Headlines

ಭಾರತದಲ್ಲೇ 500 ಕೋಟಿ ರೂ. ದಾಟಿದ ಧುರಂಧರ್ ಕಲೆಕ್ಷನ್: ಮುಂದಿನ ಟಾರ್ಗೆಟ್ ಏನು?

ಭಾರತದಲ್ಲೇ 500 ಕೋಟಿ ರೂ. ದಾಟಿದ ಧುರಂಧರ್ ಕಲೆಕ್ಷನ್: ಮುಂದಿನ ಟಾರ್ಗೆಟ್ ಏನು?


ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ’ (ಧುರಂಧರ) ಸಿನಿಮಾ ಇಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಯಾರೂ ಇರಲಿಲ್ಲ. ಆರಂಭದಲ್ಲಿ ಸಾಧಾರಣ ಓಪನಿಂಗ್ ಈ ಸಿನಿಮಾ, ನಂತರ ಭಾರಿ ಕಲೆಕ್ಷನ್ ಮಾಡಲು ಆರಂಭಿಸಿತು. ನೋಡನೋಡುತ್ತಿದ್ದಂತೆಯೇ ಭಾರತದ ಬಾಕ್ಸ್ ಆಫೀಸ್ ನಲ್ಲಿ ‘ಧುರಂಧರ’ ಸಿನಿಮಾದ ಕಲೆಕ್ಷನ್ (ಧುರಂಧರ್ ಬಾಕ್ಸ್ ಆಫೀಸ್ ಕಲೆಕ್ಷನ್) 500 ಕೋಟಿ ರೂಪಾಯಿ ಮೀರಿದೆ. ಅನೇಕ ಸಿನಿಮಾಗಳ ದಾಖಲೆಗಳನ್ನು ಈ ಚಿತ್ರ ಮುರಿದಿದೆ. ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರಿಗೆ ಈ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ.

‘ಧುರಂಧರ’ ಸಿನಿಮಾ ಬಿಡುಗಡೆ ಆಗಿ 17 ದಿನ ಕಳೆದಿವೆ. ಹಾಗಿದ್ದರೂ ಕೂಡ ಈ ಚಿತ್ರದ ನಾಗಾಲೋಟ ನಿಂತಿಲ್ಲ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮುಂದುವರಿದಿದೆ. ವೀಕೆಂಡ್ ಆಗಿದ್ದು ಈ ದಿನಗಳಲ್ಲಿ ಕೂಡ ಈ ಸಿನಿಮಾ ಪ್ರತಿ ದಿನ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವುದು ವಿಶೇಷ.

3ನೇ ಶನಿವಾರ, ಅಂದರೆ 16ನೇ ದಿನ ‘ಧುರಂಧರ’ ಸಿನಿಮಾ ಅಂದಾಜು 33.5 ಕೋಟಿ ರೂಪಾಯಿ ಗಳಿಸಿದೆ. sacnilk ನೀಡಿರುವ ಆರಂಭಿಕ ವರದಿಗಳ ಪ್ರಕಾರ, 16 ದಿನಕ್ಕೆ ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಭಾನುವಾರ (ಡಿಸೆಂಬರ್ 21) ಕೂಡ ಈ ಸಿನಿಮಾದ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ.

ಹಲವು ಕಡೆಗಳಲ್ಲಿ ‘ಧುರಂಧರ’ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನೂ ಹಲವು ದಿನಗಳ ಕಾಲ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ. ಆದ್ದರಿಂದ ಈ ಚಿತ್ರ ಅನಾಯಾಸವಾಗಿ 600 ಕೋಟಿ ರೂಪಾಯಿ ಗಳಿಕೆ ಮಾಡಲಿದೆ. ಹೊಸ ಸಿನಿಮಾಗಳು ಬಿಡುಗಡೆಯಾದರೂ ಕೂಡ ‘ಧುರಂದರ್’ ಅಬ್ಬರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಬ್ಯಾನ್ ಮಧ್ಯೆಯೂ ಕಳ್ಳ ಮಾರ್ಗದಲ್ಲಿ ‘ಧುರಂಧರ’ ವೀಕ್ಷಿಸಿದ 20 ಲಕ್ಷ ಪಾಕ್ ಮಂದಿ

‘ಗದರ್ 2’ (525 ಕೋಟಿ), ಪಠಾಣ್ (543 ಕೋಟಿ), ‘ಅನಿಮಲ್’ (553 ಕೋಟಿ) ಸಿನಿಮಾಗಳನ್ನು ಶೀಘ್ರದಲ್ಲೇ ‘ಧುರಂಧರ’ ಚಿತ್ರ ಹಿಂದಿಕ್ಕಲಿದೆ. ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳಾದ ‘ಸ್ತ್ರೀ’ (598 ಕೋಟಿ), ‘ಛಾವ’ (601 ಕೋಟಿ) ಹಾಗೂ ‘ಜವಾನ್’ (640) ದಾಖಲೆಯನ್ನು ಮುರಿಯುವ ಟಾರ್ಗೆಟ್ ಈಗ ‘ಧುರಂಧರ’ ಸಿನಿಮಾದ ಮುಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *