
ರಣವೀರ್ ಸಿಂಗ್ ನಟನೆಯ ‘ಧುರಂಧರ 2’ ಸಿನಿಮಾ ಹೊಸ ದಾಖಲೆ ಬರೆಯಲು ರೆಡಿ ಆಗಿದೆ. ಈ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಹಿಂದಿನ ದಿನ ಅಂದರೆ 18ರಂದು ಸಿನಿಮಾಗೆ ಮಾರ್ಚ್‌ನಲ್ಲಿ ಸಾಕಷ್ಟು ಪ್ರೀಮಿಯರ್ ಶೋಗಳನ್ನು ಯೋಜಿಸಲಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶೋ ಹೌಸ್ ಫುಲ್ ಆಗಿದೆ. ಇದರಿಂದ ಸಿನಿಮಾಗೆ ದೊಡ್ಡ ಮೊತ್ತದಲ್ಲಿ ಹಣ ಹರಿದು ಬರುತ್ತಿದೆ. ಅಡ್ವಾನ್ಸ್ ಬುಕಿಂಗ್ ನಿಂದ ಚಿತ್ರಕ್ಕೆ ವಿಶ್ವಾದ್ಯಂತ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
‘ಧುರಂಧರ 2’ ಸಿನಿಮಾದ ಎಲ್ಲಾ ಟಿಕೆಟ್‌ಗಳನ್ನು ಬಿಡುಗಡೆ ಮಾಡಿಲ್ಲ. ಕೇವಲ ಮಾರ್ಚ್ 18 ರ ಟಿಕೆಟ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಮಾರ್ಚ್ 19 ರ ಟಿಕೆಟ್ ಅನ್ನು ಕೂಡ ಬುಕಿಂಗ್ ಮಾಡುವ ಅವಕಾಶವನ್ನು ನೀಡಿದರೆ ಸಿನಿಮಾ ಅಬ್ಬರಿಸೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ 4.7 ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ. ಇದರಿಂದ ಭಾರತದಲ್ಲಿ 24.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಪವನ್ ಕಲ್ಯಾಣ್ ಅವರ ‘ಓಜಿ’ ಪ್ರೀಮಿಯರ್ ಶೋನಿಂದ 25 ಕೋಟಿ ರೂಪಾಯಿ ಗಳಿಸಿತ್ತು ಸಿನಿಮಾ. ಆ ದಾಖಲೆಯನ್ನು ‘ಧುರಂಧರ 2’ ಸುಲಭದಲ್ಲಿ ಬ್ರೇಕ್ ಮಾಡಲಿದೆ ಎಂದು ಹೇಳಲಾಗಿದೆ.
‘ಧುರಂಧರ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಕುತೂಹಲ ಮೂಡಿದೆ. ‘ಧುರಂಧರ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ನಟಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ. ‘ಧುರಂಧರ’ ಚಿತ್ರದಲ್ಲಿ ನಟ ಅಕ್ಷಯ್ ಖನ್ನಾ ರೆಹಮಾನ್ ದಕೈತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲ ಭಾಗದಲ್ಲಿ ರೆಹಮಾನ್ ಕೊಲ್ಲಲ್ಪಟ್ಟರು. ಆದರೆ ಅವರು ‘ಧುರಂಧರ 2’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಿಲ್ಲ.
ಇದನ್ನೂ ಓದಿ: ಸಾವಿರ ಪರದೆಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ ‘ಧುರಂಧರ’ ಸಿನಿಮಾ
ಈ ಬಾರಿ, ರೆಹಮಾನ್ ದಕೈತ್ ಅವರ ಇತಿಹಾಸವು ಚಿತ್ರದಲ್ಲಿ ಹೇಳುವ ಸಾಧ್ಯತೆಯಿದೆ. ಟ್ರೇಲರ್‌ನಲ್ಲಿ ಅಕ್ಷಯ್ ಖನ್ನಾ ಅವರಿಗೆ ತೋರಿಸಿಲ್ಲ. ಅದಾದ ನಂತರ, ಅನೇಕ ಚರ್ಚೆಗಳು ಹುಟ್ಟಿಕೊಂಡಿವೆ… ಅನೇಕ ಜನರು ‘ಧುರಂಧರ್ 2’ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.