ಹಿಟ್ಟಿಗೆ ಒಂದೇ ಒಂದು ಚಿಟಿಕೆ ಇದನ್ನ ಹಾಕಿ; ಕೆಂಪು ಕೆಂಪಾದ, ಗರಿಗರಿಯಾದ ಹೋಟೆಲ್ ಸ್ಟೈಲ್ ದೋಸೆ ರೆಡಿ

ಹಿಟ್ಟಿಗೆ ಒಂದೇ ಒಂದು ಚಿಟಿಕೆ ಇದನ್ನ ಹಾಕಿ; ಕೆಂಪು ಕೆಂಪಾದ, ಗರಿಗರಿಯಾದ ಹೋಟೆಲ್ ಸ್ಟೈಲ್ ದೋಸೆ ರೆಡಿ

ಹಿಟ್ಟಿಗೆ ಒಂದೇ ಒಂದು ಚಿಟಿಕೆ ಇದನ್ನ ಹಾಕಿ; ಕೆಂಪು ಕೆಂಪಾದ, ಗರಿಗರಿಯಾದ ಹೋಟೆಲ್ ಸ್ಟೈಲ್ ದೋಸೆ ರೆಡಿ

Dosa Batter Hack: ದಕ್ಷಿಣ ಭಾರತದಲ್ಲಿ ದೋಸೆ ಎನ್ನುವುದು ಕೇವಲ ಉಪಹಾರವಲ್ಲ, ಅದೊಂದು ಭಾವನೆ. ಆದರೆ ಹೋಟೆಲ್‌ಗಳಲ್ಲಿ ಸಿಗುವಂತೆ ಕೆಂಪಾದ, ಗರಿಗರಿಯಾದ ದೋಸೆ ಮನೆಯಲ್ಲಿ ಮಾಡಲು ಅನೇಕರು ಕಷ್ಟಪಡುತ್ತಾರೆ. ಹಾಗಾಗಿ ಆ ಬಣ್ಣ, ಗರಿಗರಿತನವನ್ನು ಪಡೆಯಲು ಒಂದು ಪುಟ್ಟ ‘ಸೀಕ್ರೆಟ್ ಟ್ರಿಕ್’ ಇಲ್ಲಿದೆ.

ಹೆಚ್ಚಿನ ಶ್ರಮವಿಲ್ಲದೆ ಕೆಂಪಾದ, ಗರಿಗರಿಯಾದ ದೋಸೆಗಳನ್ನು ತಯಾರಿಸಲು ಟ್ರೈ ಮಾಡ್ತಿದ್ರೆ ಅಡುಗೆ ಮನೆಯಲ್ಲಿರುವ ಇದೊಂದು ಪದಾರ್ಥ ನಿಮಗೆ ಸಹಾಯ ಮಾಡುತ್ತದೆ. ನೀವು ದಕ್ಷಿಣ ಭಾರತೀಯರಾಗಿದ್ದರೆ ಒಂದು ವಿಷಯವನ್ನು ಗಮನಿಸಿರಬಹುದು. ಹಿಟ್ಟು ಸಿದ್ಧವಾಗಿರುತ್ತೆ, ಹಂಚು (ತವಾ) ಕಾದಿರುತ್ತೆ. ಅದೇ ಸಮಯಕ್ಕೆ ಅಮ್ಮ ಅಥವಾ ಅಜ್ಜಿ ಆ ಡಬ್ಬಿ ತೆಗೆದು ಒಂದು ಚಿಟಿಕೆ ಹಾಕ್ತಾರೆ. ಹಾಗಾದ್ರೆ ಅವ್ರು ಹಾಕುವುದೇನು? ಯಾತಕ್ಕಾಗಿ ಮುಂದೆ ಓದಿ..

ದೋಸೆ ಮಾಡುವುದೆಂದರೆ ಅದು ಅನುಭವ ಮತ್ತು ಸಣ್ಣಪುಟ್ಟ ಬದಲಾವಣೆಗಳ ಕಲೆ. ಈಗಾಗಲೇ ಹಿಟ್ಟಿನ ಹುದುಗು (Fermentation), ಅಕ್ಕಿ-ಬೇಳೆಯ ಅನುಪಾತದ ಬಗ್ಗೆ ನಾವು ಮಾತನಾಡಿದ್ದೇವೆ. ಆದರೆ ಈ ‘ಒಂದು ಚಿಟಿಕೆ ಸಕ್ಕರೆ’ಯ ರಹಸ್ಯ ಗೊತ್ತಾ?. ಹಿಟ್ಟಿಗೆ ಚಿಟಿಕೆ ಸಕ್ಕರೆ ಹಾಕುವುದು ದೋಸೆ ಸಿಹಿ ಮಾಡಲಿಕ್ಕೆ ಅನ್ಕೊಂಡ್ರಾ. ಅಲ್ವೆ ಅಲ್ಲ, ಅದಕ್ಕೊಂದು ಬಲವಾದ ಕಾರಣವಿದೆ. ಇದು ತಲೆಮಾರುಗಳಿಂದ ಫಾಲೋ ಮಾಡುತ್ತಿರುವ ಒಂದು ಸಣ್ಣ ‘ಕಿಚನ್ ಹ್ಯಾಕ್’.

ಇದಕ್ಕೆ ಉತ್ತರ ಸರಳ ಬಣ್ಣ ಮತ್ತು ಗರಿಗರಿತನಕ್ಕಾಗಿ. ಸಕ್ಕರೆಯು ದೋಸೆಗೆ ಕೆಂಪು ಅಥವಾ ಚಿನ್ನದ ಬಣ್ಣ ನೀಡುತ್ತೆ. ಇದು ದೋಸೆ ಬಿಳಿಯಾಗಿ ಕಾಣುವ ಬದಲು ನೋಡಲು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಹಂಚಿನ ಬಿಸಿಗೆ ಸಕ್ಕರೆಯು ‘ಕ್ಯಾರಮೆಲೈಸ್’ (Caramelize) ಆಗುತ್ತದೆ. ಅಂದರೆ ಅದು ಕರಗಿ ದೋಸೆಯ ಹೊರಪದರವನ್ನು ಗರಿಗರಿಯಾಗಿಸುತ್ತದೆ. ಹೋಟೆಲ್ ಶೈಲಿಯ ದೋಸೆಗಳು ಅಷ್ಟು ಕೆಂಪಾಗಿ ಮತ್ತು ಗರಿಗರಿಯಾಗಿರಲು ಇದೇ ಮುಖ್ಯ ಕಾರಣ.

ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಖಂಡಿತ ಇಲ್ಲ. ಒಂದು ದೊಡ್ಡ ಪಾತ್ರೆ ಹಿಟ್ಟಿಗೆ ಕೇವಲ ¼ ರಿಂದ ½ ಚಮಚ ಸಕ್ಕರೆ ಸಾಕು. ಇದು ದೋಸೆಯನ್ನು ಸಿಹಿಯಾಗಿಸುವುದಿಲ್ಲ. ಇದನ್ನು ಹಿಟ್ಟು ಹುದುಗಿದ ನಂತರ, ದೋಸೆ ಮಾಡುವ ಸ್ವಲ್ಪ ಸಮಯದ ಮುನ್ನ ಸೇರಿಸುವುದು ಉತ್ತಮ.

ಹುದುಗಿದ ನಂತರ: ಇದು ಅತ್ಯಂತ ಸುರಕ್ಷಿತ ಮತ್ತು ಸಾಮಾನ್ಯ ವಿಧಾನ.ಅಡುಗೆ ಮಾಡುವ ಮೊದಲು: ದೋಸೆ ಬಿಳಿಯಾಗಿ ಬರುತ್ತಿದ್ದರೆ ತಕ್ಷಣ ಒಂದು ಚಿಟಿಕೆ ಸಕ್ಕರೆ ಸೇರಿಸಿ.ರುಬ್ಬುವಾಗ ಬೇಡ: ಹಿಟ್ಟು ರುಬ್ಬುವಾಗಲೇ ಸಕ್ಕರೆ ಸೇರಿಸಿದರೆ ಅದು ಹುದುಗು ಬರುವ ಪ್ರಕ್ರಿಯೆಗೆ ಅಡ್ಡಿಪಡಿಸಬಹುದು.

ಅತಿಯಾದರೆ ಅಮೃತವೂ ವಿಷ ಎಂಬಂತೆ, ಹೆಚ್ಚು ಸಕ್ಕರೆ ಸೇರಿಸಿದರೆ:ದೋಸೆ ಬೇಗನೆ ಕಪ್ಪಾಗಬಹುದು.ದೋಸೆ ಮೆತ್ತಗೆ ಅಥವಾ ಅಂಟಂಟಾಗಬಹುದು.ದೋಸೆ ಸಿಹಿಯಾಗಬಹುದು (ಇದು ನಮಗೆ ಬೇಡ).

ನಯವಾಗಿದ್ದರೂ ಸ್ವಲ್ಪ ತರಿತರಿಯಾಗಿರಲಿ.ಚೆನ್ನಾಗಿ ಹುದುಗು ಬಂದಿರಲಿ (Fermented).ಇಡ್ಲಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರಲಿ.ಅನುಪಾತ: 3 ಕಪ್ ದೋಸೆ ಅಕ್ಕಿ, 1 ಕಪ್ ಉದ್ದಿನಬೇಳೆ, ½ ಚಮಚ ಮೆಂತ್ಯ ಕಾಳು. ಇವುಗಳನ್ನು ಪ್ರತ್ಯೇಕವಾಗಿ ನೆನೆಸಿ ರುಬ್ಬಿ, ರಾತ್ರಿಯಿಡೀ ಹುದುಗಲು ಬಿಡಿ. ದೋಸೆ ಮಾಡುವ ಮೊದಲು ಉಪ್ಪು ಮತ್ತು ಸಕ್ಕರೆ ಸೇರಿಸಿ.

ನೀವು ಸಕ್ಕರೆ ಬಳಸಲು ಇಷ್ಟಪಡದಿದ್ದರೆ ಸ್ವಲ್ಪ ಬೆಲ್ಲದ ನೀರು ಬಳಸಬಹುದು ಅಥವಾ ಹಿಟ್ಟನ್ನು ಸ್ವಲ್ಪ ಹೆಚ್ಚು ಸಮಯ ಹುದುಗಲು ಬಿಡಬಹುದು. ಆದರೆ ಸಕ್ಕರೆಯು ನೀಡುವಂತಹ ಅಚ್ಚುಕಟ್ಟಾದ ಕೆಂಪು ಬಣ್ಣ ಮತ್ತು ಗರಿಗರಿತನವನ್ನು ಬೇರೆ ಯಾವುದೂ ನೀಡುವುದಿಲ್ಲ.

ಕೆಲವೊಮ್ಮೆ ಸರಳವಾದ ಬದಲಾವಣೆಯು ದೊಡ್ಡ ವ್ಯತ್ಯಾಸವನ್ನು ತರುತ್ತದೆ. ಮುಂದಿನ ಬಾರಿ ದೋಸೆ ಮಾಡುವಾಗ ಈ ‘ಒಂದು ಚಿಟಿಕೆ ಸಕ್ಕರೆ’ ಟ್ರಿಕ್ ಬಳಸಿ ನೋಡಿ!

Source link

Leave a Reply

Your email address will not be published. Required fields are marked *