Headlines

ದುಬೈ ಏರ್​ಪೋರ್ಟ್​ ಮೇಲೂ ದಾಳಿ- ಸಾವು, ನೋವು: Bigg Boss Drone Pratap ಇನ್ನೊಂದು ವಿಡಿಯೋ

ದುಬೈ ಏರ್​ಪೋರ್ಟ್​ ಮೇಲೂ ದಾಳಿ- ಸಾವು, ನೋವು: Bigg Boss Drone Pratap ಇನ್ನೊಂದು ವಿಡಿಯೋ

ದುಬೈ ಏರ್​ಪೋರ್ಟ್​ ಮೇಲೂ ದಾಳಿ- ಸಾವು, ನೋವು: Bigg Boss Drone Pratap ಇನ್ನೊಂದು ವಿಡಿಯೋ
ದುಬೈನಲ್ಲಿ ಕ್ಷಿಪಣಿ ದಾಳಿಯ ವದಂತಿಗಳ ನಡುವೆ, ಬಿಗ್‌ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಮತ್ತು ಕ್ರೀಡಾಪಟು ಪಿವಿ ಸಿಂಧು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಬುರ್ಜ್ ಖಲೀಫಾಗೆ ಹಾನಿಯಾಗಿಲ್ಲ ಎಂದು ಪ್ರತಾಪ್ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದು, ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇರಾನ್​-ಅಮೆರಿಕ- ಇಸ್ರೇಲ್​ ನಡುವಿನ ಸಂಘರ್ಷದ ನಡುವೆಯೇ ದುಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಬಾಂಬ್​ ದಾಳಿಯಾಗಿದ್ದು, ಸಾವು-ನೋವಿನ ಬಗ್ಗೆ ವರದಿಯಾಗಿದೆ. ಇದರ ಮಧ್ಯೆಯೇ ಬಿಗ್​ಬಾಸ್​ ಡ್ರೋನ್​ ಪ್ರತಾಪ್​ (Bigg Boss Drone Pratap), ಕಾಂಗ್ರೆಸ್​ ಶಾಸಕ ಸೇರಿದಂತೆ ನೂರಕ್ಕೂ ಅಧಿಕ ಪ್ರಯಾಣಿಕರು ಸಿಲುಕಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಸಿಲುಕಿರುವ ಬಗ್ಗೆ ಡ್ರೋನ್​ ಪ್ರತಾಪ್​ ನಿನ್ನೆ ಮಧ್ಯರಾತ್ರಿ ಒಂದು ವಿಡಿಯೋ ಶೇರ್​ ಮಾಡಿದ್ದರು.

ಇದೀಗ ಅವರು ಮತ್ತೊಂದು ವಿಡಿಯೋ ಶೇರ್​ ಮಾಡಿದ್ದಾರೆ. ದುಬೈ ಮೇಲೆ ಇರಾನ್ ಕ್ಷಿಪಣಿ ದಾಳಿಗೆ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್​ ಖಲೀಫಾಗೆ ಹಾನಿಯಾಗಿದೆ ಎನ್ನುವ ವರದಿ ಸೋಷಿಯಲ್​ ಮೀಡಿಯಾದಲ್ಲಿ ಬರುತ್ತಿದೆ. ಈಗ ಅದರ ಎದುರೇ ನಿಂತು ವಿಡಿಯೋ ಮಾಡಿ ಅದನ್ನು ಶೇರ್​ ಮಾಡಿದ್ದಾರೆ ಡ್ರೋನ್​ ಪ್ರತಾಪ್​.

ಇದನ್ನು ಒಂದು ಗಂಟೆ ಮುಂಚೆ ಶೇರ್​ ಮಾಡಲಾಗಿದೆ. ದಾಳಿಗೆ ಹಾನಿಗೆ ಒಳಗಾಗಿರುವ ಬುರ್ಜ್​ ಕಲೀಫಾಗೆ ಯಾವುದೇ ಹಾನಿಯಾಗಿಲ್ಲ. ನಾವಿಲ್ಲಿ ಕ್ಷೇಮವಾಗಿದ್ದೇವೆ ಎಂದಿದ್ದಾರೆ ಡ್ರೋನ್​.

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಕಿವಿಗೊಡಬೇಡಿ. ವಿಮಾನಗಳು ರದ್ದಾಗಿರುವುದು ನಿಜ. ಆದರೆ ನಾವಿಲ್ಲಿ ಎಲ್ಲರೂ ಸುರಕ್ಷಿತವಾಗಿ ಇದ್ದೇವೆ. ನನ್ನ ಹಿಂದೆ ಮಾಲ್​ ಆಫ್ ದುಬೈ, ಎಂಆರ್​ ಟವರ್ಸ್​ ಎಲ್ಲವೂ ಸರಿಯಾಗಿಯೇ ಇವೆ. ಯಾರೂ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಇಲ್ಲಿ ಸ್ಥಿತಿ ಸಂಪೂರ್ಣ ಕಂಟ್ರೋಲ್​ನಲ್ಲಿ ಇದೆ. ಯಾರೂ ಭಯ ಪಡಬೇಡಿ. ಎಲ್ಲರೂ ಸೇಫ್​ ಆಗಿದ್ದೇವೆ ಎಂದಿದ್ದಾರೆ ಡ್ರೋನ್​ ಪ್ರತಾಪ್​.

ಅದೇ ಇನ್ನೊಂದೆಡೆ, ಕ್ರೀಡಾ ತಾರೆ ಪಿವಿ ಸಿಂಧು ಕೂಡ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದು, ಅವರು ವಿಮಾನ ನಿಲ್ದಾಣದ ಸಮೀಪ ಸ್ಪೋಟ ಸಂಭವಿಸುತ್ತಿರುವ ಶಬ್ದಗಳು ಕೇಳಿಸುತ್ತಿವೆ. ಕಳೆದ ಒಂದು ಗಂಟೆಯಿಂದ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಸದ್ಯ ನಮಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮತ್ತು ಹೈ ಕಮಿಷನರ್ ಅವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ನಮಗೆ ಸಂಪೂರ್ಣ ಸುರಕ್ಷತೆ ಒದಗಿಸಲಾಗುತ್ತಿದೆ ಎಂದಿದ್ದಾರೆ.

Source link

Leave a Reply

Your email address will not be published. Required fields are marked *