Headlines

director sangeeth sagar death: ಕನ್ನಡ ಸಿನಿಮಾ ಶೂಟಿಂಗ್‌ ಮಾಡುವಾಗಲೇ ಹೃದಯಾಘಾತ; ನಿರ್ದೇಶಕ ವಿಧಿವಶ | Director Sangeeth Sagar Director Sangeeth Sagar Passed Away Due To Heart Attack

director sangeeth sagar death: ಕನ್ನಡ ಸಿನಿಮಾ ಶೂಟಿಂಗ್‌ ಮಾಡುವಾಗಲೇ ಹೃದಯಾಘಾತ; ನಿರ್ದೇಶಕ ವಿಧಿವಶ | Director Sangeeth Sagar Director Sangeeth Sagar Passed Away Due To Heart Attack


15

ಹೃದಯಾಘಾತದಿಂದ ನಿಧನ

Image Credit : Asianet News

ಹೃದಯಾಘಾತದಿಂದ ನಿಧನ

ಅಂದಹಾಗೆ ಚಿಕ್ಕ ಮಕ್ಕಳಿಗೂ ಕೂಡ ಹೃದಯಾಘಾತ ಆಗುವುದು. ಸಿನಿಮಾ ಶೂಟಿಂಗ್‌ ಮಾಡುವಾಗಲೇ ನಿರ್ದೇಶಕರೊಬ್ಬರಿಗೆ ಹೃದಯಾಘಾತ ಆಗಿ, ನಿಧನರಾಗಿದ್ದಾರೆ. ಸಂಗೀತ್ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

25

ಪಾತ್ರಧಾರಿ ಸಿನಿಮಾ ಶೂಟಿಂಗ್

Image Credit : Asianet News

ಪಾತ್ರಧಾರಿ ಸಿನಿಮಾ ಶೂಟಿಂಗ್

ನಿನ್ನೆ ( ಡಿಸೆಂಬರ್‌ 3) ರಂದು ಶಿವಮೊಗ್ಗದ ಹರಿಹರಪುರದಲ್ಲಿ ಪಾತ್ರಧಾರಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಆಗ ಹೃದಯಾಘಾತ ಆಗಿದೆ ತಕ್ಷಣ ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು

35

ಚಿಕಿತ್ಸೆ ಫಲಿಸಲಿಲ್ಲ

Image Credit : Asianet News

ಚಿಕಿತ್ಸೆ ಫಲಿಸಲಿಲ್ಲ

ಆದ್ರೂ ಚಿಕಿತ್ಸೆ ಫಲಿಸದೆ ಸಂಗೀತ್ ಸಾಗರ್ ಅವರು ನಿಧಾನ ಹೊಂದಿದ್ದಾರೆ. ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆಕ್ಷನ್‌ ಹೇಳಿದ್ದು, ಅದಾದ ಬಳಿಕ ಕುಸಿದು ಬಿದ್ದಿದ್ದರು.

45

ಕನ್ನಡ ಸಿನಿಮಾ ನಿರ್ದೇಶನ

Image Credit : Asianet News

ಕನ್ನಡ ಸಿನಿಮಾ ನಿರ್ದೇಶನ

ಈಗಾಗಲೇ ಸಿನಿಮಾಕ್ಕೆ ನಿರ್ದೇಶನ, ಸಂಗೀತ ನಿರ್ದೇಶನ ಮಾಡುತ್ತಿದ್ದರು. ಅಂದಹಾಗೆ ಎಂಟಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

55

ಎಲ್ಲಿಯವರು?

Image Credit : X

ಎಲ್ಲಿಯವರು?

ಇವರು ಮೂಲತಃ ಸಕಲೇಶಪುರದ ದೊಡ್ಡನಾಗರ ಮೂಲದವರು. 20 ದಿನಗಳಿಂದ ತೀರ್ಥಹಳ್ಳಿ, ಹರಿಹರ ಸುತ್ತ ಶೂಟಿಂಗ್‌ ನಡೆಯುತ್ತಿತ್ತು. ಇಂದು ಸಿನಿಮಾದ ಕೊನೆ ದಿನದ ಶೂಟಿಂಗ್‌ ಮಾಡಿ ಕುಂಬಳಕಾಯಿ ಒಡೆಯಬೇಕಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *