
ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ’ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಹಲವು ಹಳೆಯ ದಾಖಲೆಗಳನ್ನು ಪುಡಿಗಟ್ಟಿದ ‘ಧುರಂಧರ್’ ಹಲವು ಹೊಸ ದಾಖಲೆಗಳನ್ನು ಬರೆಯಿತು. ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆ ಆಗಿದ್ದರೂ ಸಹ ಭಾಷೆಯ ಹಂಗಿಲ್ಲದೆ ದಕ್ಷಿಣದ ರಾಜ್ಯಗಳ ಜನರೂ ಸಹ ನೋಡಿ ಸಂಭ್ರಮಿಸಿದರು. ಆದರೆ ಸಿನಿಮಾವನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಆಗಲೂ ಸಹ ಕೆಲವರ ಮನವಿ ಮಾಡಿದರು. ಸಿನಿಮಾವನ್ನು ಆಂಧ್ರ-ತೆಲಂಗಾಣದಲ್ಲಿ ಬಿಡುಗಡೆ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಸಹ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು. ಇದೀಗ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ, ಈ ಬಾರಿ ಮುಂಚಿತವಾಗಿ ಸಜ್ಜಾಗಿರುವ ಚಿತ್ರತಂಡ, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುತ್ತಿದೆ.
‘ಧುರಂಧರ’ ಸಿನಿಮಾಕ್ಕೆ ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ ಮತ್ತು ತೆಲುಗು ರಾಜ್ಯಗಳಿಂದ ಒಳ್ಳೆಯ ಕಲೆಕ್ಷನ್ ಹರಿದು ಬಂದಿತ್ತು. ಅಂತಹ ಸಿನಿಮಾವನ್ನು ಹಿಂದಿಯ ಜೊತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ. ನಾಳೆ (ಮಾರ್ಚ್ 07) ಬಿಡುಗಡೆ ಆಗುತ್ತಿರುವ ಸಿನಿಮಾದ ಟ್ರೈಲರ್ ಸಹ ಹಿಂದಿ ಸೇರಿದಂತೆ ಇತರೆ ದಕ್ಷಿಣ ಭಾಷೆಗಳಲ್ಲಿ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೇವಲ ಹಿಂದಿಯಲ್ಲಿ ಮಾತ್ರ ಬಿಡುಗಡೆ ಮಾಡದೆ ಬೇರೆ ಭಾಷಿಕ ಸಿನಿಮಾ ಪ್ರೇಮಿಗಳಿಗೆ ಗೌರವ ಕೊಡುವ ಕಾರ್ಯವನ್ನು ‘ಧುರಂಧರ’ ಚಿತ್ರತಂಡ ಮಾಡಿದೆ.
ಇದನ್ನೂ ಓದಿ:’ಧುರಂಧರ’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣವೀರ್ ಸಿಂಗ್
2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ’ ಸಿನಿಮಾ ದಕ್ಷಿಣದ ರಾಜ್ಯಗಳಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಭಾರತದಲ್ಲಿ ‘ಧುರಂಧರ’ ಸಿನಿಮಾ ಸುಮಾರು 900 ಕೋಟಿ ರೂಪಾಯಿಗಳಿಕೆ ಮಾಡಿತ್ತು. ಸುಮಾರು 250 ರಿಂದ 300 ಕೋಟಿ ಹಣ ದಕ್ಷಿಣ ಭಾರತದ ರಾಜ್ಯಗಳಿಂದಲೇ ಬಂದಿತ್ತು. ಕರ್ನಾಟಕ ಒಂದರಲ್ಲೇ ಈ ಸಿನಿಮಾಕ್ಕೆ 70 ರಿಂದ 90 ಕೋಟಿ ರೂ. ಅದೂ ಕೇವಲ ಹಿಂದಿ ವರ್ಷನ್ಗೆ. ಈ ಬಾರಿಯ ‘ಧುರಂಧರ 2’ ಸಿನಿಮಾಕ್ಕೂ ಇನ್ನೂ ಹೆಚ್ಚಿನ ಗಳಿಕೆ ಆಗಬಹುದು.
‘ಧುರಂಧರ್ 2’ ಸಿನಿಮಾವು ‘ಧುರಂಧರ’ ಸಿನಿಮಾದ ಭಾಗವಾಗಿದ್ದು, ‘ಧುರಂಧರ’ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಜೊತೆಗೆ ಇನ್ನೂ ಕೆಲವು ಪಾತ್ರಗಳು ಈ ಸಿನಿಮಾಕ್ಕೆ ಮುಂದಿನಿವೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ