ವಾಷಿಂಗ್ಟನ್, ಫೆಬ್ರವರಿ 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಡೊನಾಲ್ಡ್ ಟ್ರಂಪ್) ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡುವಾಗ ಭಾರತ-ಪಾಕಿಸ್ತಾನದ ಸಮಘರ್ಷವನ್ನು ಕೂಡ ಪ್ರಸ್ತಾಪಿಸಿದ್ದಾರೆ. ಈ ವೇಳೆ ಆ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಪ್ರಧಾನಿಗೆ ‘ಸ್ಟಾಂಡ್ ಆಪ್’ ಎಂದು ಹೇಳಿದ್ದಾರೆ. ಟ್ರಂಪ್ ಮಾತಿನಂತೆ ಎದ್ದುನಿಂತ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಿಂತೇ ಇರಬೇಕೋ, ಕುಳಿತುಕೊಳ್ಳಬೇಕೋ ಎಂದು ಗೊತ್ತಾಗದೆ ಮುಜುಗರಕ್ಕೀಡಾಗಿದ್ದಾರೆ. ಈ ವೇಳೆ ಟ್ರಂಪ್ ಭಾರತದ ಪ್ರಧಾನಿ ಮೋದಿಯ ಹೆಸರನ್ನು ಪ್ರಸ್ತಾಪಿಸಿ ಮೋದಿ ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ. ಇದರಿಂದ ಶೆಹಬಾಜ್ ಷರೀಫ್ಗೆ ತೀವ್ರ ಮುಖಭಂಗವಾಗಿದೆ. ಟ್ರಂಪ್ ಹೇಳುವಂತೆ ಕೀಲಿ ಕೊಟ್ಟ ಗೊಂಬೆಯಂತೆ ಎದ್ದುನಿಂತ ಪಾಕ್ ಪ್ರಧಾನಿ ಈ ‘ಸ್ಟಾಂಡ್ ಆಪ್’ ಕಾಮಿಡಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ