Headlines

ಧೂಮಪಾನ ನಿಜಕ್ಕೂ ಒತ್ತಡವನ್ನು ಕಡಿಮೆ ಮಾಡುತ್ತದೆಯೇ? ತಜ್ಞರು ಈ ಬಗ್ಗೆ ಏನೆನ್ನುತ್ತಾರೆ

ಧೂಮಪಾನ ನಿಜಕ್ಕೂ ಒತ್ತಡವನ್ನು ಕಡಿಮೆ ಮಾಡುತ್ತದೆಯೇ? ತಜ್ಞರು ಈ ಬಗ್ಗೆ ಏನೆನ್ನುತ್ತಾರೆ


ಸಿಗರೇಟ್ಸಿಗರೇಟುಗಳು) ಸೇದುವ ಅಭ್ಯಾಸದ ಮೇಲೆ ಗಂಭೀರವಾದ ಪರಿಣಾಮವಿದೆ ಎಂದು ತಿಳಿದಿದ್ದರೂ ಸಹ ಸಿಗರೇಟು ಸೇದಿದ್ದಾರೆ. ಅದರಲ್ಲೂ ಕೆಲವರಂತೂ ತಮ್ಮ ಮನಸ್ಸಿಗೆ ಏನಾದ್ರೂ ನೋವಾಗ, ಒತ್ತಡದಲ್ಲಿದ್ದಾಗ ಸಿಗರೇಟ್ ಸೇದುತ್ತಾರೆ. ಹೌದು ಒತ್ತಡದಲ್ಲಿ ಸಿಗರೇಟ್ ಸೇದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಒತ್ತಡ ದೂರವಾಗುತ್ತದೆ ಎಂದು ಹೇಳಿ ಧೂಮಪಾನ ಮಾಡುತ್ತಾರೆ. ಅನೇಕ ಜನರು ಈ ರೀತಿ ಹೇಳುವುದನ್ನು ನೀವು ಸಹ ಕೇಳುತ್ತೀರಿ ಅಲ್ವಾ. ಹಾಗಿದ್ರೆ ನಿಜಕ್ಕೂ ಸಿಗರೇಟ್‌ ಸೇದುವುದರಿಂದ ಒತ್ತಡ ದೂರವಾಗುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತಾ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಆರೋಗ್ಯ ನಿಜವಾಗಿಯೂ ಒತ್ತಡವನ್ನು ಕಡಿಮೆ ಮಾಡುತ್ತದೆಯೇ?

ತುಂಬಾಕಿನಲ್ಲಿ ನಿಕೋಟಿನ್ ಎಂಬ ರಾಸಾಯನಿಕವು ಸೌಮ್ಯವಾದ ಉತ್ತೇಜಕ ಮತ್ತು ಕೆಲವು ನಿಮಿಷಗಳ ಕಾಲ ಇರುವ ಪರಿಹಾರದ ಭಾವನೆಯನ್ನು ಉಂಟುಮಾಡುತ್ತದೆ. ಈ ನಿಕೋಟಿನ್ ದೇಹದಲ್ಲಿ ಡೋಪಮೈನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಸಂತೋಷದ ಭಾವನೆಯನ್ನು ಮೂಡಿಸುವ ಹಾರ್ಮೋನ್ ಆಗಿದ್ದು, ಈ ಹಾರ್ಮೋನ್ ದೇಹಕ್ಕೆ ಬಿಡುಗಡೆಯಾದಾಗ, ಮನಸ್ಸಿಗೆ ಖುಷಿ. ಈ ಕಾರಣದಿಂದ ಅನೇಕ ಜನರು ಸಿಗರೇಟ್ ಸೇದಿದ ಬಳಿಕ ತಮ್ಮ ಒತ್ತಡ ನಿವಾರಣೆಯಾಗಿದೆ ಎಂದು ಹೇಳುತ್ತಾರೆ.

ನಿಕೋಟಿನ್ ಸ್ಥಿತಿಯನ್ನು ಸುಧಾರಿಸಬಹುದು, ಆದರೆ ಅದು ಕೆಲವು ಸೆಕೆಂಡುಗಳವರೆಗೆ ಮಾತ್ರ ಇರುತ್ತದೆ. ಉಸಿರಾಟದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ, ಬದಲಾಗಿ, ಕಾಲಾನಂತರ, ದೇಹವು ನಿಕೋಟಿನ್ ಅನ್ನು ಕಳೆದುಕೊಂಡಂತೆ, ಅದು ಚಡಪಡಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ನಿಕೋಟಿನ್ ಮಟ್ಟ ಕಡಿಮೆಯಾದಾಗ, ಮತ್ತೆ ಧೂಮಪಾನ ಮಾಡುವ ಹಂಬಲವನ್ನು ಅನುಭವಿಸುತ್ತಾನೆ. ಈ ದೇಹ ಮತ್ತು ಮನಸ್ಸಿನ ಮೇಲೆ ಒತ್ತಡದ ಚಕ್ರವು ಹೆಚ್ಚಾಗಿರುತ್ತದೆ. ಜೊತೆಗೆ ಇದು ಆತಂಕ, ಕಿರಿಕಿರಿ, ನಿದ್ರಾಹೀನತೆಯ ಸಮಸ್ಯೆಗಳು. ಜೊತೆಗೆ ಧೂಮಪಾನ ಮಾಡುವ ವ್ಯಕ್ತಿಗಳಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆ, ಕೆಮ್ಮು ಮತ್ತು ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಧೂಮಪಾನವು ಒತ್ತಡದಿಂದ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ, ಆದರೆ ದೀರ್ಘಾವಧಿ, ಇದು ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮತ್ತು ಮಾನಸಿಕ, ದೈಹಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ನಿರಾಳಗೊಳಿಸಲು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಯಾವಾಗಲೂ ಉತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ.

ಇದನ್ನೂ ಓದಿ: ಆರೋಗ್ಯ, ಸೂಪರ್ ಫಿಟ್ ಆಗಿರಲು ಬೆಳಗಿನ ದಿನಚರಿಯಲ್ಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಒತ್ತಡದಿಂದ ಮುಕ್ತಿ ಪಡೆಯಲು ಆರೋಗ್ಯಕರ ಮಾರ್ಗಗಳು ಯಾವುವು?

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಕೆಲವು ಆರೋಗ್ಯಕರ ಪರ್ಯಾಯಗಳು ಇಲ್ಲಿವೆ:

ವ್ಯಾಯಾಮ ಮತ್ತು ಯೋಗ: ಇದು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ.

ಧ್ಯಾನ ಮತ್ತು ಮೈಂಡ್ಫುಲ್ನೆಸ್: ಇದು ಮಾನಸಿಕ ಶಾಂತಿ, ನೆಮ್ಮದಿಯನ್ನು ಮತ್ತು ಗಮನವನ್ನು ಹೊಂದಿದೆ.

ಆರೋಗ್ಯಕರ ಆಹಾರ: ಸಕ್ಕರೆ ಮತ್ತು ಕೆಫೀನ್ ಸೇವನೆಯನ್ನು ನಿಯಂತ್ರಿಸುವುದರಿಂದ ಆರೋಗ್ಯಕರ ಆಹಾರ ಸೇವನೆಯು ನಿಮ್ಮ ಸ್ಥಿತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಸಾಮಾಜಿಕ ಬೆಂಬಲ: ಒಂಟಿಯಾಗಿ ಕುಳಿತು ಸಿಗರೇಟ್ ಸೇವ ಬದಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ. ಇದರಿಂದ ಒತ್ತಡ.

ಹವ್ಯಾಸಗಳು ಮತ್ತು ಚಟುವಟಿಕೆಗಳು: ಚಿತ್ರಕಲೆ, ಪೇಂಟಿಂಗ್, ಗಾರ್ಡನಿಂಗ್ ಇತ್ಯಾದಿ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳಿ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿಮ್ಮೊಳಗೆ ಸಕರಾತ್ಮಕತೆಯನ್ನು ಹೊಂದಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:54 pm, ಭಾನುವಾರ, 22 ಫೆಬ್ರವರಿ 26



Source link

Leave a Reply

Your email address will not be published. Required fields are marked *