಸಾಮಾನ್ಯ ಚಿತ್ರಮಂದಿರಗಳಲ್ಲಿ ಕೇವಲ 150 ರೂಪಾಯಿಗಳಿವೆ. ಒಟ್ಟಾರೆಯಾಗಿ ನೋಡುವುದಾದರೆ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆಗಳು ಹೆಚ್ಚಾಗಿರುವುದು ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿಯೇ ಹೆಚ್ಚು. ಈ ನಗರಗಳಲ್ಲಿ 500ಕ್ಕೆ ಕಡಿಮೆ ಟಿಕೆಟ್‌ಗಳೇ ಇಲ್ಲ ಎನ್ನಬಹುದು. ಕೇವಲ ಚಿತ್ರಮಂದಿರಗಳಲ್ಲಿ ಮಾತ್ರ.
‘ಧುರಂಧರ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ, ಸಿನಿಮಾದ ಪ್ರಂಈಯರ್ ಶೋ ಮಾರ್ಚ್ 18 ರಂದು ಸಂಜೆಯಿಂದ ಪ್ರದರ್ಶನಗೊಳ್ಳಲಿದೆ. ಸಿನಿಮಾದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಅವರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ