‘ಧುರಂಧರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 350+ ಕೋಟಿ ರೂಪಾಯಿ ಬಾಚಿಕೊಂಡು ಮುಂದೆ ಸಾಗುತ್ತಿದೆ. ಈ ಸಿನಿಮಾ ಶೀಘ್ರವೇ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರವನ್ನು ಜನರು ಮೆಚ್ಚಿದ್ದಾರೆ. ಈಗ ‘ಧುರಂಧರ’ ಸಿನಿಮಾದ ಹಾಡು ಗಮನ ಸೆಳೆದಿದೆ. ಈ ಹಾಡು 65 ವರ್ಷಗಳ ಹಿಂದಿನದು.
‘ಧುರಂಧರ’ ಸಿನಿಮಾದಲ್ಲಿ ಬರೋ ‘ನಾ ತೋ ಕಾರವಾನಕಿ ತಲಾಶ ಹೇ’ ಹಾಡು ಗಮನ ಸೆಳೆಯುತ್ತಿದೆ. ರೀಲ್ಸ್ ಮಾಡಲಾಗುತ್ತಿದೆ. ಎಲ್ಲರೂ ಈ ಹಾಡು ಹೊಸದಾಗಿ ಕಂಪೋಸ್ ಮಾಡಿರೋದು ಎಂದು ಭಾವಿಸಿದ್ದರು. ಆದರೆ, ಈ ಹಾಡು ಮೊದಲು ಕಂಪೋಸ್ ಆಗಿದ್ದು ಆರೂವರೆ ಹಿಂದೆ.
ಈ ಸಾಲುಗಳು ಹೃತಿಕ್ ರೋಷನ್ ಅವರ ತಾತ ಅವರ ಕವ್ವಾಲಿಯಿಂದ ತೆಗೆದುಕೊಂಡ ಸಾಲು. ‘ಬಸರತ್ ಕಿ ರಾತ್’ ಸಿನಿಮಾದ ಹಾಡು ಇದು. ಈ ಸಿನಿಮಾ ಬಂದಿದ್ದು 1960ರಲ್ಲಿ. ಮೂಲ ಹಾಡು ಕೂಡ ‘ನಾ ತೋ ಕಾರವಾನಕಿ ತಲಾಶ ಹೇ’ ಎಂದೆಂದಿಗೂ ಇದೆ. ಆ ಕಾಲದ ಅತಿ ಉದ್ದದ ಕವ್ವಾಲಿಯಾಗಿತ್ತು. ಶಾರುಖ್ ಖಾನ್ ಈ ಕವ್ವಾಲಿಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದಾರೆ.
ರೋಷನ್ ಈ ಕವ್ವಾಲಿಯನ್ನು ರಚಿಸಿದ ನಂತರ ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಪತ್ನಿಯೊಂದಿಗೆ ಈ ಬಗ್ಗೆ ಹೇಳಿದ್ದರಂತೆ. ‘ಇಂದು ನಾನು 13 ನಿಮಿಷಗಳ ಕವ್ವಾಲಿಯನ್ನು ರಚಿಸಿದ್ದೇನೆ’ ಎಂದಿದ್ದರು. ಆಗ ಅವರ ಪತ್ನಿ ‘ಇತ್ತೀಚಿನ ದಿನಗಳಲ್ಲಿ, ಯಾರೂ ನಾಲ್ಕು ನಿಮಿಷ ಹಾಡನ್ನು ಕೇಳುವುದಿಲ್ಲ. ಹೀಗಿರುವಾಗ ನೀವು 13 ನಿಮಿಷಗಳಲ್ಲಿ ಕವ್ವಾಲಿಯನ್ನು ರಚಿಸಿದ್ದೀರಲ್ಲ’ ಎಂದರಂತೆ. ಆದರೆ, ನಿರ್ದೇಶಕ ಪಿ.ಎಲ್. ಸಂತೋಷಿ ಅವರಿಗೆ ಇದರ ಮೇಲೆ ಸಂಪೂರ್ಣ ನಂಬಿಕೆ ಇತ್ತು.
ಇದನ್ನೂ ಓದಿ: ಸೋಮವಾರ ‘ಧುರಂಧರ’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್
ಈ ಕವ್ವಾಲಿಯಲ್ಲಿ ಮನ್ನಾ ಡೇ, ಆಶಾ ಭೋಂಸ್ಲೆ, ಎಸ್.ಡಿ. ಬತೀಶ್, ಸುಧಾ ಮಲ್ಹೋತ್ರಾ ಮತ್ತು ಮೊಹಮ್ಮದ್ ರಫಿನಂತಹ ಪ್ರಸಿದ್ಧ ಗಾಯಕರು. ಈ ಕವ್ವಾಲಿ ದೀರ್ಘವಾಗಿದ್ದರೂ ಕೇಳಲು ಇಂಪಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.