ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿಯಿಂದಲೂ ದೂರಾದರೇ ರಿಷಬ್?

ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿಯಿಂದಲೂ ದೂರಾದರೇ ರಿಷಬ್?


ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿಯಿಂದಲೂ ದೂರಾದರೇ ರಿಷಬ್?

ರಿಷಬ್ ಶೆಟ್ಟಿ (Rishab Shetty), ಕರ್ನಾಟಕದ ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಬಳಿಕ ರಿಷಬ್ ಖ್ಯಾತಿಯ ದೇಶದೆಲ್ಲೆಡೆ ಹರಡಿದೆ. ‘ಕಾಂತಾರ ಚಾಪ್ಟರ್ 1’ ಬಳಿಕ ಅವರಿಗೆ ತೆಲುಗು, ಬಾಲಿವುಡ್ ನಿಂದಲೂ ಆಫರ್ ಬರುತ್ತಿದೆ, ಇದೀಗ ರಿಷಬ್ ಅವರು ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಹೊಸ ಸಿನಿಮಾದ ತಯಾರಿಯಲ್ಲಿ ತೊಡಗಿರುವ ಸುಳಿವನ್ನೂ ಸಹ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಲಾಗಿದೆ.

‘ಕಾಂತಾರ: ಅಧ್ಯಾಯ 2’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ನಡುವೆ ವೈಮನಸ್ಯ ಮೂಡಿತೇ ಎಂಬ ಅನುಮಾನ ಶುರುವಾಗಿತ್ತು. ಅದಕ್ಕೆ ಮುಖ್ಯ ಕಾರಣವಾಗಿದ್ದು, ರಿಷಬ್ ಅವರು ಕೆಲ ವಾರದ ಹಿಂದಷ್ಟೇ ಹೊಂಬಾಳೆ ಫಿಲಂಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದಾರೆ. ಇದು ದೊಡ್ಡ ಸುದ್ದಿಯೇ ಆಯ್ತು. ಇದೀಗ ರಿಷಬ್ ಶೆಟ್ಟಿ, ತಮ್ಮ ಗೆಳೆಯ ರಾಜ್ ಬಿ ಶೆಟ್ಟಿ ಮತ್ತು ‘ಕಾಂತಾರ’ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಅನ್ಫಾಲೋ ಮಾಡುತ್ತಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿ ಅವರು 140ಕ್ಕೂ ಹೆಚ್ಚು ಮಂದಿ ಸಿನಿಮಾ ಸೆಲೆಬ್ರಿಟಿಗಳು, ಕೆಲವು ರಾಜಕಾರಣಿಗಳನ್ನು ಫಾಲೋ ಮಾಡುತ್ತಾರೆ. ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಜೆಪಿ ತುಮ್ಮಿನಾಡ್ ಇನ್ನೂ ಹಲವರನ್ನು ರಿಷಬ್ ಶೆಟ್ಟಿ ಫಾಲೋ ಮಾಡುತ್ತಾರೆ. ಆದರೆ ಅವರು ಫಾಲೋ ಮಾಡುವವರ ಪಟ್ಟಿಯಲ್ಲಿ ರಾಜ್ ಬಿ ಶೆಟ್ಟಿ ಅವರ ಹೆಸರಿಲ್ಲ. ರಿಷಬ್ ಶೆಟ್ಟಿ ಅವರು ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡುತ್ತಿದ್ದಾರೆ. ಅದೇ ‘ಕಾಂತಾರ: ಅಧ್ಯಾಯ 1’ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಫಾಲೋ ಮಾಡುತ್ತಿಲ್ಲ ಅಥವಾ ರಿಷಬ್ ಅವರು ರುಕ್ಮಿಣಿ ವಸಂತ್ ಅವರನ್ನು ಅನ್ಫಾಲೋ ಮಾಡಿದ್ದಾರೆ.

ಇದನ್ನೂ ಓದಿ:ಮುದ್ದು ಮಗಳ ಹುಟ್ಟುಹಬ್ಬಕ್ಕೆ ಮುದ್ದಾದ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರ ಸಿನಿಮಾದ ಇತರ ವಿಷಯಗಳಲ್ಲಿ ಜೊತೆಯಾಗಿಯೇ ಇರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುವ ಪ್ರಗತಿ ಶೆಟ್ಟಿ ಅವರೂ ಸಹ ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡಿದ್ದಾರೆ. ಆದರೆ ಪ್ರಗತಿ ಶೆಟ್ಟಿ ಅವರು ರುಕ್ಮಿಣಿ ವಸಂತ್ ಅವರನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಪ್ರಗತಿ ಶೆಟ್ಟಿ ಅವರೂ ಸಹ ಹೊಂಬಾಳೆಯನ್ನು ಅನ್ಫಾಲೋ ಮಾಡಿದ್ದಾರೆ.

ರಾಜ್ ಬಿ ಶೆಟ್ಟಿ ಅವರು ‘ಕಾಂತಾರ ಅಧ್ಯಾಯ 1’ ಸಿನಿಮಾದ ಯಾವೊಂದು ಅಪ್‌ಡೇಟ್ ಅನ್ನು ಹಂಚಿಕೊಂಡಿರಲಿಲ್ಲ. ಜೊತೆಗೆ, ‘ಕಾಂತಾರ: ಚಾಪ್ಟರ್ 1′ ಸಿನಿಮಾಕ್ಕೂ ತಮಗೆ ಸಂಬಂಧವಿಲ್ಲ, ನನಗೆ ಆ ಸಿನಿಮಾಕ್ಕೆ ಕೆಲಸ ಮಾಡುವ ಮನಸ್ಸಿಲ್ಲ’ ಎಂದು ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಅವರು ‘ಕಾಂತಾರ’ ಸಿನಿಮಾದ ಕೆಲ ಭಾಗಗಳ ನಿರ್ದೇಶನ ಮಾಡಿದ್ದರು. ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆ ಆದ ಬಳಿಕ ಇಬ್ಬರ ನಡುವೆ ಮನಸ್ಥಾಪ ಶುರುವಾಗಿತ್ತು. ಅದಕ್ಕೆ ಇದೀಗ ಮತ್ತೊಂದು ಸಾಕ್ಷ್ಯ ದೊರೆಯುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *