ಕೂದಲು ಬೆಳೆಯೋದು 10 ಪಟ್ಟು ಸೂಪರ್‌ಫಾಸ್ಟ್‌ ಆಗುತ್ತೆ, ಸಾಸಿವೆ ಎಣ್ಣೆಗೆ ಈ 2 ಪದಾರ್ಥ ಮಿಕ್ಸ್ ಮಾಡಿ ಸಾಕು

ಕೂದಲು ಬೆಳೆಯೋದು 10 ಪಟ್ಟು ಸೂಪರ್‌ಫಾಸ್ಟ್‌ ಆಗುತ್ತೆ, ಸಾಸಿವೆ ಎಣ್ಣೆಗೆ ಈ 2 ಪದಾರ್ಥ ಮಿಕ್ಸ್ ಮಾಡಿ ಸಾಕು

ಕೂದಲು ಬೆಳೆಯೋದು 10 ಪಟ್ಟು ಸೂಪರ್‌ಫಾಸ್ಟ್‌ ಆಗುತ್ತೆ, ಸಾಸಿವೆ ಎಣ್ಣೆಗೆ ಈ 2 ಪದಾರ್ಥ ಮಿಕ್ಸ್ ಮಾಡಿ ಸಾಕು

ಬಹುತೇಕರ ಸಮಸ್ಯೆಯೆಂದರೆ ಜನರಿಗೆ ಈ ಎಣ್ಣೆಯನ್ನು ಸರಿಯಾಗಿ ಬಳಸುವುದು ಹೇಗೆಂದು ಗೊತ್ತಿಲ್ಲ. ನಿಮಗೂ ಹೀಗೆ ಅನಿಸಿದರೆ ಈ ಲೇಖನ ನಿಮಗಾಗಿಯೇ…

ಸಾಸಿವೆ ಎಣ್ಣೆಯದು ಕಹಿ ರುಚಿ. ಅಷ್ಟು ಸುಲಭಕ್ಕೆ ಅದನ್ನ ಯಾರೂ ಇಷ್ಟಪಡಲ್ಲ. ಚಿಕ್ಕವರು ಇರಲಿ, ದೊಡ್ಡವರೂ ಈ ಎಣ್ಣೆಯನ್ನು ಇಷ್ಟಪಡಲ್ಲ. ನೀವು ಕೂಡ ಈ ಎಣ್ಣೆ ಕೆಟ್ಟ ವಾಸನೆ ಹೊಡೆಯುತ್ತೆಂದು ಅದರಿಂದ ದೂರ ಸರಿಯುತ್ತಿದ್ದರೆ ಇದರಿಂದ ನಿಮಗೆ ಎಷ್ಟು ನಷ್ಟವಾಗುತ್ತಿದೆ ಎಂದು ಬೇಸರ ಮಾಡಿಕೊಳ್ಳಬೇಕು. ಯಾಕಂದ್ರೆ ಸಾಸಿವೆ ಎಣ್ಣೆ ಕೂದಲಿಗೆ ಮಾತ್ರವಲ್ಲದೆ, ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಆದರೆ ಬಹುತೇಕರ ಸಮಸ್ಯೆಯೆಂದರೆ ಜನರಿಗೆ ಈ ಎಣ್ಣೆಯನ್ನು ಸರಿಯಾಗಿ ಬಳಸುವುದು ಹೇಗೆಂದು ಗೊತ್ತಿಲ್ಲ. ನಿಮಗೂ ಇದೇ ಸಮಸ್ಯೆಯೆಂದು ಅನಿಸಿದರೆ ಈ ಲೇಖನ ನಿಮಗಾಗಿಯೇ…

ಹೌದು, ಜೈಪುರದ ಆಯುರ್ವೇದ ವೈದ್ಯ ಮನೋಜ್ ದಾಸ್ ಸಾಸಿವೆ ಎಣ್ಣೆಯ ಸರಿಯಾದ ಬಳಕೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ನಾವು ಮೂಗು ಮುರಿಯುವ ಈ ಎಣ್ಣೆಯು ಕೂದಲಿನ ಅನೇಕ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.

ಸಾಸಿವೆ ಎಣ್ಣೆಕಪ್ಪು ಎಳ್ಳು ಬೀಜಗಳುಅಮರಬೆಲ್ ( ಗ್ರಂಥಿಗೆ ಅಂಗಡಿಯಲ್ಲಿ ಲಭ್ಯ)

(ಗಮನಿಸಿ:ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪದಾರ್ಥಗಳ ಪ್ರಮಾಣವನ್ನು ಹೊಂದಿಸಿ.)
View this post on Instagram
A post shared by Dr. Manoj Das (@drmanojdasjaipur)

ಈ ಎಣ್ಣೆ ತಯಾರಿಸಲು ಮೊದಲು ನೀವು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಬೇಕು. ಈಗ ಕಪ್ಪು ಎಳ್ಳನ್ನು ಚೆನ್ನಾಗಿ ಪುಡಿಮಾಡಿ ಈ ಎಣ್ಣೆಗೆ ಸೇರಿಸಿ. ಅಂತಿಮವಾಗಿ, ನೀವು ಅದಕ್ಕೆ ಅಮರಬೆಲ್ ಅನ್ನು ಸೇರಿಸಬೇಕು. ಈಗ ಮೂರು ಪದಾರ್ಥಗಳು ಚೆನ್ನಾಗಿ ಬಿಸಿಯಾಗಲು ಬಿಡಿ. ಅಮರಬೆಲ್ ಮತ್ತು ಕಪ್ಪು ಎಳ್ಳು ಹುರಿಯುವವರೆಗೆ ನೀವು ಅವುಗಳನ್ನು ಗ್ಯಾಸ್ ಮೇಲೆ ಇಡಬೇಕು.

ನೀವು ತಯಾರಿಸಿದ ಎಣ್ಣೆಯನ್ನು ಶೋಧಿಸಿ ಬಾಟಲಿಯಲ್ಲಿ ಸಂಗ್ರಹಿಸಬೇಕು. ನೀವು ಈ ಎಣ್ಣೆಯಿಂದ ವಾರಕ್ಕೆ 2 ಅಥವಾ 3 ಬಾರಿ ಡೀಪ್ ಮಸಾಜ್ ಮಾಡಬೇಕು. ಅದನ್ನು ರಾತ್ರಿಯಿಡೀ ಹಚ್ಚಿ ಬೆಳಗ್ಗೆ ನಿಮ್ಮ ಕೂದಲನ್ನು ತೊಳೆಯಬೇಕು. ಈ ಎಣ್ಣೆಯಲ್ಲಿ ಬಳಸುವ ಪದಾರ್ಥಗಳ ಪ್ರಯೋಜನಗಳನ್ನು ಈಗ ತಿಳಿದುಕೊಳ್ಳೋಣ.

ಸಾಸಿವೆ ಎಣ್ಣೆ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದು ಕೂದಲನ್ನು ಬೇರುಗಳಿಂದ ಬಲಪಡಿಸಲು ಸಹಾಯ ಮಾಡುತ್ತದೆ. ಈ ಎಣ್ಣೆ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಕಪ್ಪು ಎಳ್ಳು ಕೂದಲನ್ನು ಆಳವಾಗಿ ಪೋಷಿಸುತ್ತದೆ. ಇದು ಕೂದಲು ಅಕಾಲಿಕವಾಗಿ  ಬಿಳಿ ಬಣ್ಣಕ್ಕೆ ತಿರುಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಕೂದಲಿನ ಹೊಳಪು ಹೆಚ್ಚಾಗುತ್ತದೆ.

ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅಮರಬೆಲ್ ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೊಸ ಕೂದಲನ್ನು ಬೆಳೆಸಲು ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Source link

Leave a Reply

Your email address will not be published. Required fields are marked *