ಡಿವೋರ್ಸ್​ ಮಹಿಳೆಯರ ಮಾರ್ಕೆಟ್​ನಲ್ಲಿ ಡಾ.ಬ್ರೋ ದಿಢೀರ್​ ಪ್ರತ್ಯಕ್ಷ: ವಿಚಿತ್ರ ದೇಶದಲ್ಲಿ ಗಗನ್ ಅಬ್ಬಬ್ಬಾ​ ಇದೇನಿದು?

ಡಿವೋರ್ಸ್​ ಮಹಿಳೆಯರ ಮಾರ್ಕೆಟ್​ನಲ್ಲಿ ಡಾ.ಬ್ರೋ ದಿಢೀರ್​ ಪ್ರತ್ಯಕ್ಷ: ವಿಚಿತ್ರ ದೇಶದಲ್ಲಿ ಗಗನ್ ಅಬ್ಬಬ್ಬಾ​ ಇದೇನಿದು?

ಡಿವೋರ್ಸ್​ ಮಹಿಳೆಯರ ಮಾರ್ಕೆಟ್​ನಲ್ಲಿ ಡಾ.ಬ್ರೋ ದಿಢೀರ್​ ಪ್ರತ್ಯಕ್ಷ: ವಿಚಿತ್ರ ದೇಶದಲ್ಲಿ ಗಗನ್ ಅಬ್ಬಬ್ಬಾ​ ಇದೇನಿದು?
ಕನ್ನಡದ ಜನಪ್ರಿಯ ವ್ಲಾಗರ್ ಡಾ.ಬ್ರೋ, ಮಾರಿಟೇನಿಯಾ ಎಂಬ ವಿಚಿತ್ರ ದೇಶದ ಪ್ರವಾಸದ ಅನುಭವ ಹಂಚಿಕೊಂಡಿದ್ದಾರೆ. 100 ವರ್ಷ ಹಳೆಯ ಕಾರಿನಲ್ಲಿ ಪ್ರಯಾಣಿಸಿದ ಅವರು, ಅಲ್ಲಿನ ವಿಚ್ಛೇದಿತ ಮಹಿಳೆಯರಿಗಾಗಿಯೇ ಇರುವ ‘ಡಿವೋರ್ಸ್ ಮಾರುಕಟ್ಟೆ’ಯ ಕುತೂಹಲಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸ್ವಂತ ಬಿಜಿನೆಸ್​ ಆರಂಭಿಸಿರೋ ಡಾ.ಬ್ರೋ ಅರ್ಥಾತ್​ ಗಗನ್​ ಅವರು ವಿಡಿಯೋ ಮಾಡಿ ಅದನ್ನು ಶೇರ್​ ಮಾಡಿಕೊಳ್ಳುವುದು ತೀರಾ ಅಪರೂಪವಾಗಿದೆ. ಆಗೊಮ್ಮೆ ಈಗೊಮ್ಮೆ ಹಳೆಯ ವಿಡಿಯೋಗಳನ್ನೇ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿಯೇ ಮಾತನಾಡಿ, ಕೆಲವೊಮ್ಮೆ ಅಪಾಯವನ್ನೂ ಮೈಮೇಲೆ ಎಳೆದುಕೊಂಡು ವಿಡಿಯೋ ಮಾಡುತ್ತಲೇ ಲಕ್ಷ ಲಕ್ಷ ಮಂದಿಯ ಪ್ರೀತಿಗೆ ಪಾತ್ರರಾದವರು ಡಾ.ಬ್ರೋ.

ಇದೀಗ ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ವಿಚಿತ್ರ ದೇಶಕ್ಕೆ ಸ್ವಾಗತ ಎನ್ನುತ್ತಲೇ ಅವರು ಮಾರಿಟೇನಿಯಾ ದೇಶದ ಬಗ್ಗೆ ಕುತೂಹಲದ ಮಾಹಿತಿಗಳನ್ನು ನೀಡಿದ್ದಾರೆ. 100 ವರ್ಷಗಳ ಹಳೆಯ ಕಾರಿನಲ್ಲಿ ಅವರು ಸವಾರಿ ಮಾಡಿದ್ದಾರೆ. ಈ ಸಮಯದಲ್ಲಿ ತಾವು ಭಾರತದವ ಎಂದು ಡಾ.ಬ್ರೋ ಪರಿಚಯಿಸಿಕೊಂಡಾಗ, ಮುಸ್ಲಿಮಾ ಎಂದು ಚಾಲಕ ಕೇಳಿದ್ದಾನೆ. ಆಗ ಡಾ.ಬ್ರೋ ಭಾರತದವ ಎಂದಿದ್ದಾರೆ.

ಕೊನೆಗೆ ತಾವು ಕುಳಿತ ಕಾರು ಎಷ್ಟು ವರ್ಷ ಹಳೆಯದ್ದು ಎಂದಾಗ 100 ವರ್ಷ ಎಂದಿದ್ದಾನೆ ಚಾಲಕ. ಅದನ್ನು ಕೇಳಿ ಡಾ.ಬ್ರೋ ಮಾಷಲ್ಲಾ ಎಂದಾಗ, ಚಾಲಕನಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.

ಅಂದಾಗೆ, ಮಧ್ಯಯುಗದಲ್ಲಿ ಮಾರಿಟಾನಿಯಾ ಅಲ್ಮೊರಾವಿಡ್ ಇದು ಪ್ರದೇಶದಾದ್ಯಂತ ಇಸ್ಲಾಂ ಅನ್ನು ಹರಡಿತು ಮತ್ತು ಸ್ವಲ್ಪ ಸಮಯದವರೆಗೆ ಸ್ಪೇನ್‌ನ ಇಸ್ಲಾಮಿಕ್ ಭಾಗವನ್ನು ನಿಯಂತ್ರಿಸಿತು. ಆದ್ದರಿಂದ ಇಲ್ಲಿ ಇರುವವರು ಮುಸ್ಲಿಮರಾಗಿದ್ದು, ಈ ಚಾಲಕ ಕೂಡ ತನ್ನನ್ನು ತಾನು ಅದೇ ರೀತಿ ಪರಿಚಯಿಸಿಕೊಂಡಿದ್ದಾನೆ. ಆದರೆ ಇದು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ ಮತ್ತು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ.

ಕೊನೆಯಲ್ಲಿ ಡಿವೋರ್ಸ್​ ಮಾರುಕಟ್ಟೆಗೆ ಕರೆದುಕೊಂಡು ಹೋಗಿದ್ದಾರೆ ಡಾ.ಬ್ರೋ. ಇಲ್ಲಿ ಇರುವುದು ವಿಚ್ಛೇದಿತ ಮಹಿಳೆಯರೇ. ಇಲ್ಲಿಯ ಹೆಂಗಸರಿಗೆ ಡಿವೋರ್ಸ್​ ಆಗುವುದು ಎಂದರೆ ಬಹಳ ಖುಷಿಯಂತೆ. ಡಿವೋರ್ಸ್​ ಆದ ಬಳಿಕ, ಮನೆಯಲ್ಲಿ ಇದ್ದ ಎಲ್ಲಾ ಸಾಮಾನುಗಳನ್ನು ಒಂದೂ ಬಿಡದೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರಂತೆ. ಅದಕ್ಕಾಗಿಯೇ ಡಿವೋರ್ಸ್​ ಮಹಿಳೆಯರ ಮಾರುಕಟ್ಟೆಯೂ ಇಲ್ಲಿ ಫೇಮಸ್ ಆಗಿದ್ದು, ಅದರ ಬಗ್ಗೆ ವಿವರಣೆ ನೀಡಿದ್ದಾರೆ ಡಾ.ಬ್ರೋ.

ಇನ್ನು ಈ ದೇಶದ ಕುರಿತು ಹೇಳುವುದಾದರೆ, ಮಾರಿಟೇನಿಯಾ ಖನಿಜ ಸಂಪನ್ಮೂಲಗಳಿಂದ, ವಿಶೇಷವಾಗಿ ಕಬ್ಬಿಣ ಮತ್ತು ಅದಿರುಗಳಿಂದ ಸಮೃದ್ಧವಾಗಿದೆ. ಆದರೂ ಬಡತನ ಹೆಚ್ಚು. ಹೆಚ್ಚಾಗಿ ಮರುಭೂಮಿಯಿಂದ ಕೂಡಿದ ಈ ದೇಶವು ಸಾಂಸ್ಕೃತಿಕ ವ್ಯತಿರಿಕ್ತತೆಯನ್ನು ಪ್ರಸ್ತುತಪಡಿಸುತ್ತದೆ, ಉತ್ತರದಲ್ಲಿ ಅರಬ್-ಬರ್ಬರ್ ಜನಸಂಖ್ಯೆ ಮತ್ತು ದಕ್ಷಿಣದಲ್ಲಿ ಕಪ್ಪು ಆಫ್ರಿಕನ್ನರು ಇದ್ದಾರೆ. ಅದರ ಅನೇಕ ಜನರು ಅಲೆಮಾರಿಗಳು.

ಯುರೋಪಿಯನ್ ವ್ಯಾಪಾರಿಗಳು 15 ನೇ ಶತಮಾನದಲ್ಲಿ ರಿಟಾನಿಯಾದಲ್ಲಿ ಆಸಕ್ತಿ ತೋರಿಸಲು ಪ್ರಾರಂಭಿಸಿದರು. ಫ್ರಾನ್ಸ್ 1817 ರಲ್ಲಿ ಕರಾವಳಿ ಪ್ರದೇಶದ ಮೇಲೆ ಹಿಡಿತ ಸಾಧಿಸಿತು ಮತ್ತು 1904 ರಲ್ಲಿ ಔಪಚಾರಿಕ ಫ್ರೆಂಚ್ ರಕ್ಷಣಾತ್ಮಕ ಪ್ರದೇಶವನ್ನು ಭೂಪ್ರದೇಶದ ಮೇಲೆ ವಿಸ್ತರಿಸಲಾಯಿತು.

ವಿಡಿಯೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *