Headlines

ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊರ ವರಸೆ

ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊರ ವರಸೆ


ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊರ ವರಸೆ

ವಾಷಿಂಗ್ಟನ್, ಮಾರ್ಚ್ 26: ಇರಾನ್ ಜೊತೆಗಿನ ಯುದ್ಧ ಆರಂಭವಾದ ದಿನ ಬೆಳಗಾದರೆ ಹೊಸ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ (ಡೊನಾಲ್ಡ್ ಟ್ರಂಪ್) ಚಿಕಿತ್ಸೆಯಾಗಿಬಿಟ್ಟಿದೆ! ಪಶ್ಚಿಮ ಏಷ್ಯಾ ಯುದ್ಧವು ಇಂದು 27ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ನಮ್ಮ ಮುಂದೆ ಮಂಡಿಯೂರಿದೆ, ಆದರೆ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ ಎಂದು ಹೇಳಿರುವ ಟ್ರಂಪ್ ಇರಾನ್‌ಗೆ ಜೀವಭಯ ಕಾಡುತ್ತಿದೆ. ಹಾಗೇ, “ಇರಾನ್‌ನ ಸುಪ್ರೀಂ ನಾಯಕ ನಾನೇ ಆಗಬೇಕೆಂದು ಇರಾನ್ ಬಯಸಿತ್ತು. ಆದರೆ ನಾನೇ ಅದಕ್ಕೆ ಒಪ್ಪಲಿಲ್ಲ” ಎಂಬ ಹೇಳಿಕೆಯನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕದಲ್ಲಿ ರಿಪಬ್ಲಿಕನ್ ನಿಧಿಸಂಗ್ರಹಣೆಯಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಮ್ಮೊಂದಿಗೆ ನಡೆಸುತ್ತಿದ್ದಾರೆ. ಆದರೆ ಅದನ್ನು ಒಪ್ಪಿಕೊಳ್ಳಲು ಹೆದರುತ್ತಿದ್ದಾರೆ. ಅವರು ಒಪ್ಪಂದವನ್ನು ಮಾಡಿಕೊಳ್ಳಲು ಕಾತುರರಾಗಿದ್ದಾರೆ. ಒಂದುವೇಳೆ ಆ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡರೆ ಜನರು ಮಾತನಾಡುತ್ತಾರೆ ಎಂಬ ಭಯ ಇರಾನ್ ನಾಯಕರನ್ನು ಕಾಡುತ್ತಿದೆ.

ಇದನ್ನೂ ಓದಿ: ಇರಾನ್ ಯುದ್ಧ: ಟ್ರಂಪ್ ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್

ಇರಾನ್ ಮಾತ್ರ ಅಮೆರಿಕ ತನ್ನ ಜೊತೆ ಯಾವುದೇ ರೀತಿಯ ಕದನವಿರಾಮದ ಮಾತುಕತೆ ನಡೆಸಿಲ್ಲ, ನಾವು ಅದಕ್ಕೆ ಒಪ್ಪುವುದೂ ಇಲ್ಲ. ಕದನವಿರಾಮದ ದಿನದ ಬಗ್ಗೆ ಹಾಗೂ ಷರತ್ತುಗಳ ಬಗ್ಗೆ ಟ್ರಂಪ್ ನಿರ್ಧಾರ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದೆ. ಹಾಗೇ ಯುದ್ಧ ನಿಲ್ಲಿಸಲು ಒಪ್ಪಲು ತಾನೇ 5 ಷರತ್ತುಗಳನ್ನು ವಿಧಿಸಿದೆ.

ಇದರ ಜೊತೆಗೆ ಇನ್ನೊಂದು ಶಾಕಿಂಗ್ ಹೇಳಿಕೆಯನ್ನೂ ಪ್ರಕಟಿಸಿದೆ. “ನಾವು ನಿಮ್ಮನ್ನು ಇರಾನ್ ಮುಂದಿನ ಸುಪ್ರೀಂ ಲೀಡರ್ ಮಾಡಲು ಬಯಸುತ್ತೇವೆ ಎಂದು ಇರಾನ್ ನಾಯಕರು ಹೇಳಿದ್ದಾರೆ. ಆದರೆ, ಇಲ್ಲ, ಥ್ಯಾಂಕ್ಸ್. ಅದು ಬೇಡ” ಎಂದು ನಾನು ಹೇಳಿದ್ದೇನೆ.

ಇದನ್ನೂ ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಕಳೆದ ತಿಂಗಳು ಅಲಿ ಖಮೇನಿ ಹತ್ಯೆಯ ನಂತರ ಇರಾನ್ ನಾಯಕತ್ವದಲ್ಲಿನ ಅನಿಶ್ಚಿತತೆಯ ಮಧ್ಯೆ ಈ ಹೇಳಿಕೆಗಳು ಬಂದಿವೆ. ಅವರ ಮಗ ಮೊಜ್ತಾಬಾ ಖಮೇನಿ ಅವರಿಗೆ ಸುಪ್ರೀಂ ಲೀಡರ್ ಆಗಿ ಬಡ್ತಿ ನೀಡಲಾಯಿತು. ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *