ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು

ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು

ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು

ಡಿಕೆಶಿ ಖರೀದಿಸಿದ ₹2.8 ಕೋಟಿ ಲೆಕ್ಸಸ್ ಕಾರಿನ ವಿಶೇಷತೆ ಏನು? ಕೆಲವೇ ಮಂದಿಯಲ್ಲಿದೆ ಈ ಕಾರು, ವಿಶೇಷ ಅಂದರೆ ಸೇಮ್ ಲೆಕ್ಸಸ್ LM 350h ಕಾರು ಹೊಂದಿದ ಎರಡನೇ ರಾಜಕಾರಣಿ ಡಿಕೆ ಶಿವಕುಮಾರ್. ಇನ್ನು ಉದ್ಯಮಿ, ಸೆಲೆಬ್ರೆಟಿಗಳು ಸೇರಿ 7 ಮಂದಿಯಲ್ಲಿದೆ ಈ ಕಾರು.

ಡಿಕೆ ಶಿವಕುಮಾರ್ ನಿವಾಸಕ್ಕೆ ಹೊಸ ಲೆಕ್ಸಸ್ LM 350h ಕಾರು ಡೆಲಿವರಿಯಾಗಿದೆ. 2.5 ಕೋಟಿ ರೂಪಾಯಿಂದ 3 ಕೋಟಿ ರೂವರೆಗಿನ ಈ ಕಾರು ಅತ್ಯಂತ ಐಷಾರಾಮಿ ಕಾರಾಗಿದೆ. 7 ಸೀಟಿನ ಕಾರು ಇದಾಗಿದ್ದು, ದೀರ್ಘ ಪ್ರಯಾಣಕ್ಕೆ ಅತ್ಯುತ್ತಮ ಎಂದು ಗುರುತಿಸಿಕೊಂಡಿದೆ. ಅರಾಮಾದಾಯಕ ಪ್ರಯಾಣ, ಆಯಾಸ ರಹಿತ ಪ್ರಯಾಣಕ್ಕೆ ಈ ಕಾರು ಬಳಕೆ ಮಾಡಲಾಗುತ್ತದೆ.

ಲೆಕ್ಸಸ್ LM 350h ಕಾರು ಖರೀದಿಸಿದ ಎರಡನೇ ರಾಜಕಾರಣಿ ಡಿಕೆ ಶಿವಕುಮಾರ್. ಡಿಕೆ ಶಿವಕುಮಾರ್‌ಗೂ ಮೊದಲು ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ತಮಿಳು ನಟ ವಿಜಯ್ ಜೊಸೆಫ್ ಈ ಕಾರು ಬಳಕೆ ಮಾಡುತ್ತಿದ್ದಾರೆ. ರಾಜಕೀಯ ಓಡಾಟ, ಪಕ್ಷ ಸಂಘಟನೆಗಳಿಗಾಗಿ ಈ ಕಾರನ್ನು ವಿಜಯ್ ಬಳಕೆ ಮಾಡುತ್ತಿದ್ದಾರೆ. ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಾಟ ಮಾಡಿ ಲೆಕ್ಸಸ್ LM 350h ಕಾರು ಖರೀದಿಸಿದ್ದಾರೆ. ವಿಜಯ್ ಹೊರತುಪಡಿಸಿದರೆ ರಾಜಕಾರಣಿಗಳ ಪೈಕಿ ಡಿಕೆ ಶಿವಕುಮಾರ್ ಈ ಕಾರು ಖರೀದಿಸಿದ್ದಾರೆ.

ಲೆಕ್ಸಸ್ LM 350h ಕಾರನ್ನು ಭಾರತದಲ್ಲಿ ಕೆಲವೇ ಕೆಲವು ಮಂದಿ ಬಳಕೆ ಮಾಡುತ್ತಿದ್ದಾರೆ. ಇದರ ಆನ್ ರೋಡ್ ಬೆಲೆ 3 ಕೋಟಿ ರೂಪಾಯಿ ದಾಟುವ ಕಾರಣ ಬಹುತೇಕರು ಇದೇ ಫೀಚರ್ಸ್ ಒಳಗೊಂಡಿರುವ ಟೋಯೋಟಾ ವೆಲ್‌ಫೈರ್ ಕಾರು ಖರೀದಿಸುತ್ತಾರೆ. ಡಿಕೆಶಿ ಕುಮಾರ್, ನಟ ವಿಜಯ್ ಜೊಸೆಫ್ ಹೊರತುಪಡಿಸಿದರೆ ಭಾರತದಲ್ಲಿ 7 ಸೆಲೆಬ್ರೆಟಿಗಳು ಈ ಕಾರು ಬಳಸುತ್ತಿದ್ದಾರೆ.

ಲೆಕ್ಸಸ್ LM 350h ಕಾರು ಬಳಕೆ ಮಾಡುತ್ತಿರುವ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಕುಟುಂಬ ಮೊದಲ ಸ್ಥಾನದಲ್ಲಿದೆ. ಅಂಬಾನಿ ಕುಟುಂಬದಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ಲೆಕ್ಸಸ್ LM 350h ಕೂಡ ಒಂದಾಗಿದೆ. ಇನ್ನು ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಇದೇ ಲೆಕ್ಸಸ್ LM 350h ಕಾರು ಬಳಸುತ್ತಾರೆ.

ಬಾಲಿವುಡ್ ಕೆಲ ಸೆಲೆಬ್ರೆಟಿಗಳು ಇದೇ ಲೆಕ್ಸಸ್ LM 350h ಕಾರು ಬಳಸುತ್ತಿದ್ದಾರೆ. ಈ ಪೈಕಿ ಶಾರುಖ್ ಖಾನ್, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್, ವಿಕ್ಕಿ ಕೌಶಾಲ್, ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ಬಳಿ ಲೆಕ್ಸಸ್ LM 350h ಕಾರಿದೆ. ಭಾರತದಲ್ಲಿ ಕೆಲವೇ ಕೆಲವು ಮಂದಿ ಈ ಕಾರು ಬಳಕೆ ಮಾಡುತ್ತಿದ್ದಾರೆ.

ಡಿಕೆಶಿ ಖರೀದಿಸಿದ ಹೊಸ LM 350h ಕಾರು 7 ಸೀಟರ್ ಕಾರು. ಇದರಲ್ಲಿ ನಾಲ್ಕು ಸೀಟಿನ ಆಯ್ಕೆ ಕೂಡ ಇದೆ. eCVT ಹಾಗೂ ಇ ಫೋರ್ ಆಲ್ ವ್ಹೀಲ್ ಡ್ರೈವ್ ಸಾಮರ್ಥ್ಯ ಹೊಂದಿರುವ ಈ ಕಾರು 2.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಎಥೆನಾಲ್ ಇ20 ಇಂಧನ ಚಾಲಿತ ಎಂಜಿನ್ ಆಗಿದೆ.60 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಈ ಕಾರು ಬಳಕೆ ಮಾಡಿದ ಶೇಕಡಾ 93ರಷ್ಚು ಮಂದಿ ಇದರ ಕಂಫರ್ಟ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಶೇಕಡಾ 7ರಷ್ಟು ಮಂದಿ ಉತ್ತಮ ಎಂದಿದ್ದಾರೆ. 19 ಇಂಚಿನ ಅಲೋಯ್ ವ್ಹೀಲ್ಸ್, LED ಹೆಡ್‌ಲ್ಯಾಂಪ್ಸ್, LED ಟೈಲ್ ಲ್ಯಾಂಪ್ಸ್, 23 ಸೌಂಡ್ ಸ್ಪೀಕಸ್ ಸಿಸ್ಟಮ್, ಏರ್‌ಬ್ಯಾಕ್, ಎಬಿಎಸ್, ಇಬಿಡಿ ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಡಿಕೆಶಿಯ ಹೊಸ ಲೆಕ್ಸಸ್ ಕಾರಿನ ವಿಶೇಷತೆ ಏನು?

Source link

Leave a Reply

Your email address will not be published. Required fields are marked *