ಬೆಳಗಾವಿ, (ಡಿಸೆಂಬರ್ 21): ಇಂದಿನ ಬದಲಾಗುತ್ತಿರುವ ಡಿಜಿಟಲ್ (ಡಿಜಿಟಲ್) ಯುಗದಲ್ಲಿ ಮೊಬೈಲ್ (ಮೊಬೈಲ್), ಟಿವಿ (ಟಿವಿ), ಒಟಿಟಿ (ಓಟ್), ವೆಬ್‌ಸೀರೀಸ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಆದರೆ ಈ ತಂತ್ರಜ್ಞಾನ ಅವಲಂಬನೆ ಹೆಚ್ಚಾದಂತೆ ಮಕ್ಕಳ ಬಾಲ್ಯದ ಆಟಗಳು, ಕುಟುಂಬದ ಒಡನಾಟ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿವೆ. ಮಕ್ಕಳು ಮೊಬೈಲ್‌ಗಳಲ್ಲಿ ಮುಳುಗಿದರೆ, ವಯಸ್ಕರು ಕೂಡ ಟಿವಿ, ವಿಡಿಯೋ ಆಟಗಳು, ಒಟಿಟಿ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ನಮ್ಮ ಆಚಾರ-ವಿಚಾರ, ಸಂಸ್ಕೃತಿಯೇ ಪತನದ ಅಂಚಿಗೆ ತಲುಪಿದೆ ಎಂಬ ಆತಂಕ ದಿನೇದಿನೇ ಹೆಚ್ಚುತ್ತಿದೆ. ಈ ಬೆಳಗಾವಿಯ (ಬೆಳಗಾವಿ) ಹಲಗಾ ಗ್ರಾಮ ಡಿಜಿಟಲ್ ಆಫ್ ಪ್ರಯೋಗಕ್ಕೆ ಮುಂದಾಗಿದೆ.
ಹೌದು.. ಈ ಡಿಜಿಟಲ್ ಆಕ್ರಮಣಕ್ಕೆ ಪ್ರತಿರೋಧವಾಗಿ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಹಲಗಾ ಗ್ರಾಮ ಒಂದು ವಿಭಿನ್ನ ಹಾಗೂ ಶ್ಲಾಘನೀಯ ಪ್ರಯೋಗಕ್ಕೆ ಮುಂದಾಗಿದೆ. ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಯಶಸ್ವಿಯಾಗಿ ಜಾರಿಗೊಂಡಿರುವ ಮಾದರಿಯನ್ನು ಅನುಸರಿಸಿ, ಹಲಗಾ ಗ್ರಾಮದಲ್ಲಿ ನಿತ್ಯ ಎರಡು ಗಂಟೆಗಳ ‘ಡಿಜಿಟಲ್ ಆಫ್’ ಪ್ರಯೋಗ ಆರಂಭಿಸಲಾಗಿದೆ. ಈ ಪ್ರಯೋಗವು ಡಿಸೆಂಬರ್ 17 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಹಾಗಾದ್ರೆ, ಏನಿದು ‘ಡಿಜಿಟಲ್ ಆಫ್’ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.