Headlines

ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಯಲ್ಲಿ ಭಾಗಿ: ರಾಮ್ ಚರಣ್ ವಿರುದ್ಧ ಟೀಕೆ

ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಯಲ್ಲಿ ಭಾಗಿ: ರಾಮ್ ಚರಣ್ ವಿರುದ್ಧ ಟೀಕೆ


ಅಲ್ಲು ಅರ್ಜುನ್ (Allu Arjun) ಅವರ ಸಹೋದರ ಅಲ್ಲು ಸಿರೀಶ್ ಮದುವೆ ಆಗುತ್ತಿದ್ದಾರೆ. ಆದರೆ ಮದುವೆಗೆ ಮುನ್ನ ಪಾರ್ಟಿಗಳ ಮೇಲೆ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದಾರೆ ಅಲ್ಲು ಸಿರೀಶ್. ಇತ್ತೀಚೆಗಷ್ಟೇ ವಿದೇಶದಲ್ಲಿ ಕ್ರೂಸ್ ಒಂದರಲ್ಲಿ ಅದ್ಧೂರಿ ಪಾರ್ಟಿ ಮಾಡಿದರು. ಪಾರ್ಟಿಯಲ್ಲಿ ಅಲ್ಲು ಅರ್ಜುನ್ ಸಹ ಭಾಗವಹಿಸಿದ್ದರು. ಅದಾದ ಬಳಿಕ ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರು ಸಹೋದರ ಅಲ್ಲು ಸಿರೀಶ್ ಅವರಿಗಾಗಿ ಪಾರ್ಟಿ ನಡೆಸಿದರು. ಮದ್ಯ, ನೃತ್ಯ ಎಲ್ಲವೂ ಇದ್ದ ಪಾರ್ಟಿ ಇದಾಗಿತ್ತು. ಆದರೆ ಈ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಅದೂ ಅಯ್ಯಪ್ಪ ಮಾಲಧಾರಿಯಾಗಿ!

ಹೌದು, ಅಲ್ಲು ಅರ್ಜುನ್, ಸಹೋದರನಿಗಾಗಿ ನಡೆದಿದ್ದ ಕಾಕ್ ಟೇಲ್ ಪಾರ್ಟಿಯಲ್ಲಿ ರಾಮ್ ಚರಣ್ ಭಾಗಿ ಆಗಿದ್ದರು. ರಾಮ್ ಚರಣ್ ಪಾರ್ಟಿಯಲ್ಲಿ ಭಾಗಿ ಆಗಿರುವ ವಿಡಿಯೋವನ್ನು ಸಹ ಅಲ್ಲು ಸಿರೀಶ್ ಹಂಚಿಕೊಂಡಿದ್ದಾರೆ. ಆದರೆ ರಾಮ್ ಚರಣ್, ಅಯ್ಯಪ್ಪ ಮಾಲಧಾರಿಯಾಗಿ ಮದ್ಯದ ಪಾರ್ಟಿಯಲ್ಲಿ ಭಾಗಿ ಆಗಿದ್ದರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ನಿಜವಾಗಿಯೂ ಅಲ್ಲಿ ನಡೆದಿದ್ದೇನು ಎಂದು ಅಲ್ಲು ಸಿರೀಶ್ ವಿವರಿಸಿದ್ದಾರೆ.

ಮಾಲಧಾರಿಯಾಗಿ ರಾಮ್ ಚರಣ್ ಪಾರ್ಟಿಯಲ್ಲಿ ಭಾಗವಹಿಸಿದ ಪ್ರಶ್ನೆಗಳು ಎದ್ದಂತೆ, ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಅಲ್ಲು ಸಿರೀಶ್, ‘ಸ್ವಾಮಿಯವರು (ರಾಮ್ ಚರಣ್) ಯಾರೂ ಸಹ ಮದ್ಯವನ್ನು ಮುಟ್ಟುವ ಮೊದಲೇ ಅವರು ಬಂದು ಶುಭ ಹಾರೈಸಿ ಹೊರಟರು’. ಆ ಮೂಲಕ ಪಾರ್ಟಿಯ ಆರಂಭದಲ್ಲೇ ಬಂದ ರಾಮ್ ಚರಣ್ ಎಲ್ಲರಿಗೂ ಶುಭ ಹಾರೈಸಿ ಹೊರಟಿದ್ದಾರೆ ಆ ಮೂಲಕ ಅವರು ಮಾಲಧಾರಿಯಾಗಿ ಯಾವುದೇ ಕೆಟ್ಟ ಚಟುವಟಿಕೆಯ ಭಾಗ ಆಗಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ

ಅಲ್ಲು ಸಿರೀಶ್ ಅವರು ರಾಮ್ ಚರಣ್ ಅವರಿಗೆ ಸ್ವಂತ ಮಾವನ ಮಗ ಇಬ್ಬರದ್ದೂ ಬಹಳ ಹತ್ತಿರದ ಸಂಬಂಧದ ಕುಟುಂಬ. ಅಲ್ಲು ಅರ್ಜುನ್ ಮತ್ತು ಅಲ್ಲು ಸಿರೀಶ್ ಅವರ ತಂದೆ, ರಾಮ್ ಚರಣ್ ತಾಯಿಯ ಸ್ವಂತ ಸಹೋದರ. ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿ ಆಗುವ ಒತ್ತಡ ಇದ್ದೇ ಇದೆ. ಜೊತೆಗೆ ರಾಮ್ ಚರಣ್ ಮತ್ತು ಅಲ್ಲು ಸಹೋದರರು ಚಿಕ್ಕಂದಿನಿಂದಲೂ ಬಹಳ ಆಪ್ತರು.

ರಾಮ್ ಚರಣ್ ಮಹಾನ್ ಅಯ್ಯಪ್ಪ ಭಕ್ತರಾಗಿದ್ದರು. ಪದೇ ಪದೇ ಅವರು ಮಾಲಾಧಾರಣೆ ಮಾಡುತ್ತಲೇ ಇರುತ್ತಾರೆ. ಮಾಲಧಾರಣೆ ಮಾಡಿದರೆ ಚಪ್ಪಲಿ ಸಹ ಧರಿಸದೆ ಬಹಳ ಕಟ್ಟುನಿಟ್ಟಿನಿಂದ ನಿಯಮಪಾಲನೆ ಮಾಡುತ್ತಾರೆ. ಸಿನಿಮಾ ಪ್ರಚಾರವಿರಲಿ ಯಾವುದೇ ಅವಕಾಶಗಳನ್ನು ತಪ್ಪಿಸುವುದಿಲ್ಲ. ಅಯ್ಯಪ್ಪನ ಮಹಾನ್ ಭಕ್ತರಾಗಿರುವ ರಾಮ್ ಚರಣ್, ಮಾಲೆಗೆ ಅಪಚಾರ ಆಗುವಂತೆ ನಡೆದುಕೊಳ್ಳುತ್ತಾರೆ ಎನ್ನಲಾಗದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:45 am, ಬುಧವಾರ, 25 ಫೆಬ್ರವರಿ 26



Source link

Leave a Reply

Your email address will not be published. Required fields are marked *