
‘ಧುರಂಧರ 2’ ಸಿನಿಮಾ ರಿಲೀಸ್‌ಗೆ ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಮಾರ್ಚ್ 18 ರಂದು ಸಂಜೆ 5 ಗಂಟೆಗೆ ಪ್ರೀಮಿಯರ್ ಶೋಗಳು ಪ್ರಾರಂಭವಾಗುತ್ತಿದೆ. ಮಾರ್ಚ್ 19ರಂದು ಸಿನಿಮಾ ಅಧಿಕೃತವಾಗಿ ತೆರೆಗೆ ಬರುತ್ತಿದೆ. ಈ ಟಿಕೆಟ್‌ಗಳು ಸುಮಾನಿ ರೀತಿಯಲ್ಲಿ ಬುಕ್ ಆಗುತ್ತಿದೆ. ಮಾರ್ಚ್ 12 ರಂದು ‘ಧುರಂಧರ’ ರೀ-ರಿಲೀಸ್ ಆಗಿದೆ ಎಂಬುದು ಮತ್ತೊಂದು ವಿಶೇಷ. ಈ ಮಧ್ಯೆ ‘ಧುರಂಧರ’ ಸಿನಿಮಾ (ಧುರಂಧರ) ಹೊಸ ದಾಖಲೆ ಒಂದನ್ನು ಬರೆದಿದೆ. ಥಿಯೇಟರ್ ಅಲ್ಲಿ ಸಿನಿಮಾ 100 ದಿನವನ್ನು ಪೂರ್ಣಗೊಳಿಸುತ್ತಿದೆ. ಕೋವಿಡ್ ಬಳಿಕ ನೂರು ದಿನ ಪೂರೈಸಿದ ಏಕೈಕ ಸಿನಿಮಾ ಇದು ಎಂಬ ಹೆಗ್ಗಳಿಕೆಗೆ ಈ ಚಿತ್ರದ ಪಾತ್ರವಾಗಿದೆ.
ಡಿಸೆಂಬರ್ 5 ರಂದು ‘ಧುರಂಧರ’ ರಿಲೀಸ್ ಆಯಿತು. ಮಾರ್ಚ್ 14 ರಂದು ಸಿನಿಮಾ 100ನೇ ದಿನ ಪೂರೈಸುತ್ತಿದೆ. ಥಿಯೇಟರ್ ನಲ್ಲಿ ಚಿತ್ರ ಗ್ರ್ಯಾಂಡ್ ಆಗಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಿನಿಮಾ ಒಟಿಟಿಗೆ ಕಾಲಿಟ್ಟ ಅನೇಕ ಥಿಯೇಟರ್ ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಾ ಇತ್ತು. ಈಗ ಬ್ಲಾಕ್ ಬಸ್ಟರ್ ಚಿತ್ರ ಹೊಸ ದಾಖಲೆ ಬರೆಯಲು ರೆಡಿ ಆಗಿದೆ. ಬಾಲ್ಡ್ ಚಿತ್ರ ಮಾಡಿದ ಈ ಸಾಧನೆಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಒಟಿಟಿಗೆ ಕಾಲಿಟ್ಟ ಬಳಿಕ ಚಿತ್ರ ಥಿಯೇಟರ್ ನಿಂದ ಕಾಲ್ಕೀಳುತ್ತವೆ. ಆದರೆ ‘ಧುರಂಧರ’ ಸಿನಿಮಾ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ಚಿತ್ರವನ್ನು ಒಟಿಟಿ ಜೊತೆಗೆ ಥಿಯೇಟರ್ ನಲ್ಲೂ ವೀಕ್ಷಿಸಿದ್ದಾರೆ ಅನ್ನೋದು ವಿಶೇಷ. ಅಚ್ಚರಿಯ ವಿಷಯ ಎಂದರೆ ವಿಶ್ವಾದ್ಯಂತ ಸಾವಿರ ಪರದೆಗಳಲ್ಲಿ ಈ ಚಿತ್ರ ರನ್ ಆಗುತ್ತಿದೆ, 1250 ಶೋಗಳನ್ನು ಚಿತ್ರಕ್ಕೆ ನೀಡಲಾಗಿದೆ.
ಇದನ್ನೂ ಓದಿ: ‘ಧುರಂಧರ 2’ ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು ‘ಧುರಂಧರ’
ಇನ್ನು, ಸೀಕ್ವೆಲ್ ರಿಲೀಸ್ ಸಂದರ್ಭದಲ್ಲಿ ಮೊದಲ ಪಾರ್ಟ್ ರನ್ ಆಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ‘ಧುರಂಧರ’ ರಿಲೀಸ್ ಆದ ಬಳಿಕ ‘ಧುರಂಧರ 2’ ತುಂಬಾ ಕಡಿಮೆ ಅವಧಿಯ ರಿಲೀಸ್ ಆಗುತ್ತಿದೆ. ಇದು ಕೂಡ ಈ ಹೊಸ ದಾಖಲೆ ನಿರ್ಮಿಸಲು ಕಾರಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.