ರಣವೀರ್ ಸಿಂಗ್ ನಟನೆಯ ‘ಧುರಂದರ್’ (ಧುರಂಧರ) 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ವಿಶ್ವ ಮಟ್ಟದ ಕಲೆಕ್ಷನ್ 935 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ‘ಕಾಂತಾರ: ಅಧ್ಯಾಯ 1’ ಚಿತ್ರದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿಬಿಟ್ಟಿದೆ. ಈ ಚಿತ್ರ ಸುಲಭದಲ್ಲಿ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ. ಚಿತ್ರ ತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ರಿಷಬ್ ಅವರೇ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿತ್ತು. ಈ ದಾಖಲೆಯನ್ನು ಈಗ ‘ಧುರಂಧರ’ ಮುರಿದು ಹಾಕಿದೆ.
‘ಕಾಂತಾರ: ಅಧ್ಯಾಯ 1’ ಚಿತ್ರದ ಒಟ್ಟಾರೆ ಕಲೆಕ್ಷನ್ 850 ಕೋಟಿ ರೂಪಾಯಿ ಆಗುತ್ತಿದೆ. ‘ಧುರಂಧರ’ ಕಲೆಕ್ಷನ್ 900 ಕೋಟಿ ರೂಪಾಯಿ ದಾಟಿದೆ. ಹಲವು ದೇಶಗಳಲ್ಲಿ ಸಿನಿಮಾ ‘ಧುರಂಧರ’ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾ ಕಲೆಕ್ಷನ್ ತಗ್ಗಿಲ್ಲ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂಪಾಯಿ ಗಳಿಸಿದೆ.
20ನೇ ದಿನವೂ ‘ಧುರಂಧರ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 17 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ವೀಕೆಂಡ್ ಒಳಗೆ ಚಿತ್ರ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸೋ ಸಾಧ್ಯತೆ ಇದೆ. ಈ ಮೂಲಕ ಈ ವರ್ಷದ ಮೊದಲ ಸಾವಿರ ಕೋಟಿ ರೂಪಾಯಿ ಕ್ಲಬ್ ಸಿನಿಮಾ ಇದಾಗೋ ಸಾಧ್ಯತೆ ಇದೆ.
ಇದನ್ನೂ ಓದಿ: ‘ಧುರಂಧರ’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?
‘ಧುರಂಧರ’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಆದಿತ್ಯ ಧಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಾಕಷ್ಟು ನೆಗೆಟಿವ್ ಟಾಕ್ ಪಡೆದಿತ್ತು. ಆದಾಗ್ಯೂ ‘ಧುರಂಧರ’ ಗೆದ್ದು ಬೀಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.