Headlines

25 ವರ್ಷ ಹಳೆ ದಾಖಲೆ ಮುರಿದ ‘ಧುರಂಧರ್’: ಏನದು ದಾಖಲೆ?

25 ವರ್ಷ ಹಳೆ ದಾಖಲೆ ಮುರಿದ ‘ಧುರಂಧರ್’: ಏನದು ದಾಖಲೆ?


ರಣವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಕೆಲವು ದೊಡ್ಡ ಸಿನಿಮಾಗಳ ದಾಖಲೆಗಳನ್ನು ಮುರಿದು ಹಾಕಿದೆ. ‘ಧುರಂಧರ’ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಕೆಜಿಎಫ್ 2’, ‘ಆರ್‌ಆರ್‌ಆರ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಿದ್ದು, ‘ಪುಷ್ಪ 2’ ದಾಖಲೆಯನ್ನು ಮುರಿಯುವಷ್ಟು ದಾಪುಗಾಲು ಹಾಕುತ್ತಿದೆ. ‘ಧುರಂಧರ’ ಸಿನಿಮಾ ಹೊಸ ಸಿನಿಮಾಗಳ ದಾಖಲೆಗಳು, ಹಳೆ ಸಿನಿಮಾಗಳ ದಾಖಲೆಗಳೂ ಸಹ ಮುರಿಯುತ್ತಿದೆ. ಇದೀಗ 25 ವರ್ಷ ಹಳೆಯ ದಾಖಲೆಯಾಗಿದೆ ‘ಧುರಧಂರ್’ ಸಿನಿಮಾ ಮುರಿದಿದೆ.

‘ಧುರಂಧರ’ ಹಲವು ಹಿಂದಿ ಸಿನಿಮಾಗಳ ಬಾಕ್ಸ್ ಆಫೀಸ್ ದಾಖಲೆಗಳು ಮುರಿದಿವೆ. ಅದರಲ್ಲೂ ಮೊದಲ ವಾರದ ಹೊರತಾಗಿ ಎರಡರಿಂದ ಎಂಟನೇ ವಾರದವರೆಗೆ ಪ್ರತಿ ವಾರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ ‘ಧುರಂಧರ’. ಮೊದಲ ವಾರದ ಅತಿ ಹೆಚ್ಚು ಕಲೆಕ್ಷನ್ ದಾಖಲೆ ಶಾರುಖ್ ಖಾನ್ ‘ಜವಾನ್’ ಮತ್ತು ‘ಪುಷ್ಪ 2’ (ಹಿಂದಿ ಆವೃತ್ತಿ) ಬಳಿಯೇ ಇದೆ. ಇನ್ನು ಹಿಂದಿ ಸಿನಿಮಾವೊಂದು ಎಂಟನೇ ವಾರದಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದ ದಾಖಲೆ 25 ವರ್ಷದ ಹಿಂದಿನ ಸಿನಿಮಾದ ಹೆಸರಿನಲ್ಲಿತ್ತು. ಆ ದಾಖಲೆಯನ್ನು ಮುರಿದಿದೆ ‘ಧುರಂಧರ’.

ಸನ್ನಿ ಡಿಯೋನ್ ನಟನೆಯ ‘ಗದರ್: ಏಕ್ ಪ್ರೇಮ್ ಕಥ’ ಸಿನಿಮಾ ಎಂಟನೇ ವಾರ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎನಿಸಿಕೊಂಡಿತ್ತು. 25 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಗದರ್’ ಸಿನಿಮಾ ಎಂಟನೇ ವಾರದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಗಳಿಸಿತ್ತು. ‘ಗದರ್’ ಬಳಿಕ ಹಿಂದಿಯ ಇನ್ಯಾವುದೇ ಸಿನಿಮಾ ಎಂಟನೇ ವಾರದಲ್ಲಿ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಗಳಿಗೆ ಮಾಡಿರಲಿಲ್ಲ. ಇದೀಗ ‘ಧುರಂಧರ’ ಸಿನಿಮಾ ಎಂಟನೇ ವಾರದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಹಣ ಗಳಿಸಿದೆ. ಆ ಮೂಲಕ ಎಂಟನೇ ವಾರದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎನಿಸಿಕೊಂಡಿದೆ.

ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೂರು ದಾಖಲು

‘ಧುರಂಧರ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಈವರೆಗೆ 1340 ಕೋಟಿ ರೂಪಾಯಿ ಗಳಿಸಿದೆ. ಆ ಮೂಲಕ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎನಿಸಿಕೊಂಡಿದೆ ‘ಧುರಂಧರ’. ಮೊದಲ ಸ್ಥಾನದಲ್ಲಿ ಅಮೀರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ಇದೆ. ಆ ಸಿನಿಮಾ ಸುಮಾರು 2000 ಗಳಿಕೆ ಮಾಡಿತ್ತು. ಬಳಿಕ ‘ಬಾಹುಬಲಿ 2’ ಸಿನಿಮಾ ಇದೆ. ಆ ಸಿನಿಮಾ 1800 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಮೂರನೇ ಸ್ಥಾನದಲ್ಲಿ ‘ಪುಷ್ಪ 2’ ಸಿನಿಮಾ ಇದ್ದು ಆ ಸಿನಿಮಾ 1700 ಕೋಟಿ ಗಳಿಕೆ ಮಾಡಿದೆ.

‘ಧುರಂಧರ’ ಸಿನಿಮಾ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಆತ ಮಾಡುವ ಸಾಹಸಗಳ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನ, ಸಂಜಯ್ ದತ್, ಆರ್ ಮಾಧವನ್ ಇನ್ನೂ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *