
ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ (ಡಾಗ್ ಸತೀಶ್) ಅವರು ಶೌಚಾಲಯದಲ್ಲಿ ಇರುವಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ದಾದಾ ಯಾರ್ ಗೊತ್ತಾ..’ ಹಾಡನ್ನು ಬಳಸಲಾಗಿದೆ. ಅದಕ್ಕೆ ರಜತ್, ವಿನಯ್ ಗೌಡ ಮುಂತಾದವರು ತಕರಾರು ತೆಗೆದರು. ಆ ವಿಚಾರ ಈಗ ವಿವಾದಕ್ಕೆ ತಿರುಗಿದೆ. ಹಲವು ವರ್ಷಗಳ ಕಾಲ ಕಷ್ಟಪಟ್ಟು ಸುದೀಪ್ (ಕಿಚ್ಚ ಸುದೀಪ್) ಅವರು ಮೇಲಕ್ಕೆ ಬಂದಿದ್ದಾರೆ. ಅಂಥವರ ಹಾಡನ್ನು ಈ ರೀತಿ ಬಳಸಿದ್ದು ಸರಿಯೇ ಎಂಬ ಪ್ರಶ್ನೆಗೆ ಡಾಗ್ ಸತೀಶ್ ಅವರು ಉತ್ತರ ನೀಡಿದ್ದಾರೆ.
‘ಸುದೀಪ್ ಸರ್ ಬಹಳ ಕಷ್ಟಪಟ್ಟು ಹೆಸರು ಮಾಡಿದ್ದಾರೆ ಅಂತ ನೀವು ಹೇಳಿದ್ದೀರಿ. ಆದರೆ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ? ಗೂಗಲ್ ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವಂತಹ ಹಂತಕ್ಕೆ ಆಗಿದ್ದಾರಾ? ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ನಾಯಿ ಪೀಲ್ಡ್ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಬರುತ್ತೇನೆ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್ ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ’ ಎಂದು ಡಾಗ್ ಸತೀಶ್ ಪ್ರಶ್ನೆ ಮಾಡಿದ್ದಾರೆ.
‘ಸುದೀಪ್ ಅವರು ಕಷ್ಟಪಟ್ಟು ಅವರ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನಂಬರ್ 1 ಆಗಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೇನೆ. ನಾನು ಕೂಡ ಕಷ್ಟಪಟ್ಟಿದ್ದೇನೆ. ನನ್ನ ತಲೆ ಮೇಲೆ ಎರಡು ಕೊಂಬು ಇದೆ ಅಂತ ನಾನು ಯಾವತ್ತೂ ಮಾತನಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದಾದಾ ಯಾರ್ ಗೊತ್ತಾ ಹಾಡನ್ನು ನಾನು ಬಳಸಿದ್ದು ತಪ್ಪಲ್ಲ’ ಎಂದು ಡಾಗ್ ಸತೀಶ್ ಹೇಳಿದ್ದಾರೆ.
‘ರಜತ್, ವಿನಯ್ ಮತ್ತು ಧನರಾಜ್ ಪ್ರಚೋದನೆ ಮಾಡಿದ್ದು ಇಷ್ಟೆಲ್ಲ ಆಗಿದ್ದು. ಎಲ್ಲ ಕಡೆ ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಹಾಕಿದ್ದು ಅವರೇ ತಾನೇ? ಅವರು ಸುಮ್ಮನೆ ಇದ್ದಿದ್ದರೆ ಮಾಮೂಲಿಯಾಗಿ ಇಷ್ಟೊಂದು ಸುದ್ದಿ ಆಗುತ್ತಿತ್ತಾ? ನಾನು ಮಾಡಿದ್ದು ತಪ್ಪೇ ಇಲ್ಲ’ ಎಂದು ಡಾಗ್ ಸತೀಶ್ ಅವರು ವಾದಿಸಿದ್ದಾರೆ.
ಇದನ್ನೂ ಓದಿ: ಸುದೀಪ್ ಸುಮ್ಮನಿರುವ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್
‘ಅವರು ನನ್ನ ಮೇಲೆ ದೂರು ಕೊಡಲು ಚೆನ್ನಮ್ಮನ ಕೆರೆಗೆ ಹೋಗಿದ್ದಾರೆ. ನನ್ನ ವಿಡಿಯೋದಲ್ಲಿ ತಪ್ಪು ಇಲ್ಲದ ಕಾರಣ ಚೆನ್ನಮ್ಮನ ಕೆರೆ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಬನಶಂಕರಿ ಠಾಣೆಯಲ್ಲೂ ಅವರಿಗೆ ಬೈಯ್ದು ಕಳಿಸಿದ್ದಾರೆ. ಅವರು ದೂರು ಕೊಡದೇ ಸುಳ್ಳು ಹೇಳುತ್ತಿದ್ದಾರೆ. ಅದು ಅಪರಾಧ. ನನ್ನ ವಿಡಿಯೋಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ, ಬೆದರಿಕೆ ಹಾಕಿದ್ದಾರೆ. ಅದು ಸಮಾಜಕ್ಕೆ ಏನು ಸಂದೇಶ ಕೊಡುತ್ತದೆ?’ ಎಂದು ಡಾಗ್ ಸತೀಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.