Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ

Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ

Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ನಟ ಪ್ರಕಾಶ್ ರಾಜ್ ಅವರನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರೀಕರಣದ ವೇಳೆ ನಿರ್ದೇಶಕರೊಂದಿಗೆ ವಾಗ್ವಾದ ನಡೆದಿದ್ದೇ ಇದಕ್ಕೆ ಕಾರಣ ಎನ್ನಲಾಗಿತ್ತು.   ಸ್ವತಃ ಪ್ರಕಾಶ್ ರಾಜ್  ಈ ಬಗ್ಗೆ ಹೇಳಿದ್ದೇನು?

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ (Spirit Film) ಚಿತ್ರವು 2027 ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇದಾಗಲೇ ಈ ಚಿತ್ರದಿಂದ ಖ್ಯಾತ ನಟಿ ದೀಪಿಕಾ ಪಡುಕೋಣೆ ಹೊರಕ್ಕೆ ಬಂದಿದ್ದು ಸಂಚಲನ ಮೂಡಿಸಿದೆ. ಇದೇ ವೇಳೆ ಪ್ರಭಾಸ್ ಜೊತೆಗೆ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಪ್ರಕಾಶ್ ರಾಜ್ ಅವರು ಚಿತ್ರತಂಡದ ಜೊತೆ ಕಿರಿಕ್​ ಮಾಡಿಕೊಂಡಿದ್ದು, ಅವರನ್ನು ತೆಗೆದುಹಾಕಲಾಗಿದೆ ಎಂದು ಕೆಲವರು, ಅವರು ಚಿತ್ರದಿಂದ ಹೊರಕ್ಕೆ ಬಂದಿದ್ದಾರೆ ಎಂದು ಮತ್ತೊಂದಿಷ್ಟು ಮಂದಿ ಹೇಳುತ್ತಿರುವ ಸುದ್ದಿಗಳು ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ.

ಪ್ರಭಾಸ್ ಅಭಿನಯದ ಚಿತ್ರದಲ್ಲಿ ಪ್ರಕಾಶ್ ರಾಜ್ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಅವರ ಧ್ವನಿ ಚಿತ್ರದ ಬಿಡುಗಡೆ ವೀಡಿಯೊದಲ್ಲಿಯೂ ಕಾಣಿಸಿಕೊಂಡಿದೆ. ಆದಾಗ್ಯೂ, OTT Play ವರದಿಯ ಪ್ರಕಾರ, ನಟ ಇನ್ನು ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಇದಕ್ಕೆ ಕಾರಣ, ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗುತ್ತಿರುವ ಸಮಯದಲ್ಲಿ ಸೆಟ್‌ಗಳಲ್ಲಿ ಸಮಸ್ಯೆಗಳು ಉದ್ಭವಿಸಿದ ನಂತರ ಅವರನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ವರದಿ ಬಂದಿದೆ.

ಅದೇ ವರದಿಯ ಪ್ರಕಾರ, ಪ್ರಕಾಶ್ ರಾಜ್ ಮತ್ತು ಸಂದೀಪ್ ರೆಡ್ಡಿ ವಂಗಾ ನಡುವೆ ಸ್ಕ್ರಿಪ್ಟ್ ಮತ್ತು ನಿರ್ದಿಷ್ಟ ದೃಶ್ಯದ ಬಗ್ಗೆ ಗಂಭೀರವಾದ ವಾಗ್ವಾದ ನಡೆಯಿತು. ಭಿನ್ನಾಭಿಪ್ರಾಯವು ಬಿಸಿಯಾಯಿತು ಎಂದು ಈ ವರದಿ ಉಲ್ಲೇಖಿಸಿದೆ. ನಂತರ ನಟ ಚಿತ್ರದಿಂದ ನಿರ್ಗಮಿಸಿದರು. ಪ್ರಕಾಶ್​ ರಾಜ್​ ಅವರ ವರ್ತನೆಯು ನಿರ್ಮಾಪಕರನ್ನು ಕೆರಳಿಸಿದೆ. ಆದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಷ್ಟಕ್ಕೂ ಸ್ಪಿರಿಟ್ ಸಿನಿಮಾ ಘೋಷಣೆಯಾದಾಗಿನಿಂದ ಹೆಚ್ಚಿನ ಸದ್ದು ಮಾಡುತ್ತಿದೆ. ದೀಪಿಕಾ ಪಡುಕೋಣೆ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ. ಅವರು 8 ಗಂಟೆಗಳ ಶಿಫ್ಟ್ ಬೇಡಿಕೆಯಿಟ್ಟಿದ್ದರು. ಅದು ಸಾಧ್ಯವಾಗದ ಕಾರಣ ಅವರ ಬದಲಿಗೆ ಈಗ ಪ್ರಭಾಸ್ ಎದುರು ನಾಯಕಿಯಾಗಿರುವ ತೃಪ್ತಿ ಡಿಮ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ತೃಪ್ತಿ ಮತ್ತು ಸಂದೀಪ್ ಈ ಹಿಂದೆ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಪ್ರಕಾಶ್​ ರಾಜ್​ ಸುದ್ದಿ ಸದ್ದು ಮಾಡುತ್ತಿದೆ.

ಆದರೆ ಈ ಸುದ್ದಿಗೆ ಇದೀಗ ಖುದ್ದು ಪ್ರಕಾಶ್​ ರಾಜ್​ ಸ್ಪಷ್ಟನೆ ಕೊಟ್ಟಿದ್ದಾರೆ. ಹರಿದಾಡುತ್ತಿರುವ ಸುದ್ದಿಯ ಕುರಿತು ಮೌನ ಮುರಿದಿರುವ ನಟ ಪ್ರಕಾಶ್​ ರಾಜ್​ (Prakash Raj’s Spirit Film) ಈ ಸುದ್ದಿಯು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸ್ಪಿರಿಟ್ ಚಿತ್ರದ ಚಿತ್ರೀಕರಣವನ್ನು ಇನ್ನೂ ಪ್ರಾರಂಭಿಸಿಲ್ಲ. ಆದರೆ ಇದಾಗಲೇ ಇಂಥ ನಕಲಿ ಸುದ್ದಿ ಹರಡಿದೆ. ಸ್ವಲ್ಪ ಬೆಳೆಯಿರಿ, ಈ ರೀತಿ ನಕಲಿ ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಟಿ-ಸೀರೀಸ್ ಎಂಬ ತಯಾರಕರು ಸ್ಪಿರಿಟ್ ಮಾರ್ಚ್ 5, 2027 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದರು. ಪ್ರಭಾಸ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ, ಚಿತ್ರದಲ್ಲಿ ವಿವೇಕ್ ಒಬೆರಾಯ್ ಮತ್ತು ಕಾಂಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳು ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ನಡುವಿನ ಮೊದಲ ಸಹಯೋಗವನ್ನು ಗುರುತಿಸುತ್ತವೆ.

Source link

Leave a Reply

Your email address will not be published. Required fields are marked *