
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋಗೆ ‘ಮಾರ್ಕ್’ ಸಿನಿಮಾದ ಹಾಡು ಬಳಸಿದ್ದಕ್ಕೆ ಡಾಗ್ ಸತೀಶ್ (ನಾಯಿ ಸತೀಶ್) ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿನಯ್ ಗೌಡ, ರಜತ್ ಮುಂತಾದವರು ಸತೀಶ್ ಮೇಲೆ ಗರಂ ಆಗಿದ್ದರು. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಬಗ್ಗೆ ಸತೀಶ್ ಮಾತಾಡಿದ್ದಾರೆ. ‘ಸತ್ರೂ ನಾನು ವಿಡಿಯೋ ಡಿಲೀಟ್ ಮಾಡಲ್ಲ. ನಾನು ಇರುವುದೇ ಹೀಗೆ. ತಪ್ಪು ಮಾಡಲ್ಲ. ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ. ತಪ್ಪು ಮಾಡಿಲ್ಲ ಎಂದರೆ ಎಲ್ಲಿಗೆ ಹೋಗಬೇಕು ನಾನು ಸಿದ್ಧ. ಎಫ್ಐಆರ್ ಆಗುತ್ತಿದ್ದಂತೆಯೇ ವಿನಯ್ ಗೌಡ (ವಿನಯ್ ಗೌಡ) ರಾಜಿ ಅಂತ ಮಸೇಜ್ ಮಾಡಿದ್ದಾರೆ. ನನ್ನನ್ನು ಕೆಣಕುವಾಗ ಅವರು ಯೋಚನೆ ಮಾಡಬೇಕಿತ್ತು’ ಎಂದು ಡಾಗ್ ಸತೀಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.