Headlines

ಫ್ಲೆಕ್ಸ್​, ಸೋಷಿಯಲ್ ಮೀಡಿಯಾನಲ್ಲಿ ಮಂಡ್ಯ ಎಸ್ಪಿ ಶೋಭಾರಾಣಿ ಹವಾ: ಎಲ್ಲಾ ಗೊಂದಗಳಿಗೆ ತೆರೆ

ಫ್ಲೆಕ್ಸ್​, ಸೋಷಿಯಲ್ ಮೀಡಿಯಾನಲ್ಲಿ ಮಂಡ್ಯ ಎಸ್ಪಿ ಶೋಭಾರಾಣಿ ಹವಾ: ಎಲ್ಲಾ ಗೊಂದಗಳಿಗೆ ತೆರೆ


ಫ್ಲೆಕ್ಸ್, ಸೋಷಿಯಲ್ ಮೀಡಿಯಾದಲ್ಲಿ ಮಂಡ್ಯ ಎಸ್ಪಿ ಶೋಭಾರಾಣಿ ಹವಾ: ಎಲ್ಲಾ ಗೊಂದಗಳಿಗೆ ತೆರೆ

ಮಂಡ್ಯ, (ಮಾರ್ಚ್ 22): ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದಾದ್ಯಂತ ಎಸ್ಪಿ ಶೋಭಾರಾಣಿ (ಮಂಡ್ಯ ಎಸ್ಪಿ ಡಾ ಶೋಭಾರಾಣಿ) ಅವರ ಫ್ಲೆಕ್ಸ್‌ಗಳನ್ನು (ಯುಗಾದಿ ಫ್ಲೆಕ್ಸ್) ಹಾಕಲಾಯಿತು . ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರಲ್ಲೇ ಎಚ್ಚೆತ್ತ ಐಪಿಎಸ್ ಶೋಭಾರಾಣಿ, ಜಾಲತಾಣದಲ್ಲಿ ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫ್ಲೆಕ್ಸ್ ಹಾಕುವುದು ಸರಿಯಲ್ಲ. ಈ ರೀತಿ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಹಬ್ಬಗಳ ಜೊತೆಗೆ ಎಸ್‌ಪಿ ಶೋಭಾರಾಣಿ ಅವರ ಫೋಟೋ ಬಳಸಿ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ಕುರಿತು ನಿನ್ನೆಯಷ್ಟೇ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿ ಸಾರ್ವಜನಿಕರ ಚರ್ಚೆಗೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ತಕ್ಷಣವೇ ಪ್ರತಿಕ್ರಿಯಿಸಿದ್ದು, ನನ್ನ ಭಾವಚಿತ್ರವನ್ನು ಯಾವುದೇ ಫ್ಲೆಕ್ಸ್ ಬ್ಯಾನರ್ ಮತ್ತು ಪ್ರಚಾರ ಕಾರ್ಯಗಳನ್ನು ಬಳಸಬೇಡಿ. ಕಾನೂನು ಮತ್ತು ವೈಯಕ್ತಿಕ ಗೌರವ ಕಾಪಾಡೋದು ನನ್ನ ಕರ್ತವ್ಯವಾಗಿದೆ. ದಯವಿಟ್ಟು ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಲಾಗಿದೆ.

ಮಂಡ್ಯ ರಸ್ತೆ ತುಂಬೆಲ್ಲಾ ಶೋಭರಾಣಿ ಬ್ಯಾನರ್

ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕಾರಣಿಗಳ ನಡುವಿನ ಫ್ಲೆಕ್ಸ್ ವಾರ್ ಹೊಸದೇನಲ್ಲ. ಆದರೆ, ಈಗ ಮಂಡ್ಯದ ಬೀದಿಗಳಲ್ಲಿ ಜನಪ್ರತಿನಿಧಿಗಳು ಹೆಚ್ಚಾಗಿ ಐಪಿಎಸ್ ಅಧಿಕಾರಿಯೊಬ್ಬರ ಭಾವಚಿತ್ರವಿರುವ ಫ್ಲೆ ಫೋಟೋಗಳು ರಾರಾಜಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ವಿ.ಜೆ. ಶೋಭರಾಣಿ ಅವರ ಈ ‘ಫ್ಲೆಕ್ಸ್ ಪ್ರೀತಿ’ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು.

ಯುಗಾದಿ ಹಬ್ಬದ ಮಂಡ್ಯ ನಗರದ ಪ್ರಮುಖ ವೃತ್ತಗಳು, ರಸ್ತೆ ಬದಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಎಸ್ಪಿಯವರಿಗೆ ಹಬ್ಬದ ಶುಭಾಶಯ ಕೋರಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಫ್ಲೆಕ್ಸ್‌ಗಳಲ್ಲಿ ಕೇವಲ ಎಸ್ಪಿಯವರ ಫೋಟೋವನ್ನು ತೋರಿಸಿದೆ, ಮಂಜುನಾಥ್ ಗೌಡ, ಶಿವಾನಂದ್ ಮತ್ತು ಪಾಪಣ್ಣ ಎಂಬುವವರ ಭಾವಚಿತ್ರಗಳನ್ನು ಚಿತ್ರಿಸಲಾಗಿದೆ. ಈ ಶೋಭರಾಣಿ ಅವರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ಬಂದಾಗಲೂ ಸಹ ಇದೇ ರೀತಿ ನಗರದಾದ್ಯಂತ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಯಿತು.

ನಾನಾ ರೀತಿಯ ಚರ್ಚೆ

ಶೋಭರಾಣಿಯವರ ಪ್ಲೆಕ್ಸ್, ಬ್ಯಾನರ್ ಬಗ್ಗೆ ಜಿಲ್ಲೆಯಲ್ಲಿ ವಿರೋಧದ ಚರ್ಚೆಗಳು ನಡೆಯುತ್ತಿವೆ,
ಮಂಡ್ಯದ ಜನರು ಇಂತಹದ್ದನ್ನು ಈ ಹಿಂದೆ ನೋಡಿಲ್ಲ. ಅಧಿಕಾರಿ ಜನಸ್ನೇಹಿಯಾಗಿರುವುದು ಸ್ವಾಗತಾರ್ಹ, ಆದರೆ ಫ್ಲೆಕ್ಸ್ ಮೂಲಕ ಅತಿರಂಜಿತವಾಗಿ ಬಿಂಬಿಸಿಕೊಳ್ಳುವುದು ಬೇಕಿತ್ತೇ ಎಂಬುದು ಕೆಲವರ ವಾದ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗುತ್ತಿರುವ, ಅಧಿಕಾರಿಯೊಬ್ಬರು ಈ ಮಟ್ಟಿಗೆ ಫ್ಲೆಕ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ರಾಜಕೀಯ ಪ್ರಭಾವದ ಮುನ್ಸೂಚನೆ ನೀಡುವ ಮಾತುಗಳು ಸಹ ಕೇಳಿಬಂದಿವೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *