ಇಂದಿನ ಈ ಬ್ಯೂಸಿ ಜೀವನಶೈಲಿಯ ಕಾರಣ ಹೆಚ್ಚಿನವರಿಗೆ ಮನೆಕೆಲಸಗಳನ್ನು ಮಾಡುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಈ ಬಟ್ಟೆ ಒಗೆಯುವುದೆಂದರೆ ಹಲವರಿಗೆ ತಲೆಬಿಸಿ. ಇದಕ್ಕಾಗಿ ಹೆಚ್ಚಿನವರು ಎಲ್ಲಾ ಬಟ್ಟೆಗಳನ್ನು ಸಹ ಒಮ್ಮೆಲೇ ವಾಷಿಂಗ್ ಮಷಿನ್‌ನಲ್ಲಿ (ತೊಳೆಯುವ ಯಂತ್ರ) ತೊಳೆದುಬಿಡುತ್ತಾರೆ. ಈ ಕೆಲಸ ಸುಲಭವಾಗುತ್ತದೆ, ಸಮಯ ಉಳಿತಾಯವಾಗುತ್ತದೆ ನಿಜ. ಆದರೆ ಎಲ್ಲಾ ರೀತಿಯ ಬಟ್ಟೆಗಳನ್ನು ವಾಷಿಂಗ್ ಮಷಿನ್ನಲ್ಲಿ ತೊಳೆಯುವುದು ಸೂಕ್ತವಲ್ಲ. ಹೌದು, ಬಟ್ಟೆಗಳನ್ನು ಮಷಿನ್‌ನಲ್ಲಿ ವಾಶ್ ಮಾಡಿದರೆ ಅವುಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಬಟ್ಟೆಗಳನ್ನು ಕೈಯಲ್ಲಿ ಒಗೆದರೆ ಉತ್ತಮ. ಹಾಗಿದ್ರೆ ಯಾವ ಬಟ್ಟೆಗಳನ್ನು ಕೈಯಲ್ಲಿ ಒಗೆದರೆ ಸೂಕ್ತ, ಯಾವ ಬಟ್ಟೆಗಳನ್ನು ವಾಷಿಂಗ್ ಮಷೀನ್‌ನಲ್ಲಿ ವಾಶ್ ಮಾಡಬಹುದು ಎಂದು ತಿಳಿಯಿರಿ.
ಯಾವ ಬಟ್ಟೆಗಳನ್ನು ವಾಷಿಂಗ್ ಮಶಿನ್‌ನಲ್ಲಿ ತೊಳೆಯಬಾರದು?
ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ತೊಳೆಯಬಾರದು. ಅವರು ಕೈಯಿಂದ ಒಗೆಯುವುದೇ ಉತ್ತಮ.
- ಬಿಳಿ ಬಟ್ಟೆಗಳನ್ನು ಕೈಯಿಂದ ಒಗೆಯುವುದು ಉತ್ತಮ. ಯಂತ್ರದಲ್ಲಿ ಒಗೆದರೆ ಬೇರೆ ಬಟ್ಟೆಯ ಬಣ್ಣ ಬಿಳಿ ಬಟ್ಟೆಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
- ಹೆಚ್ಚು ಕೊಳೆಯಾದ ಬಟ್ಟೆಗಳನ್ನು ಕೈಯಿಂದ ತೊಳೆದರೆಯೇ ಉತ್ತಮ.
- ಮೃದುವಾದ ಹತ್ತಿ ಟಾಪ್‌ಗಳು ಮತ್ತು ಲಿನಿನ್ ಶರ್ಟ್‌ಗಳನ್ನು ಯಾವಾಗಲೂ ಕೈಯಿಂದ ಒಗೆಯಬೇಕು.
- ಡಿಸೈನರ್ ಕುರ್ತಾ ಇನ್ನಿತರ ಬಟ್ಟೆ, ಎಂಬ್ರಾಯ್ಡರಿ ವರ್ಕ್ ಇರುವಂತಹ ಬಟ್ಟೆಗಳನ್ನು ಯಂತ್ರದಲ್ಲಿ ತೊಳೆಯುವುದು ಸೂಕ್ತವಲ್ಲ.
- ಕಪ್ಪು ಬಣ್ಣದ ಬಟ್ಟೆಗಳನ್ನು ಸಹ ಕೈಯಿಂದ ಒಗೆಯಬೇಕು. ಇದು ಬಟ್ಟೆಗಳನ್ನು ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಬೇಗನೆ ಮಸುಕಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
- ಜೊತೆಗೆ ಉಣ್ಣೆ, ರೇಷ್ಮೆ, ಶಿಫೋನ್ ಬಟ್ಟೆ, ಲೆದರ್ ಜಾಕೆಟ್ಗಳನ್ನು ಸಹ ಯಂತ್ರದಲ್ಲಿ ತೊಳೆಯಬಾರದು. ಏಕೆಂದರೆ ಈ ಉಡುಪುಗಳು ಬಹು ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಬಿಳಿ ಬಟ್ಟೆಯ ಮೇಲೆ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯ
ಯಾವ ಬಟ್ಟೆಗಳನ್ನು ವಾಷಿಂಗ್ ಮಷಿನ್‌ನಲ್ಲಿ ತೊಳೆಯಬಹುದೇ?
- ದಪ್ಪ ಜೀನ್ಸ್ ಮತ್ತು ಪ್ಯಾಂಟ್‌ಗಳನ್ನು ಯಂತ್ರದಲ್ಲಿ ಒಟ್ಟಿಗೆ ತೊಳೆಯಬಹುದು.
- ಟವೆಲ್ಗಳನ್ನು ವಾಷಿಂಗ್ ಮಷಿನ್ನಲ್ಲಿ ತೊಳೆಯುವುದು ಸೂಕ್ತ.
- ಬಣ್ಣ ಬಿಡದ ಬಟ್ಟೆಗಳನ್ನು ಯಂತ್ರದಲ್ಲಿ ವಾಷ್ ಮಾಡಬಹುದು. ಬಟ್ಟೆಗಳು ತುಂಬಾ ಮೃದುವಾಗಿ, ಲೈಟ್ ಮೋಡ್‌ನಲ್ಲಿ ಬಳಸಲು.
- ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಸಹ ವಾಷಿಂಗ್ ಮಷಿನ್‌ನಲ್ಲಿ ತೊಳೆಯಬಹುದು.
ಡ್ರೈ ಕ್ಲೀನ್ ಮಾಡಬಹುದಾದ ಬಟ್ಟೆಗಳು:
ಸೀರೆಗಳು ಮುಖ್ಯವಾಗಿ ರೇಷ್ಮೆ ಸೀರೆ, ಸೂಟ್‌ಗಳು, ಕೋಟ್‌ಗಳು, ಚಳಿಗಾಲದ ಜಾಕೆಟ್‌ಗಳನ್ನು ಡ್ರೈ ಕ್ಲೀನ್ ಮಾಡಿದರೆ ಉತ್ತಮ. ಹೀಗೆ ಮಾಡುವುದರಿಂದ ಅವುಗಳ ಹೊಳಪು ಉಳಿಯುತ್ತದೆ ಮತ್ತು ಬಟ್ಟೆಯೂ ಸಹ ಹಾನಿಗೊಳಗಾಗುವುದಿಲ್ಲ. ಡ್ರೈ ಕ್ಲೀನಿಂಗ್ ಬಟ್ಟೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ