ರಣವೀರ್ ನಟನೆಯ ‘ಧುರಂಧರ್ 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

ರಣವೀರ್ ನಟನೆಯ ‘ಧುರಂಧರ್ 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ


ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ‘ಧುರಂಧರ 2’ (ಧುರಂಧರ 2) Vs ‘ಟಾಕ್ಸಿಕ್’ ಎಂಬ ಚರ್ಚೆ ಕಾಣಿಸುತ್ತದೆ. ಇಂದು (ಮಾರ್ಚ್ 3) ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಆದರೆ, ನಂತರ ಅದನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ಕಾರಣ ಆಗಿದ್ದು ಚಂದ್ರ ಗ್ರಹಣ ಎಂದು ವರದಿಯಾಗಿದೆ. ಈ ಬಗ್ಗೆ ಬಾಲಿವುಡ್ ಹಂಗಾಮ ವರದಿ ಮಾಡಿದೆ. ಬಾಲಿವುಡ್ ನವರೂ ಇದನ್ನು ಬಹುವಾಗಿ ನಂಬುತ್ತಾರೆ ಎಂಬ ವಿಷಯ ಅನೇಕರಿಗೆ ಅಚ್ಚರಿ ತಂದಿದೆ.

ಕೆಲವರ ನಂಬಿಕೆ ಪ್ರಕಾರ ಗ್ರಹಣ ದಿನವನ್ನು ಒಳ್ಳೆಯ ದಿನ ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದ ಸಾಕಷ್ಟು ಪೂಜೆಗಳನ್ನು ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡೋದಿಲ್ಲ. ಗ್ರಹಣದ ಬಳಿಕ ಸ್ನಾನ ಮಾಡಿ, ಮನೆಯನ್ನು ಶುಚಿಗೊಳಿಸುವವರೂ ಇದ್ದಾರೆ. ಹೀಗಾಗಿ, ಈ ದಿನ ‘ಧುರಂಧರ 2’ ಟ್ರೇಲರ್ ರಿಲೀಸ್ ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಚಿತ್ರತಂಡಕ್ಕೆ ಬಂದಂತೆ ಇದೆ.

ಮಾರ್ಚ್ 3 ರಂದು ಟ್ರೇಲರ್ ಲಾಂಚ್ ಮಾಡಬೇಕು ಎಂಬ ಆಲೋಚನೆಯನ್ನು ತಂಡ ಹೊಂದಿದ್ದು ನಿಜವೇ ಆಗಿದೆ. ಆದರೆ, ಗ್ರಹಣದ ಸಮಯ ಬೆಳಿಗ್ಗೆ 9.30 ರಿಂದ ಆರಂಭವಾಗಿ ಸಂಜೆ 6.46 ರವರೆಗೆ ಇದೆ. ಹೀಗಾಗಿ, ಈ ಆಲೋಚನೆಯನ್ನು ಕೈ ಬಿಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್ ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ 2’

ಸದ್ಯ ಕೇಳಿ ಬರುತ್ತಿರುವ ಹೊಸ ವರದಿ ಪ್ರಕಾರ ಮಾರ್ಚ್ 5 ಅಥವಾ 6ರಂದು ಟ್ರೇಲರ್ ಲಾಂಚ್ ಆಗಲಿದೆಯಂತೆ. ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅಲ್ಲಿ ಈ ಟ್ರೇಲರ್ ರಿವೀಲ್ ಆಗುವ ಸಾಧ್ಯತೆ ಇದೆ. ‘ಟಾಕ್ಸಿಕ್’ ಸಿನಿಮಾ ಟ್ರೇಲರ್ ಮಾರ್ಚ್ 8 ರಂದು ರಿವೀಲ್ ಆಗುವುದು ಖಚಿತವಾಗಿದೆ. ಹೀಗಾಗಿ, ಅದಕ್ಕೂ ಮೊದಲೇ ‘ಧುರಂಧರ 2’ ಟ್ರೇಲರ್ ರಿಲೀಸ್ ಆದರೆ, ಚಿತ್ರಕ್ಕೆ ಹೆಚ್ಚು ಸಹಕಾರಿ ಆಗಬಹುದು. ಒಂದೊಮ್ಮೆ ಎರಡೂ ಟ್ರೇಲರ್‌ಗಳು ಒಂದೇ ದಿನದಲ್ಲಿ ಬಿಡುಗಡೆ ಕಂಡರೆ ಯೂಟ್ಯೂಬ್ ನಲ್ಲೂ ಇವು ಕ್ಲ್ಯಾಶ್ ಆದಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *