Headlines

ಆಯುರ್ವೇದ ಆಧುನಿಕ ರೋಗಗಳಿಗೆ ಪರಿಣಾಮಕಾರಿಯಾದ ಪರಿಹಾರ: ಡಾ. ಸಂಹಿತಾ

ಆಯುರ್ವೇದ ಆಧುನಿಕ ರೋಗಗಳಿಗೆ ಪರಿಣಾಮಕಾರಿಯಾದ ಪರಿಹಾರ: ಡಾ. ಸಂಹಿತಾ


ಆಯುರ್ವೇದ (ಆಯುರ್ವೇದ) ಎಂಬುದು ಪುರಾತನ ಚಿಕಿತ್ಸಾ ಪದ್ಧತಿ ಭಾರತದ ಬಗ್ಗೆ ತಿಳಿದಿರುವ ವಿಚಾರ. ಆದರೆ ಇದು ಕೇವಲ ರೋಗ ನಿವಾರಣೆಯ ವಿಧಾನವಲ್ಲ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಒತ್ತಿ ಹೇಳಲು ಸಮಗ್ರ ಜೀವನಶೈಲಿಯಾಗಿದೆ. ಅದರಲ್ಲಿಯೂ ಪ್ರಸ್ತುತ ಕಾಲಘಟ್ಟದಲ್ಲಿ ದಿನೇ ದಿನೇ ಜೀವನಶೈಲಿ ಸಂಬಂಧಿತ ರೋಗಗಳು ಹಾಗೂ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ ನಾವು ಕಾಣಬಹುದಾಗಿದ್ದರೆ, ಈ ಎಲ್ಲಾ ಆರೋಗ್ಯದ ಅಸಮತೋಲನಗಳಿಗೆ ಆಯುರ್ವೇದದಲ್ಲಿ ಸಹಜ ಹಾಗೂ ಇತ್ತೀಚಿನ ಪರಿಹಾರ ಮಾರ್ಗಗಳಿವೆ. ಆದರೆ ಇದರ ಪೂರ್ಣ ಪ್ರಯೋಜನವನ್ನು ಪಡೆಯಲು ಜನಸಾಮಾನ್ಯರು ಆಯುರ್ವೇದ ಶಿಕ್ಷಣದ ಮತ್ತು ಸಾಮಾಜಿಕ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಅರಿವು ಹೊಂದಿರುವುದು ಅವಶ್ಯಕವಾಗಿದೆ. ಈ ವಿಷಯದ ಕುರಿತು ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು (ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ) ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ಶಿಕ್ಷಣದ ಮೂಲಭೂತ ರಚನೆ

ಭಾರತದಲ್ಲಿ ಆಯುರ್ವೇದ ಶಿಕ್ಷಣವು ತನ್ನದೇ ಆದ ಇತಿಹಾಸವನ್ನು ಹೊಂದಿದೆ ಹಾಗೂ ಆಯುಷ್ ಸಚಿವಾಲಯ ಹಾಗೂ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಆಯೋಗದ ಸಂಸ್ಥೆಗಳ ಮಾನ್ಯತೆ ಪಡೆದಿದೆ. ಆಯುರ್ವೇದ ಶಿಕ್ಷಣವು ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆಂಡ್ ಸರ್ಜರಿ (BAMS), ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸ್‌ಗಳು ಸಾಂಪ್ರದಾಯಿಕ ಮತ್ತು ಆಧುನಿಕ ವಿಜ್ಞಾನದ ಸಂಯೋಜಿತ ಅಧ್ಯಯನವನ್ನು ನಡೆಸಿದೆ.

ತಪ್ಪು ಕಲ್ಪನೆಯನ್ನು ದೂರ ಮಾಡುತ್ತೆ

ಅನಾಟಮಿ , ಫಿಸಿಯೋಲಾಜಿ, ಪ್ಯಾಥಾಲಜಿ, ಫಾರ್ಮಕಾಲಜಿ ಮತ್ತು ಕ್ಲಿನಿಕಲ್ ತರಬೇತಿಯನ್ನು ಆಯುರ್ವೇದ ಶಿಕ್ಷಣ ಕೇವಲ ಪಾರಂಪರಿಕ ಕಲೆಯಷ್ಟೇ ಅಲ್ಲ ಅದು ಸಾಕ್ಷ್ಯಾಧಾರಿತ ಆರೋಗ್ಯ ಶಾಸ್ತ್ರವಾಗಿದೆ. ಇಂದಿನ ದಿನಗಳಲ್ಲಿ ಆಯುರ್ವೇದ ಕ್ಷೇತ್ರ ನಕಲಿ ಹಾಗೂ ಅರ್ಹತೆಯಿಲ್ಲದ ಚಿಕಿತ್ಸಾಗಾರ, ಹೀಗೆ ನಾನಾ ರೀತಿಯ ಸಾಕಷ್ಟು ಸವಾಲನ್ನು ಎದುರಿಸುತ್ತಿದೆ. ಜನರು ಆಯುರ್ವೇದ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಅರಿವು ಹೊಂದಿರದಿದ್ದರೆ ಅವರು ತಪ್ಪು ಚಿಕಿತ್ಸೆ ಅಥವಾ ಸುರಕ್ಷಿತವಲ್ಲದ ವಿಧಾನಗಳಿಗೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಆಯುರ್ವೇದದ ಶಿಕ್ಷಣದ ಅರಿವು ಜನರಲ್ಲಿ ನಂಬಿಕೆ ಮತ್ತು ನೈತಿಕತೆಯನ್ನು ಬಲಪಡಿಸುತ್ತದೆ. ಹಾಗೆಯೇ ಆಯುರ್ವೇದವು ಬರಿಯ ಮನೆಮದ್ದಲ್ಲ , ವಿಜ್ಞಾನದಾರಿತವಲ್ಲ ಎಂಬ ತಪ್ಪು ಕಲ್ಪನೆಯನ್ನು ದೂರ ಮಾಡುತ್ತದೆ. ಸಂಶೋಧನೆ, ವೈದ್ಯಕೀಯ ತರಬೇತಿ, ಪ್ರಯೋಗಾಲಯ ಕಾರ್ಯ ಆಯುರ್ವೇದ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಎಂಬ ಅರಿವು ಮೂಡಿದಾಗ ಜನರಿಗೆ ಆಯುರ್ವೇದ ಆಧುನಿಕ ರೋಗಗಳಿಗೆ ಪರಿಣಾಮಕಾರಿಯಾದ ಪರಿಹಾರವು ಮನವರಿಕೆಯಾಗುತ್ತದೆ.

ಇದನ್ನೂ ಓದಿ: ಹೆರಿಗೆಯ ನಂತರ ಬಾಣಂತಿಯರಿಗೆ ಕಾಣಿಸಿಕೊಳ್ಳುವ ಡಿಪ್ರೇಶನ್ ಗೆ ಕಾರಣ ಏನು ಗೊತ್ತಾ? ಡಾ. ಕೃತಿಶ್ರೀ ಸೋಮಣ್ಣ ನೀಡಿರುವ ಸಲಹೆ ಇಲ್ಲಿದೆ

ಆಯುರ್ವೇದ ಶಿಕ್ಷಣದ ಅರಿವು ಜನರಲ್ಲಿ ಸ್ವಯಂ ಚಿಕಿತ್ಸೆ ಹಾಗೂ ರೋಗಗಳು ಬಾರದಂತೆ ತಡೆಗಟ್ಟುವ ಆರೋಗ್ಯ ಸಂಸ್ಕೃತಿಯನ್ನು ಬೆಳೆಸುತ್ತದೆ. ದಿನಚರ್ಯೆ ( ದೈನಂದಿನ ನಿಯಮ ) ನಿಯತಕಾಲಿಕೆ (ಋತುಗಳಿಗೆ ತಕ್ಕಂತ ಜೀವನಶೈಲಿ) ಮತ್ತು ವೈಯಕ್ತಿಕ ಆಹಾರ ಕರ್ಮಗಳ ಮಾರ್ಗದರ್ಶನ ವೃತ್ತಿ ಸಂತೋಲನಾಯುತ ಹಾಗೂ ಆರೋಗ್ಯಕರ ಜೀವನ ನಿರ್ವಹಣೆಯ ಜೊತೆಗೆ ಇಂತಹ ಅರಿವು ಜನರಲ್ಲಿ ರಾಸಾಯನಿಕಯುಕ್ತ ಔಷಧಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *