
ಆದಿತ್ಯ ಧರ್ ನಿರ್ದೇಶನದ ‘ಧುರಂಧರ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದಷ್ಟೇ ಅಲ್ಲದೆ, ‘ಪೀಕ್ ಡಿಟೇಲಿಂಗ್’ (ಪೀಕ್ ಡಿಟೇಲಿಂಗ್) ನಿಂದಾಗಿ ಸಿನೆಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಎಸ್‌ಪಿ ಅಸ್ಲಾಂ ಅವರ ಹತ್ಯೆಯ ದೃಶ್ಯವು 2014ರಲ್ಲಿ ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಪ್ರತಿಬಿಂಬಿಸಿದೆ ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಎಸ್‌ಪಿ ಅಸ್ಲಾಂ ಅವರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಪ್ರತಿಯೊಂದು ಹಂತವು 2014 ರ ಸಿಸಿಟಿವಿ/ಡ್ಯಾಶ್‌ಕ್ಯಾಮ್ ದೃಶ್ಯಗಳನ್ನೇ. ನಿರ್ದೇಶಕ ಆದಿತ್ಯ ಧರ್ ಅವರು ಈ ದೃಶ್ಯಕ್ಕಾಗಿ ಈ ತಿಂಗಳುಗಟ್ಟಲೆ ಸಂಶೋಧನೆ ಮಾಡಿದ್ದಾರೆ. ವಾಸ್ತವದಲ್ಲಿ ನಡೆದ ಗುಂಡಿನ ಚಕಮಕಿ, ದಾಳಿಕೋರರ ಚಲನವಲನ ಮತ್ತು ಅಂದಿನ ಭೀಕರ ವಾತಾವರಣವನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. 2014 ರ ಆ ನೈಜ ಮತ್ತು ಸಿನಿಮಾದ ಕ್ಲಿಪ್‌ಗಳನ್ನು ಒಟ್ಟಾಗಿ ಸೇರಿಸಿ ನೆಟ್ಟಿಗರು “ಮಾಸ್ಟರ್‌ಪೀಸ್ ಸಂಶೋಧನೆ” ಎಂದು ಶ್ಲಾಘಿಸುತ್ತಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ