Headlines

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಹೊತ್ತಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಹೊತ್ತಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ


ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಹೊತ್ತು ತಪ್ಪದೇ ಈ ಕೆಲಸಗಳನ್ನು ಮಾಡಿ

ಇಂದಿನ ಈ ಬ್ಯೂಸಿ ಜೀವನದಲ್ಲಿ ಅನೇಕರಿಗೆ ನೆಮ್ಮದಿ ಅನ್ನೋದೇ ಇಲ್ಲದಾಗಿದೆ. ಹೆಚ್ಚಿನವರು ಒತ್ತಡದ ಜೀವನವನ್ನೇ (ಒತ್ತಡದ ಜೀವನ) ನಡೆಸುತ್ತಿದ್ದಾರೆ. ಮನಸ್ಸು ನಿರಾಳವಾಗಿ ಜೀವನದಲ್ಲಿ ಮಾತ್ರ ಸಂತೋಷ, ನೆಮ್ಮದಿ, ಶಾಂತಿ ನೆಲೆಸುತ್ತದೆ. ಯಾವುದೇ ಮನಸ್ಸನ್ನು ನಿರಾಳವಾಗಿಸಲು ಶಾಂತಿ ನೆಮ್ಮದಿಯನ್ನು ಪಡೆಯಲು ಸಾಕಷ್ಟು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಏನೇ ಮಾಡಿದ್ರೂ ನೆಮ್ಮದಿ ಅನ್ನೋದೇ ಸಿಗುತ್ತಿಲ್ಲ ಅಂತ ಅನೇಕರು ಹೇಳುತ್ತಿರುತ್ತಾರೆ. ನೀವು ಕೂಡ ಇದೆ ರೀತಿ ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಹಂಬಲಿಸುತ್ತಿದ್ದೀರಾ? ಹಾಗಿದ್ರೆ ಸಂಜೆಯ ಹೊತ್ತಿನಲ್ಲಿ ತಪ್ಪದೆ ಈ ಕೆಲವು ಕೆಲಸಗಳನ್ನು ಮಾಡಿ, ಇದರಿಂದ ಇಡೀ ದಿನದ ಆಯಾಸ ಒತ್ತಡದ ಕ್ಷಣದಲ್ಲಿ ಮಾಯವಾಗಿ ನೆಮ್ಮದಿ ಸಿಗುತ್ತದೆ.

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಈ ಕೆಲಸಗಳನ್ನು ಮಾಡಿ:

ಆಳವಾದ ವ್ಯಾಯಾಮ: ಇಡೀ ದಿನದ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ನಿತ್ಯ ಸಂಜೆ ಹೊತ್ತಿನಲ್ಲಿ ವ್ಯಾಯಾಮವನ್ನು ಅಭ್ಯಾಸ ಮಾಡಿ. ಪ್ರತಿದಿನ ಸಂಜೆ 10 ರಿಂದ 15 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಒತ್ತಡ, ಮನಸ್ಸಿಗೆ ಶಾಂತಿ ಸಿಗುತ್ತದೆ.

ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ: ಸಂಜೆ ನಿಮ್ಮ ಎಲ್ಲಾ ಕೆಲಸ ಮುಗಿದ ತಕ್ಷಣ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ನಿರಾಳಗೊಳಿಸುತ್ತದೆ.

ಸಾಮಾಜಿಕ ಮಾಧ್ಯಮದಿಂದ ದೂರವಿರಿ: ಕೆಲಸದಿಂದ ಮನೆಗೆ ಬಂದ ತಕ್ಷಣ ಸೋಷಿಯಲ್‌ ಮೀಡಿಯಾ ನೋಡುತ್ತಾ, ಮೊಬೈಲ್‌ ಸ್ಕ್ರೋಲ್‌ ಮಾಡುತ್ತಾ ಟೈಮ್‌ ವೆಸ್ಟ್‌ ಮಾಡುವ ಬದಲು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಿರಿ, ಮನೆ ಕೆಲಸಗಳನ್ನು ಮಾಡಿ. ಈ ಅಭ್ಯಾಸ ನಿಮಗೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ವಾಕಿಂಕ್ ಮಾಡಿ: ಸಂಜೆ ಕಚೇರಿಯಿಂದ ಬಂದ ನಂತರ ಮೊಬೈಲ್ ನೋಡುವ ಬದಲು ವಾಕಿಂಗ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 15 ರಿಂದ 20 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನ್ ಆದ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸಿಗೆ ಸಂತೋಷ ದೊರೆಯುತ್ತದೆ.

ಡೈರಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ: ನೀವು ದಿನವಿಡೀ ಏನೆಲ್ಲಾ ಮಾಡಿದ್ದೀರಿ, ನಾಳೆ ಏನೆಲ್ಲಾ ಮಾಡಬೇಕು ಸಂಜೆ ಹೊತ್ತಿನಲ್ಲಿ ಡೈರಿಯಲ್ಲಿ ಬರೆಯಿರಿ. ಡೈರಿ ಬರೆಯುವ ಅಭ್ಯಾಸ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ಗಿಡಮೂಲಿಕಾ ಚಹಾ ಸೇವಿಸಿ: ಸಂಜೆ ಒಂದು ಲೋಟ ಗಿಡಮೂಲಿಕಾ ಚಹಾ ಸೇವನೆ ಮಾಡಿ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಾತ್ರಿ ಉತ್ತಮ ನಿದ್ರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಸಲಹೆ

ಪುಸ್ತಕ ಓದಿ: ಸಂಜೆ ಕಛೇರಿಯಿಂದ ಬಂದ ನಂತರ ಕೆಲಸಗಳನ್ನೆಲ್ಲಾ ಮುಗಿಸಿ, ಒಂದೊಳ್ಳೆ ಪುಸ್ತಕವನ್ನು ಓದಿ. ಈ ರೀತಿ ಪುಸ್ತಕವನ್ನು ಓದುವುದರಿಂದ ಒತ್ತಡವೆಲ್ಲಾ ನಿವಾರಣೆಯಾಗಿ ಮನಸ್ಸು ನಿರಾಳವಾಗುತ್ತದೆ.

ನಿಮ್ಮ ನೆಚ್ಚಿನ ಪದಗಳನ್ನು ಕೇಳಿ: ಸಂಜೆ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತು ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಿ. ಹೀಗೆ ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಇಡೀ ದಿನದ ಒತ್ತಡ ಕಡಿಮೆಯಾಗುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *