Headlines

ದಾವೋಸ್​​ನಲ್ಲಿ ಭಾರತ ಹೊಗಳಿದ ಡಿ.ಕೆ. ಶಿವಕುಮಾರ್​: ರಾಹುಲ್​​ ಕಾಲೆಳೆದ ಕರ್ನಾಟಕ ಬಿಜೆಪಿ

ದಾವೋಸ್​​ನಲ್ಲಿ ಭಾರತ ಹೊಗಳಿದ ಡಿ.ಕೆ. ಶಿವಕುಮಾರ್​: ರಾಹುಲ್​​ ಕಾಲೆಳೆದ ಕರ್ನಾಟಕ ಬಿಜೆಪಿ


ಡಿ.ಕೆ. ಶಿವಕುಮಾರ್

ಬೆಂಗಳೂರು, ಜನವರಿ 23: ಭಾರತದ ಆರ್ಥಿಕತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ನಡುವೆ ದಾವೋಸ್‌ನಲ್ಲಿ ನಡೆದ ವರ್ಲ್ಡ್ ಏಕಾನಮಿಕ್ ಫೋರಂನಲ್ಲಿ ಭಾಗವಹಿಸಿದ್ದ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳಲ್ಲಿ ಬಿಜೆಪಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡುತ್ತಿರುವ ಡಿಕೆಶಿ, ಇಂದು ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದೊಂದಿಗೆ ನೋಡುತ್ತಿದೆ. ನಮ್ಮ ಸಾಧನೆಗಳ ಮೇಲೂ, ಮುಂದೆ ಸಾಗುತ್ತಿರುವ ನಮ್ಮ ನಿರಂತರ ವೇಗದ ಮೇಲೂ ಜಾಗತಿಕ ವಿಶ್ವಾಸ ಹೆಚ್ಚುತ್ತಿದೆ ಎಂದಿದ್ದರು. ಇದೆ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಗೀಗ ಬಿಜೆಪಿ ತಿವಿದಿದೆ.

ಡಿಕೆಶಿಗೆ ಧನ್ಯವಾದ ಹೇಳಿದ ಬಿಜೆಪಿ!

Bjp ಟ್ವೀಟ್

ಬಿಜೆಪಿ ಪೋಸ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಎಷ್ಟೊಂದು ವೇಗವಾಗಿದೆ, ಈಗ ಪಕ್ಷವೂ ಸಹ ಒಪ್ಪಿಕೊಂಡಿದೆ. ಒಂದು ಕಡೆ ರಾಹುಲ್ ಗಾಂಧಿ ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಜಪವನ್ನೇ ಮುಂದುವರಿಸುತ್ತಿರುವಾಗ, ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅದನ್ನು ಖಂಡಿಸಿದ್ದನ್ನು ನೋಡುವುದೇ ಸಂತೋಷಕರವಾಗಿದೆ. ಸತ್ತಿರೋದು ಭಾರತದ ಆರ್ಥಿಕತೆಯಲ್ಲ, ನಿಮ್ಮ ಹೈಕಮಾಂಡ್ನ ವಾಸ್ತವದ ಬಗ್ಗೆ ದೃಢಪಡಿಸಿದ ಧನ್ಯವಾದ ಡಿಕೆಶಿ ಅವರೇ ಎಂದು ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಜಾಗತಿಕ ಹೂಡಿಕೆಗೆ ಭಾರತ ವಿಶ್ವಾಸಾರ್ಹ ತಾಣ; ಹೂಡಿಕೆ ಒಪ್ಪಂದಕ್ಕೆ ಜೋಶಿ ಮಾತುಕತೆ ಫಲಪ್ರದ

‘ಡಿಕೆಶಿ ಸಹನೆಯೂ ಕ್ಷೀಣಿಸುತ್ತಿದೆ’

ಮತ್ತೊಂದೆಡೆ ಡಿಕೆಶಿ ಹೇಳೀಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಕರ್ನಾಟಕ ಕಾಂಗ್ರೆಸ್‌ನ ಗಾಳಿಯ ದಿಕ್ಕೇ ಬದಲಾಗುತ್ತಿದೆಯೇ? ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಾವೋಸ್ ನಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಪಕ್ಷದ ವರಿಷ್ಠ ನಾಯಕನ ಹೇಳಿಕೆಯನ್ನು ಜಾಗತಿಕ ವೇದಿಕೆಯಲ್ಲಿ ನಿಲ್ಲಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನಕ್ಕೆ ಕಾರಣಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ . ಅಧಿಕಾರ ಹಂಚಿಕೆಯ ಭರವಸೆಗಳನ್ನು ಮುಂದೂಡಲಾಗಿದೆ, ಅಧಿಕಾರಕ್ಕೂ ಕಡಿವಾಣ ಹಾಕಲಾಗಿದೆ. ಹೀಗಾಗಿ ಅವರ ಸಹನೆಯೂ ನಿಧಾನವಾಗಿ ಕ್ಷೀಣಿಸುತ್ತಿರುವುದು ಸ್ಪಷ್ಟ. ಈಗ ಅವರ ಧಾಟಿಯೇ ಬದಲಾಗಿದೆ. ರಾಹುಲ್ ಗಾಂಧಿ ಕೇಳಲು ನಿರಾಕರಿಸುವ ಸತ್ಯವನ್ನೇ ಅವರೀಗ ಹೇಳುತ್ತಿದ್ದಾರೆ. ಇದು ದೆಹಲಿಗೆ ಡಿಕೆಶಿ ನೀಡುತ್ತಿರುವ ಸೌಮ್ಯ ಎಚ್ಚರಿಕೆಯೇ? ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಭಾರತವನ್ನು ಟೀಕಿಸಿದ್ದರು. ಅದಕ್ಕೆ ಬೆಂಬಲ ಸೂಚಿಸಿದ್ದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಎಲ್ಲರಿಗೂ ಭಾರತದ ಆರ್ಥಿಕ ಪರಿಸ್ಥಿತಿ ಹೇಗಿದೆ ಭಾರತದ ವಾಸ್ತವದ ಅರಿವಿದೆ ಎಂಬುದಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:02 pm, ಶುಕ್ರ, 23 ಜನವರಿ 26



Source link

Leave a Reply

Your email address will not be published. Required fields are marked *