Headlines

Amruthadhaare: ಸತ್ಯ ಬಾಯ್ಬಿಟ್ಟ ದಿಯಾ- ಶಕುಂತಲಾ ತಲೆಗೆ ಭೂಮಿಕಾ ಪಿಸ್ತೂಲ್​! ಅತ್ತೆ ಖೇಲ್​ ಕಥಮ್​!

Amruthadhaare: ಸತ್ಯ ಬಾಯ್ಬಿಟ್ಟ ದಿಯಾ- ಶಕುಂತಲಾ ತಲೆಗೆ ಭೂಮಿಕಾ ಪಿಸ್ತೂಲ್​! ಅತ್ತೆ ಖೇಲ್​ ಕಥಮ್​!

Amruthadhaare: ಸತ್ಯ ಬಾಯ್ಬಿಟ್ಟ ದಿಯಾ- ಶಕುಂತಲಾ ತಲೆಗೆ ಭೂಮಿಕಾ ಪಿಸ್ತೂಲ್​! ಅತ್ತೆ ಖೇಲ್​ ಕಥಮ್​!

ಅಮೃತಧಾರೆ ಇದೀಗ ರೋಚಕ ತಿರುವು ಪಡೆದುಕೊಂಡಿದ್ದು, ಮಗುವನ್ನು ಕಿಡ್​ನ್ಯಾಪ್​ ಮಾಡಿಸಲು ಅತ್ತೆಯೇ ಹೇಳಿದ್ದಾಗಿ ದಿಯಾ ಬಾಯ್ಬಿಟ್ಟಿದ್ದಾಳೆ. ಅಲ್ಲಿಗೆ ಶಕುಂತಲಾ ಖೇಲ್​ ಕಥಮ್​ ಆಗಿದೆ. ಮುಂದೇನಾಯ್ತು ನೋಡಿ…

ಜೈದೇವ್​ ಮತ್ತು ಶಕುಂತಲಾ ಚಾಪೆ ಕೆಳಗೆ ನೂಕಿದರೆ, ಭೂಮಿಕಾ ಮತ್ತು ಮಲ್ಲಿ ರಂಗೋಲಿ ಕೆಳಗೇ ನುಸುಳಿದ್ದಾರೆ. ಅತ್ತೆ ಜೈದೇವ್​ ಭೂಮಿಕಾ ಮಗುವನ್ನು ಕಿಡ್​ನ್ಯಾಪ್​ ಮಾಡಿದ್ದ. ಇದರ ಸೂತ್ರಧಾರಿ ಶಕುಂತಲಾ ಎನ್ನುವುದು ಬೇರೆ ಹೇಳಬೇಕಾಗಿಲ್ಲ.

ಅಷ್ಟಕ್ಕೂ ಹೀಗೆ ಆಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಹೀಗೆಯೇ ಮಾಡಿದ್ದರು ಇವರಿಬ್ಬರು. ಆ ಸಲವೂ ಪ್ಲ್ಯಾನ್ ಫ್ಲಾಪ್​ ಆಗಿತ್ತು. ಈ ಸಲ ಗೌತಮ್​ ವಿದೇಶಕ್ಕೆ ಹೋದದನ್ನೇ ನೋಡಿ ಮಗುವನ್ನು ಇಬ್ಬರೂ ಸೇರಿ ಕಿಡ್​ನ್ಯಾಪ್​ ಮಾಡಿಸಿದ್ದಾರೆ.

ಆದರೆ ಭೂಮಿಕಾ ಮತ್ತು ಮಲ್ಲಿ ಪೊಲೀಸರನ್ನು ಕರೆಸಿ, ಡ್ರೋನ್​ ಮೂಲಕ ಅದನ್ನು ಪತ್ತೆ ಹಚ್ಚಿಸಿದ್ದಾರೆ. ಆದರೆ ಮಗುವನ್ನು ಜೈದೇವ ಸುಲಭದಲ್ಲಿ ಕೊಡುವುದಿಲ್ಲ ಎಂದು ಅವರಿಗೆ ಗೊತ್ತು. ಇದೇ ಕಾರಣಕ್ಕೆ ಮಲ್ಲಿ ದಿಯಾಳನ್ನು ಕಿಡ್​ನ್ಯಾಪ್​ ಮಾಡಿಕೊಂಡು ಬಂದಿದ್ದಳು.

ಮಗುವಿಗೆ ಬದಲಾಗಿ ದಿಯಾಳನ್ನು ಅವರು ಪರ್ಯಾಯ ವ್ಯವಸ್ಥೆಯಾಗಿ ಇಟ್ಟುಕೊಂಡಿದ್ದರು. ಅದೇ ವೇಳೆ ಮಗುವನ್ನು ಕರೆದುಕೊಂಡು ಅದನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ ಜೈದೇವ್​. ಅದಾಗಲೇ ಪಿಸ್ತೂಲ್​ ತಂದಿದ್ದ ಭೂಮಿಕಾ, ಅದನ್ನು ಜೈದೇವ್​ ತಲೆಗೆ ಗುರಿ ಇಟ್ಟಿದ್ದಾಳೆ. ಅಷ್ಟರಲ್ಲಿಯೇ ಕೈಯಲ್ಲಿ ಪಿಸ್ತೂಲ್​ ಇದ್ದರೆ ಸಾಲದು ಅದನ್ನು ಹೊಡೆಯಲು ಧೈರ್ಯಬೇಕು ಎಂದು ಮಗುವಿನತ್ತ ಗುರಿ ಇಟ್ಟಿದ್ದಾನೆ ಜೈದೇವ.

ಅದೇ ವೇಳೆ, ಮಲ್ಲಿ ದಿಯಾಳನ್ನು ಕರೆದುಕೊಂಡು ಬಂದಿದ್ದಾಳೆ. ಅವಳನ್ನು ಕಟ್ಟಿ ಹಾಕಿದ್ದನ್ನು ನೋಡಿ ಜೈದೇವ ಥರಥರ ನಡುಗಿ ಹೋಗಿದ್ದಾನೆ. ಅವರ ತಲೆಗೆ ಪಿಸ್ತೂಲ್​ ಗುರಿ ಇಟ್ಟಿದ್ದರಿಂದ ಮಗುವನ್ನು ವಾಪಸ್​ ಕೊಡಲೇಬೇಕಾದ ಅನಿವಾರ್ಯತೆ ಜೈದೇವ್​ಗೆ ಬಂದಿದೆ.

ಇತ್ತ ಹೆದರಿದ ದಿಯಾ, ಇದನ್ನೆಲ್ಲಾ ಮಾಡಿಸಲು ಅತ್ತೆನೇ ಹೇಳಿದ್ದು ಎಂದು ಬಾಯಿ ಬಿಟ್ಟಿದ್ದಾಳೆ. ಅಷ್ಟಕ್ಕೂ ಭೂಮಿಕಾಗೆ ಇದೇನು ಗೊತ್ತಿರದೇ ಇರುವ ವಿಷಯವೇನಲ್ಲ. ಆದರೆ ದಿಯಾಳ ಬಾಯಿಯಿಂದ ಜೈದೇವ್​ ಎದುರು ಬರಿಸಬೇಕಿತ್ತು ಅಷ್ಟೇ.

ಅತ್ತೆಯ ಹೆಸರು ಹೇಳುತ್ತಿದ್ದಂತೆಯೇ ಕಿಡಿಕಿಡಿಯಾದ ಭೂಮಿಕಾ ನೇರವಾಗಿ ಅತ್ತೆಯ ಬಳಿ ಹೋಗಿ ಹಣೆಗೆ ಪಿಸ್ತೂಲ್​ ಗುರಿಯಿಟ್ಟಿದ್ದಾಳೆ. ಇನ್ನೇನು ಹೊಡೆಯುವುದರಲ್ಲಿ ಇರುವಾಗಲೇ ಶಕುಂತಲಾ ಬೆವರಿ ಹೋಗಿದ್ದಾಳೆ. ಶಕುಂತಲಾ ಖೇಲ್​ ಅಲ್ಲಿಗ ಕಥಮ್​ ಆಗಿದೆ. ಆದರೆ ಅಷ್ಟಕ್ಕೂ ಭೂಮಿಕಾ ಏನೂ ಹೊಡೆಯಲ್ಲ ಬಿಡಿ. ಆದರೆ, ಇನ್ನು ಶಕುಂತಲಾ ತನ್ನ ಬಾಲ ಬಿಚ್ಚುವಂತಿಲ್ಲ ಅಷ್ಟೇ.

ಒಟ್ಟಿನಲ್ಲಿ, ಅಮೃತಧಾರೆ ಸೀರಿಯಲ್​ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಲೇ ಟಿಆರ್​ಪಿ ಭದ್ರ ಮಾಡಿಕೊಂಡಿದ್ದು, ವೀಕ್ಷಕರನ್ನು ಸೆಳೆಯುತ್ತಲೇ ಇದೆ. ವಾಸ್ತವಕ್ಕೆ ಸಹಜವಾಗಿ ದೂರವಾಗಿದ್ದರೂ, ಎಲ್ಲಿಯೂ ಬೋರ್​ ಆಗದಂತೆ ಸೀರಿಯಲ್​ ನಡೆದುಕೊಂಡು ಹೋಗುತ್ತಿರುವುದಕ್ಕೆ ನೆಟ್ಟಿಗರು ಒಳ್ಳೊಳ್ಳೆ ಕಮೆಂಟ್​ ಹಾಕುತ್ತಿದ್ದಾರೆ.
View this post on Instagram
A post shared by Zee Kannada (@zeekannada)

Source link

Leave a Reply

Your email address will not be published. Required fields are marked *