Headlines

‘ಧುರಂಧರ್ 3’ ಎಫೆಕ್ಟ್​?; ‘ಆಪರೇಷನ್ ಸಿಂಧೂರ್’ ಸಿನಿಮಾ ಘೋಷಣೆ ಮಾಡಿದ ವಿವೇಕ್ ಅಗ್ನಿಹೋತ್ರಿ

‘ಧುರಂಧರ್ 3’ ಎಫೆಕ್ಟ್​?; ‘ಆಪರೇಷನ್ ಸಿಂಧೂರ್’ ಸಿನಿಮಾ ಘೋಷಣೆ ಮಾಡಿದ ವಿವೇಕ್ ಅಗ್ನಿಹೋತ್ರಿ


'ಧುರಂಧರ 3' ಎಫೆಕ್ಟ್?; 'ಆಪರೇಷನ್ ಸಿಂಧೂರ್' ಸಿನಿಮಾ ಘೋಷಣೆ ಮಾಡಿದ ವಿವೇಕ್ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ (ವಿವೇಕ್ ಅಗ್ನಿಹೋತ್ರಿ) ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಗಮನ ಸೆಳೆದರು. ಕಾಶ್ಮೀರಿ ಪಂಡಿತರ ಮೇಲೆ ನಡೆದ ದಾಳಿಯ ಕುರಿತು ಈ ಸಿನಿಮಾ ಇತ್ತು. ನಂತರ ಬಂದ ‘ದಿ ವ್ಯಾಕ್ಸಿನ್ ವಾರ್’ ಹಾಗೂ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಗಳು ಗಮನ ಸೆಳೆಯಲು ವಿಪಲವಾದವು. ಈಗ ವಿವೇಕ್ ಅವರು ಪೆಹಲ್ಗಾಮ್ ದಾಳಿ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರು ಇಡಲಾಗಿದೆ. ಪೆಹಲ್ಗಾಮ್ ದಾಳಿ ಬಳಿಕ ನಡೆಯುವ ಘಟನೆಗಳನ್ನು ವಿವೇಕ್ ಕಟ್ಟಿಕೊಡಲಿದ್ದಾರೆ.

ಕಾಶ್ಮೀರದ ಪೆಹಲ್ಗಾಮ್ ಅಲ್ಲಿ ಉಗ್ರರು ದಾಳಿ ಮಾಡಿದರು. ವಿವಾಹಿತರಲ್ಲಿ ಪುರಷರನ್ನೇ ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಯಿತು. ಒಟ್ಟೂ 26 ಜನವರಿ ಟೂರಿಸ್ಟ್‌ಗಳನ್ನು ಕೊಲ್ಲಲಾಯಿತು. ಈ ದಾಳಿ ಇಡೀ ಭಾರತವೇ ತತ್ತರಿಸುವಂತೆ ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಭಾಗಗಳ ಮೇಲೆ ಭಾರತ ದಾಳಿ ನಡೆಸಿತು. ಈ ಘಟನೆ ಹಿನ್ನೆಲೆಯಲ್ಲಿ ‘ಆಪರೇಷನ್ ಸಿಂಧೂರ್’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

‘ಕೆಲವು ಕಥೆಗಳನ್ನು ಆಯ್ಕೆ ಮಾಡಲಾಗುವುದಿಲ್ಲ, ಅವು ನಿಮ್ಮನ್ನು ಆಯ್ಕೆ ಮಾಡುತ್ತವೆ. ಆಪರೇಷನ್ ಸಿಂಧೂರ್ ಅಂತಹ ಕಥೆಗಳಲ್ಲಿ ಒಂದು. ಪ್ರಾಮಾಣಿಕತೆ, ಧೈರ್ಯ ಮತ್ತು ಜವಾಬ್ದಾರಿಯಿಂದ ಹೇಳಬೇಕಾದ ಕಥೆ. ಇದು ಕೇವಲ ಸಿನಿಮಾ ಅಲ್ಲ, ಇದು ವಿಷಯಗಳನ್ನು ಹೊರಜಗತ್ತಿಗೆ ತೋರಿಸುತ್ತದೆ. ಒಂದು ರಾಷ್ಟ್ರದಲ್ಲಿ ಇಷ್ಟು ದೊಡ್ಡ ಘಟನೆ ನಡೆದಾಗ ಅವರಿಗೆ ಸತ್ಯಗಳನ್ನು ಹೇಳುವುದು ಮುಖ್ಯವಾಗುತ್ತದೆ’ ಎಂದು ನಿರ್ಮಾಪಕ ಭೂಷಣ್ ಕುಮಾರ್ ಹೇಳಿದ್ದಾರೆ.

ನಿರ್ದೇಶಕ-ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ‘ಭಾರತವು ಪೆಹಲ್ಗಾಮ್ ಭಯೋತ್ಪಾದನಾ ದಾಳಿಗೆ ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನವನ್ನು ಶಿಕ್ಷಿಸಿದೆ, ಆಧುನಿಕ ಯುದ್ಧದಲ್ಲೂ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಕುರಿತು ಸಿನಿಮಾ ಮಾಡಿರುವ ವಿವೇಕ್ ಅಗ್ನಿಹೋತ್ರಿ

ಸದ್ಯ, ‘ಧುರಂಧರ 2’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಭಾರತ ನಡೆಸಿದ ಆಪರೇಷನ್ ಆಧಾರವನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಿದೆ. ಈ ವಿವೇಕ್ ಅಗ್ನಿಹೋತ್ರಿ ಈ ಚಿತ್ರ ಪ್ರಕಟಿಸಿದರೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *