ಅಮೆರಿಕ ಮತ್ತು ಇಸ್ರೇಲ್, ಇರಾನಿನ ಮೇಲೆ ದಾಳಿ ಮಾಡಿದ್ದು ಯದ್ಧ ಭೀತಿ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಭಾರತದ ಅನೇಕ ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿಶೇಷವಾಗಿ ಮಧ್ರಪ್ರಾಚ್ಯ ದೇಶಗಳಿಗೆ ಹೋಗಬೇಕಿದ್ದ ಎಲ್ಲಾ ವಿಮಾನಗಳನ್ನು ಸಹ ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿದ್ದು, ವಿದೇಶಕ್ಕೆ ತೆರಳಿದ್ದ ಸಾವಿರಾರು ಭಾರತೀಯರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿದ್ದಾರೆ. ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಸಹ ವಿದೇಶದಲ್ಲಿ ಸಿಲುಕಿದ್ದು, ವಿಮಾನ ನಿಲ್ದಾಣದಿಂದ ವಿಡಿಯೋ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ.
ಡ್ರೋನ್ ಪ್ರತಾಪ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಾವು ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾನೆ. ಇಂದು ರಾತ್ರಿ ಅವರು ಬೆಂಗಳೂರಿಗೆ ವಾಪಸ್ ಹೊರಡಬೇಕಿತ್ತಂತೆ ಅವರಿಗೆ ಟಿಕೆಟ್ ಸಹ ಬುಕ್ ಮಾಡಿದಂತೆ, ಆದರೆ ಯುದ್ಧದ ಭೀತಿಯಿಂದಾಗಿ ಎಲ್ಲ ವಿಮಾನಗಳು ರದ್ದಾಗಿವೆ. ಇದೇ ಕಾರಣಕ್ಕೆ ತಾವು ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಡ್ರೋನ್ ಪ್ರತಾಪ್ ಹೇಳಿದ್ದಾರೆ.
‘ಮುಂದಿನ 12 ಗಂಟೆಗಳ ಕಾಲ ಎಲ್ಲ ವಿಮಾನ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ, 12 ಗಂಟೆ ಬಳಿಕ ಹೊಸ ಅಪ್ಡೇಟ್ ಕೊಡುತ್ತಾರಂತೆ. ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಅನೌನ್ಸ್ ಮೆಂಟ್ ಮಾಡುತ್ತಿದ್ದಾರೆ’ ಎಂದಿರುವ ಡ್ರೋನ್ ಪ್ರತಾತ್, ಅಲ್ಲಿ ಕ್ಯಾನ್ಸಲ್ ಆಗಿರುವ ದೊಡ್ಡ ಪಟ್ಟಿಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮುಂದಿನ ಅರ್ಧದಿನ ಡ್ರೋನ್ ಪ್ರತಾಪ್ ಮತ್ತು ಭಾರತಕ್ಕೆ ಬರಲು ಹಲವಾರು ಮಂದಿ ವಿಮಾನ ನಿಲ್ದಾಣದಲ್ಲಿ ಕಳೆಯಬೇಕಾಗಿದೆ.
ಇದನ್ನೂ ಓದಿ:ಸಹಾಯ ಮಾಡಿದವರನ್ನು ಮರೆಯಲಿಲ್ಲ ಡ್ರೋನ್ ಪ್ರತಾಪ್
ಕಳೆದ ಜನವರಿಯಲ್ಲಿ ವಿಡಿಯೋ ಮಾಡಿದ್ದ ಡ್ರೋನ್ ಪ್ರತಾಪ್, ತಮ್ಮ ಡ್ರೋನಾರ್ಕ್ ಕಂಪನಿಯನ್ನು ದುಬೈನಲ್ಲಿ ನೊಂದಣಿ ಮಾಡಿಸಿದ್ದಾಗಿ ಹೇಳಿದ್ದರು. ಇತ್ತೀಚೆಗೆ ದುಬೈಗೆ ಹೋಗಿದ್ದ ಡ್ರೋನ್ ಪ್ರತಾಪ್ ಅಲ್ಲಿ ತಮ್ಮ ಬೆಂಬಲಿಗರನ್ನು ಭೇಟಿಯಾಗಿ ಅವರಿಗೆ ಉಡುಗೊರೆ ನೀಡಿದ್ದರು. ಬಳಿಕ ಅಲ್ಲಿನ ಫಾರಂ ಒಂದರಲ್ಲಿ ಕೃಷಿ ನೋಡಿ, ಮಾಹಿತಿ ವ್ಲಾಗ್ನಲ್ಲಿ ಹಂಚಿಕೊಂಡಿದ್ದರು. ಅಲ್ಲಿನ ಕನ್ನಡಿಗರ ಹೋಟೆಲ್ಗೆ ಭೇಟಿ ನೀಡಿ ಮುದ್ದೆ ಸಹ ಮಾಡಿದ್ದರು. ಆದರೆ ಇದೀಗ ಬೆಂಗಳೂರಿಗೆ ಬರುವ ಸಮಯದಲ್ಲಿ ಅವರ ವಿಮಾನ ರದ್ದಾಗಿ ಅಬುದಾಬಿಯಲ್ಲಿ ಸಿಲುಕಿಕೊಳ್ಳುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 9:56 pm, ಶನಿ, 28 ಫೆಬ್ರವರಿ 26