ಡಿಸೆಂಬರ್ 2ನೇ ವಾರದಲ್ಲಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಕ್ಲ್ಯಾಶ್ ಏರ್ಪಟ್ಟಿದೆ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿ ಒಂದಕ್ಕೊಂದು ಪೈಪೋಟಿ ನೀಡುತ್ತಿವೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ (ದ ಡೆವಿಲ್)ರಣವೀರ್ ಸಿಂಗ್ ಅಭಿನಯದ ‘ಧುರಂಧರ’ (ಧುರಂಧರ) ಹಾಗೂ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ (ಅಖಂಡ 2) ಸಿನಿಮಾಗಳು ಪೈಪೋಟಿಗೆ ಇಳಿದಿವೆ. ಈ ಮೂರೂ ಸಿನಿಮಾಗಳು ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ. ಈ ರೇಸ್ ನಲ್ಲಿ ಯಾರಿಗೆ ಹೆಚ್ಚು ಲಾಭವಾಗುತ್ತಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
‘ಧುರಂಧರ’ ಸಿನಿಮಾ ಬಿಡುಗಡೆ ಆಗಿದ್ದು ಡಿಸೆಂಬರ್ 5 ರಂದು. ದಿನ ಕಳೆದಂತೆ ಈ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿದೆ. ಉತ್ತಮ ವಿಮರ್ಶೆ ಬಂದ ಡಿಸೆಂಬರ್ 2ನೇ ವಾರ ಈ ಸಿನಿಮಾದ ಹವಾ ಜೋರಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಆದ ಅಖಂಡ 2 ಮತ್ತು ದಿ ಡೆವಿಲ್ ಸಿನಿಮಾಗಳಿಗೆ ‘ಧುರಂಧರ’ ಸಿಕ್ಕಾಪಟ್ಟೆ ಪೈಪೋಟಿ ನೀಡುತ್ತಿದೆ.
ಡಿಸೆಂಬರ್ 11ರಂದು ‘ದಿ ಡೆವಿಲ್’ ಸಿನಿಮಾ ತೆರೆಕಂಡಿತು. ಈ ಚಿತ್ರದಲ್ಲಿ ದರ್ಶನ್ ಅವರು ದ್ವಿಪಾತ್ರ ಮಾಡಿದ್ದಾರೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ರಾಜಕೀಯ ಕಥಾಹಂದರ ಈ ಚಿತ್ರದಲ್ಲಿದೆ. ಸಿನಿಮಾಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ ಈ ಸಿನಿಮಾ ಅಂದಾಜು 10 ಕೋಟಿ ರೂಪಾಯಿ ಗಳಿಸಿದೆ. ಕರ್ನಾಟಕದಲ್ಲಿ ‘ಧುರಂಧರ’ ಪೈಪೋಟಿ ‘ದಿ ಡೆವಿಲ್’ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.
ನಂದಮೂರಿ ಬಾಲಕೃಷ್ಣ ಅವರು ‘ಅಖಂಡ 2’ ಸಿನಿಮಾದಲ್ಲಿ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಎಂದಿನ ಶೈಲಿಯಲ್ಲಿ ಲಾಜಿಕ್ ಇಲ್ಲದೇ ಮ್ಯಾಜಿಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಬಂದಿದೆ. ಬಾಕ್ಸ್ ಆಫೀಸ್ ಕ್ಲ್ಯಾಶ್ ನಲ್ಲಿ ಈ ಸಿನಿಮಾಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಅಖಂಡ 2’: ಮ್ಯಾಜಿಕ್ ಮಾತ್ರವನ್ನೇ ನಂಬಿಕೊಂಡ ಲಾಜಿಕ್ ಲೆಸ್ ಸಿನಿಮಾ
ಮೂರೂ ಸಿನಿಮಾಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ‘ಧುರಂಧರ’ ಬಹಳ ಗಟ್ಟಿಯಾಗಿ ನಿಂತಿದೆ. ಎರಡನೇ ವಾರದಲ್ಲೂ ಈ ಸಿನಿಮಾದ ಕ್ರೇಜ್ ಜೋರಾಗಿದೆ. ವೀಕ್ಷಿಸು ಮತ್ತೆ ಮತ್ತೆ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಮೊದಲ ವೀಕೆಂಡ್ ಬಳಿಕ 2ನೇ ವೀಕೆಂಡ್ ನಲ್ಲೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಆಗಲಿದೆ. ಈ ಸಿನಿಮಾಗೆ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ‘ದಿ ಡೆವಿಲ್’ ಸಿನಿಮಾಗೆ ವಿಶ್ರಪ್ರತಿಕ್ರಿಯೆ ಹಾಗೂ ‘ಅಖಂಡ 2’ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿರುವುದರಿಂದ ‘ಧುರಂಧರ’ ಸಿನಿಮಾಗೆ ಲಾಭವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.