ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು

ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು


ದೆವ್ವ ಅಥವಾ ಇಲ್ಲ ಎಂಬ ಚರ್ಚೆಯೇ ಹಳೆಯದು. ಇದೇ ಕಲ್ಪನೆ ಇಟ್ಟುಕೊಂಡು ಸಾಕಷ್ಟು ಸಿನಿಮಾ ಹಾಗೂ ವೆಬ್ ಸರಣಿಗಳು ಬಂದು ಹೋಗಿವೆ. ಕೆಲವು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಆಗಿವೆ. ಈಗ ಹಾರರ್ ಸಿನಿಮಾ ಪ್ರಿಯರ ಎದೆಯೂ ನಡುಗುವ ರೀತಿಯ ಹಾರರ್ ಚಿತ್ರವೊಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಈ ಸರಣಿ? ‘ಭಯ್: ದಿ ಗೌರವ್ ತಿವಾರಿ ಮಿಸ್ಟರಿ’. ಈ ಸರಣಿ ಹಿಂದಿಯಲ್ಲಿ ಮಾತ್ರ ವೀಕ್ಷಣೆಗೆ ಬಂದಿದೆ.

ಮಿಸ್ಟರಿ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ‘ಭಯ್’ ಸರಣಿ ಮೂಡಿ ಬಂದಿದೆ. ರಾಬಿ ಗ್ರೇವಲ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ‘ಘೋಸ್ಟ್ ಹ್ಯಾಂಟರ್ ಗೌರವ್ ತಿವಾರಿ: ದಿ ಲೈಫ್ ಆಯಂಡ್ ಲೆಗಸಿ ಆಫ್ ಇಂಡಿಯಾಸ್ ಫೋರ್‌ಮೋಸ್ಟ್ ಪ್ಯಾನಾರ್ಮಲ್ ಇನ್ವೆಸ್ಟಿಗೇಟರ್’ ಪುಸ್ತಕದ ಹೆಸರಿನಲ್ಲಿ ಸಿದ್ಧವಾಗಿದೆ. ಕರಣ್ ಟಾಕರ್ ಅವರು ಗೌರವ್ ತಿವಾರಿ ಪಾತ್ರ ಮಾಡಿದ್ದಾರೆ.

ಗೌರವ್ ತಿವಾರಿ ಅವರು 1984ರಲ್ಲಿ ಜನಿಸಿದರು. ಇವರು ಹುಟ್ಟಿದ್ದು ಬಿಹಾರದಲ್ಲಿ. ಇವರು ಪೈಲಟ್ ಆಗಬೇಕು ಎಂದು ಕನಸು ಕಂಡವರು. ಆ ಕನಸು ನನಸಾಗುತ್ತದೆ ಕೂಡ. ಆತ್ಮಗಳು ಇರೋ ವಿಷಯ ಅವರ ಅನುಭವಕ್ಕೆ ಬರುತ್ತದೆ. ಒಂದು ಆತ್ಮ ತನ್ನ ಅಪಘಾತದಿಂದ ಕಾಪಾಡುತ್ತದೆ. ಅವರು ಪೈಲಟ್ ಕೆಲಸ ತೊರೆದು ಘೋಸ್ಟ್ ಹ್ಯಾಂಟರ್ ಆಗುತ್ತಾರೆ. ಅಲ್ಲಿಂದ ಅವರ ಪ್ರಯಾಣ ಶುರು. ಕೇವಲ 31ನೇ ವಯಸ್ಸಿಗೆ ಮಿಸ್ಟರಿ ರೀತಿಯಲ್ಲಿ ಗೌರವ್ ನಿಧನ ಹೊಂದುತ್ತಾರೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ

ಗೌರವ್ ಜೀವನ ಆಧಾರಿತ ಸಿದ್ಧವಾದ ಪುಸ್ತಕ ‘ಭಯ್’ ವೆಬ್ ಸೀರಿಸ್ ಮಾಡಲಾಗಿದೆ. 8 ಎಪಿಸೋಡ್‌ಗಳನ್ನು ಈ ಸರಣಿ ಹೊಂದಿದೆ. ನೈಜ ಘಟನೆ ಆಗಿರುವುದರಿಂದ ಹೆಚ್ಚು ಥ್ರಿಲ್ ಕೊಡುತ್ತವೆ. ಕೆಲವು ಒರಿಜಿನಲ್ ಕ್ಲಿಪ್‌ಗಳನ್ನು ಕೂಡ ಹಾಕಲಾಗಿದೆ. ಗೌರವ್ ಎದುರಿಸಿದ ಸವಾಲನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಗಟ್ಟಿ ಗುಂಡಿಗೆ ಇರುವವರು ಈ ಸರಣಿಯನ್ನು ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *