
ವಾಷಿಂಗ್ಟನ್, ಮಾರ್ಚ್ 16: ಇರಾನ್ ಜೊತೆಗಿನ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಡೊನಾಲ್ಡ್ ಟ್ರಂಪ್) ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇರಾನ್ ಮೇಲೆ ದಾಳಿ ನಡೆಸಲು ಇನ್ನೇನು ಉಳಿದಿಲ್ಲ, ಎಲ್ಲವನ್ನೂ ಧ್ವಂಸಗೊಳಿಸಲಾಗಿದೆ ಎಂದಿದ್ದ ಟ್ರಂಪ್ ಇರಾನ್ ಕದನವಿರಾಮಕ್ಕೆ ರೆಡಿ ಇದ್ದರೂ ನಾವು ಸಿದ್ಧರಿಲ್ಲ ಎಂದಿದ್ದರು. ಆದರೆ, ನಿನ್ನೆ ಬೇರೆ ರೀತಿಯದ್ದೇ ಹೇಳಿಕೆ ನೀಡಿದ್ದಾರೆ ಅವರು ನಾವು ಇರಾನ್ ಜೊತೆ ಯುದ್ಧ ನಿಲ್ಲಿಸುವ ಬಗ್ಗೆ ಮಾತುಕತೆ ನಡೆಸಿದ್ದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಇರಾನ್- ಇಸ್ರೇಲ್, ಅಮೆರಿಕದ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಅಮೆರಿಕ ಇರಾನ್ ಜೊತೆ ಚರ್ಚೆ ನಡೆಸುತ್ತಿದೆ. ಆದರೆ ಯುದ್ಧವನ್ನು ಕೊನೆಗೊಳಿಸಲು ಇರಾನ್ ಒಪ್ಪಂದಕ್ಕೆ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ
ಭಾನುವಾರ ಏರ್ ಫೋರ್ಸ್ ಒನ್ನಲ್ಲಿ ವರದಿಗಾರರ ಜೊತೆ ಮಾತನಾಡಿದ ಟ್ರಂಪ್, “ಹೌದು ಇರಾನ್ ಜೊತೆ ಮಾತನಾಡುತ್ತೇವೆ”. ಮಧ್ಯಪ್ರಾಚ್ಯದಲ್ಲಿ ಹರಡಿರುವ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ತಲ್ಲಣಗೊಳ್ಳುವ ಸಂಘರ್ಷವನ್ನು ಕೊನೆಗೊಳಿಸಲು ಯಾವುದಾದರೂ ರಾಜತಾಂತ್ರಿಕತೆ ನಡೆಯುತ್ತಿದೆ ಎಂದು ಕೇಳಿದಾಗ ಉತ್ತರಿಸಿದ ಟ್ರಂಪ್, “ನಾವು ಮಾತುಕತೆ ನಡೆಸಿದೆ.
ಇದನ್ನೂ ಓದಿ: ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್
ಇದು ಮುನ್ನ ಇರಾನ್ನ ವಿದೇಶಾಂಗ ಸಚಿವರು ಅಮೆರಿಕದ ಜೊತೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಫೆಬ್ರವರಿ 28ರಂದು, ಇರಾನ್ನ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಡಜನ್ಗಟ್ಟಲೆ ಇರಾನಿನ ಹಿರಿಯ ಅಧಿಕಾರಿಗಳು ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಮೊದಲ ದಿನದಂದೇ ಪ್ರಾಣ ಕಳೆದುಕೊಂಡರು. ಇದಾದ ನಂತರ ಇರಾನ್ ಕೂಡ ಪ್ರತೀಕಾರದ ದಾಳಿ ನಡೆಸಿ ಗಲ್ಫ್ ದೇಶಗಳಲ್ಲಿ ಅಮೆರಿಕದ ವಾಯುನೆಲೆಗಳು ಮತ್ತು ಇಸ್ರೇಲ್ ಮೇಲೆ ದಾಳಿ ನಡೆಸಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ