
ಖ್ಯಾತ ಶಿಕ್ಷಣ ನೀಡಿದ ಡಾ.ಗುರುರಾಜ ಕರ್ಜಗಿ ಅವರು ಟಿವಿ9 ವಿಶೇಷ ಪಾಡ್‌ಕಾಸ್ಟ್‌ನಲ್ಲಿ ಪರೀಕ್ಷಾ ಸಮಯದಲ್ಲಿ ಎದುರಾಗುವ ಸವಾಲುಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು ಅಂಕ ಜ್ಞಾನ ಸಂಪಾದನೆ ಹೆಚ್ಚು ಮುಖ್ಯ ಎಂದು ಪಾದಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಅಣ್ಣಾ ಹಜಾರೆ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹವರ ಉದಾಹರಣೆಗಳನ್ನು ನೀಡಿ, ಜೀವನದಲ್ಲಿ ಅಂಕಗಳಷ್ಟೇ ನಿರ್ಣಾಯಕವಲ್ಲ.
ಆತ್ಮವಿಶ್ವಾಸ ನಮ್ಮೊಳಗೆ ಇರಬೇಕು ಮತ್ತು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ತಪ್ಪಿಸಬೇಕು. ಸ್ವಯಂ ಸ್ಪರ್ಧೆಯು ಯಶಸ್ಸಿಗೆ ಮುಖ್ಯ. ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಮತ್ತು ಹಿಂದಿನ ತರಗತಿಗಳ ಅಡಿಪಾಯವನ್ನು ಸುಧಾರಿಸುವ ಮೂಲಕ ಮರೆವಿನ ಸಮಸ್ಯೆಗಳನ್ನು ಪರಿಹರಿಸಬಹುದು. ಜ್ಞಾನವನ್ನು ಬೆನ್ನತ್ತಿದರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ
ಶಿಕ್ಷಣಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ