ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?


ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ವಾಷಿಂಗ್ಟನ್, ಏಪ್ರಿಲ್ 5: ಇರಾನ್ ಅವರನ್ನು ಹೊಸಕಿ ಹಾಕುವುದಾಗಿ ಬೆದರಿಕೆ ಹಾಕುತ್ತಿರುವ ಡೊನಾಲ್ಡ್ ಟ್ರಂಪ್ ಅವರೇ ಇನ್ನಿಲ್ಲವಾಗಿದ್ದಾರೆ (ಡೊನಾಲ್ಡ್ ಟ್ರಂಪ್ ಸಾವಿನ ವದಂತಿಗಳು) ಎಂಬಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್‌ಗೆ (ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್) ದಾಖಲಿಸಲಾಗಿದೆ. ಅವರು ಸತ್ತೇ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಇದ್ದಾರೆ. ಅವರಿಗೇನೂ ಆಗಿಲ್ಲ ಎನ್ನುವ ಪ್ರತಿವಾದಗಳೂ ಇವೆ. ಆದರೆ, ಟ್ರಂಪ್ ಅನಾರೋಗ್ಯಗೊಂಡಿರುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಹೊರಬಂದಿಲ್ಲ.

ಟ್ರಂಪ್ ಅವರನ್ನು ವಾಲ್ಟರ್ ರೀಡ್ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ ಎಂದು, ವೈದ್ಯಕೀಯ ತಜ್ಞೆ ಎಂದು ಡಾ. ಜೇನ್ ರೂಬಿ ಎಂಬಾಕೆ ಟ್ವೀಟ್ ಮಾಡಿದ್ದಾರೆ. ವಾಲ್ಟರ್ ರೀಡ್ ಆಸ್ಪತ್ರೆಯ ಸುತ್ತಲಿನ ರಸ್ತೆಗಳನ್ನು ಮುಚ್ಚಲಾಗಿದೆ. ಅಧ್ಯಕ್ಷರು ಇವತ್ತು ಸಾರ್ವಜನಿಕರಿಗೆ ಕಾಣಿಸಿಕೊಳ್ಳುವುದಿಲ್ಲವೆಂದು ಶ್ವೇತ ಭವನ ಪ್ರಕಟಿಸಿದೆ ಎಂದು ತಮ್ಮ ಮಾಹಿತಿಗೆ ಇಂಬುಕೊಡುವ ಸಂಗತಿಗಳನ್ನು ಡಾ. ಜೇನ್ ದಿನಾಂಕ.

ಇದನ್ನೂ ಓದಿ: ಶತ್ರುಗಳ ನೆಲದಲ್ಲಿ ಬಿದ್ದಿದ್ದ ತನ್ನ ಪೈಲಟ್‌ನನ್ನು ಅಮೆರಿಕ ರಕ್ಷಿಸಿದ್ದು ಹೇಗೆ?

ಚಾರ್ಲಿ ಕಿರ್ಕ್ ಎಂಬ ವ್ಯಕ್ತಿಯೊಬ್ಬರು, ಡೊನಾಲ್ಡ್ ಟ್ರಂಪ್ ಅವರ ಬೆಂಗಾವಲು ವಾಹನಗಳು ಆಸ್ಪತ್ರೆಯತ್ತ ಸಾಗುತ್ತಿರುವ ದೃಶ್ಯದ ವಿಡಿಯೊ ಪೋಸ್ಟ್ ಮಾಡಲಾಗಿದೆ. ಆದರೆ, ಈ ವಿಡಿಯೋ 2024ರ ಜುಲೈನದ್ದು. ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಗಿರುವ ದೃಶ್ಯ ಇದು ಅನೇಕ ಜನರು ಸ್ಪಷ್ಟನೆ ಕೊಟ್ಟಿದ್ದಾರೆ.

2024ರ ಜುಲೈನಲ್ಲಿ ಟ್ರಂಪ್ ಅವರನ್ನು ಗುರಿಯಾಗಿಸಿ ಗುಂಡು ಹಾರಿಸಲಾಯಿತು. ಗುಂಡು ಕಿವಿಯನ್ನು ಸವರಿಕೊಂಡು ಹೋಗಿತ್ತು. ಟ್ರಂಪ್ ಕೊನೆ ಕ್ಷಣದಲ್ಲಿ ತಲೆ ಅಲುಗಾಡಿಸಿದ ಪರಿಣಾಮ ಅವರು ಸಾವಿನಿಂದ ಬಚಾವಾಗಿದ್ದರು. ಆಗ ಇದ್ದಿದ್ದ ಅವರನ್ನು ಪೆನ್ಸಿಲ್ವೇನಿಯಾದ ಬಟ್ಲರ್ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು. ಆದರೆ, ಈಗ ವಾಲ್ಟರ್ ರೀಡ್ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಲಾಗಿದೆ. ಮೇರಿಲ್ಯಾಂಡ್‌ನ ಬೆಥೆಸಾದಲ್ಲಿರುವ ವಾಲ್ಟರ್ ರೀಡ್ ಆಸ್ಪತ್ರೆಯಲ್ಲಿ ಐದು ತಿಂಗಳ ಹಿಂದೆ ಟ್ರಂಪ್ ಅವರನ್ನು ದಾಖಲಿಸಲಾಗಿದೆ ಎಂದು ಕೆಲ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ಸತ್ತಿದ್ದಾರೆ, ಸ್ಟೀಫನ್ ಮಿಲ್ಲರ್ ಅಧ್ಯಕ್ಷಗಿರಿ ನಿಭಾಯಿಸುತ್ತಿದ್ದಾರಾ?

ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ನಿನ್ನೆ ಇರಾನ್ ವಿರುದ್ಧ ಎಚ್ಚರಿಕೆಯ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಹಾರ್ಮುಜ್ ಜಲಸಂಧಿ ತೆರೆಯಲು ಅಥವಾ ಒಪ್ಪಂದ ಮಾಡಿಕೊಳ್ಳಲು ಇರಾನ್‌ಗೆ ನೀಡಿದ್ದ 10 ದಿನಗಳ ಡೆಡ್‌ಲೈನ್ ಮುಗಿಯುತ್ತಾ ಬಂದಿದೆ. ಅವರ ಮೇಲೆ ನರಕ ವಕ್ಕರಿಸಲು 48 ಗಂಟೆ ಮಾತ್ರ ಇದೆ ಎಂದು ಟ್ರಂಪ್ ಬರೆದುಕೊಂಡಿದ್ದರು.

ಇದನ್ನೂ ಓದಿ: 48 ಗಂಟೆಗಳಲ್ಲಿ ಒಪ್ಪಂದವಾಗದಿದ್ದರೆ ನರಕ ನೋಡುತ್ತೀರಿ; ಇರಾನ್‌ಗೆ ಟ್ರಂಪ್ ಹೊಸ ಎಚ್ಚರಿಕೆ

ಆದರೆ, ಟ್ರಂಪ್ ಈ ಟ್ವೀಟ್ ಬರೆದಿಲ್ಲ. ಅವರು ಈಗ ವಾಲ್ಟರ್ ರೀಡ್‌ನಲ್ಲಿ ಇದ್ದಾರೆ. ಕೊನೆಯ ಕ್ಷಣಗಳನ್ನು ಎದುರಿಸುತ್ತಿದೆ. ಶ್ವೇತ ಭವನದ ಅಧಿಕಾರಿ ಸ್ಟೀಫನ್ ಮಿಲ್ಲರ್ ಅವರು ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಆದರೆ, ಹೆಚ್ಚಿನ ಆನ್‌ಲೈನ್ ಸಮುದಾಯವು ಈ ಸುದ್ದಿಯನ್ನು ಸುಳ್ಳು ಎಂದು ಹೇಳಿವೆ. ಹಿಂದೆಲ್ಲಾ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೊದಲಾದವರು ಬೇರೆ ಬೇರೆ ನಾಯಕರ ವಿಷಯದಲ್ಲೂ ಇಂಥ ಸಾವಿನ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವುದುಂಟು.

ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *