Headlines

Namma Metro: ಆರೆಂಜ್ ಲೈನ್ ಮೆಟ್ರೋ ಕಾಮಗಾರಿ; ಬೆಂಗಳೂರಲ್ಲಿ ಮತ್ತೊಂದು ಫ್ಲೈ ಓವರ್ ಡೆಮಾಲಿಷ್?

Namma Metro: ಆರೆಂಜ್ ಲೈನ್ ಮೆಟ್ರೋ ಕಾಮಗಾರಿ; ಬೆಂಗಳೂರಲ್ಲಿ ಮತ್ತೊಂದು ಫ್ಲೈ ಓವರ್ ಡೆಮಾಲಿಷ್?


ಆರೆಂಜ್ ಲೈನ್ ಮೆಟ್ರೋ ಕಾಮಗಾರಿ; ಬೆಂಗಳೂರಿನಲ್ಲಿ ಮತ್ತೊಂದು ಫ್ಲೈ ಡೆಮಾಲಿಷ್?

ಬೆಂಗಳೂರು, ಜನವರಿ 24: ಜೆಪಿ ನಗರದ ಸುತ್ತಮುತ್ತಲಿನ ಡಾಕ್ಸ್ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಡಾಲರ್ಸ್ ಕಾಲೋನಿ ಜಂಕ್ಷನ್ ಫ್ಲೈಓವರ್ ಅನ್ನು ಡೆಮಾಲಿಷನ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಟೆಂಡರ್ ಕರೆದಿದೆ. ದೇವದೇವ ಫ್ಲೋವರ್ ತೆರವು ಬಳಿಕ ಈಗ ಮತ್ತೊಂದು ಮೇಲ್ಸುತುವೆ ತೆರೆವಿಗೆ ಮುಂದಾಗಿರುವುದು ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ತೀವ್ರ ಬೇಸರ ಮೂಡಿಸಿದೆ.

ಒಂದು ಕೀಮೀ ಉದ್ದದ ಮೇಲ್ಸೇತುವೆ ತೆರವು!

ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2018 ರಲ್ಲಿ ಸುಮಾರು 25 ಕೋಟಿ ರೂ. ಈ ಫ್ಲೈಓವರ್, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ಜಯನಗರ ಸುತ್ತಮುತ್ತಲಿನ ಪ್ರದೇಶಗಳ ಸಂಚಾರಕ್ಕೆ ಮಹತ್ವದ ನೆರವೇರಿತು. ಸುಮಾರು ಒಂದು ಕಿಲೋಮೀಟರ್ ಉದ್ದದ ಈ ಮೇಲ್ಸುತುವೆ ತೆರವುಗೊಳ್ಳದಂತೆ ದಿನನಿತ್ಯದ ಸಂಚಾರಕ್ಕೆ ಉಂಟಾಗಲಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದು ಟ್ರಾಫಿಕ್ ನಿಂದ ಬೇಸತ್ತಿರುವ ಬೆಂಗಳೂರಿಗರಿಗೆ ಗುಡ್ನ್ಯೂಸ್, ಕೇಂದ್ರದತ್ತ ಎಲ್ಲರ ಚಿತ್ತ

ಕಾಮಗಾರಿ ಮುಗಿಯುವವರೆಗೆ ಟ್ರಾಫಿಕ್ ಸಮಸ್ಯೆ

ಬಿಎಂಆರ್ಸಿಎಲ್ ಆರೆಂಜ್ ಲೈನ್ ಮೆಟ್ರೋ ಯೋಜನೆಡಿ ಡಬಲ್ ಡೆಕ್ಕರ್ ಮಾರ್ಗ ಫ್ಲೈಓವರ್ ಜೊತೆಗೆ ಮೆಟ್ರೋ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ, ಇತ್ತೀಚೆಗೆ ಸಿವಿಲ್ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಮೂರನೇ ಹಂತದಲ್ಲಿ ಮೆಟ್ರೋ ಯೋಜನೆಯಾದ ಆರೆಂಜ್ ಲೈನ್ ಒಟ್ಟು 44.65 ಕಿಮೀ ವಿಸ್ತೀರ್ಣ ಹೊಂದಿದ್ದು, ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮೊದಲ ಕಾರಿಡಾರ್ ಹಾಗೂ ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆವರೆಗೆ ಎರಡನೇ ಕಾರಿಡಾರ್ ಒಳಗೊಂಡಿದೆ. ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಮೆಟ್ರೋ ಕಾಮಗಾರಿಗೆ ಸ್ವಾಗತವಾದರೂ, ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಪೂರ್ಣಗೊಳ್ಳುವವರೆಗೆ ಸಂಚಾರ ಸಮಸ್ಯೆ ಇದ್ದೇ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *