Headlines

Dharwad: ನಶೆಯಲ್ಲಿದ್ದವನ ಬರ್ಬರ ಕೊಲೆ; ದೇವಸ್ಥಾನದ ಎದುರೇ ಹರಿದ ನೆತ್ತರು

Dharwad: ನಶೆಯಲ್ಲಿದ್ದವನ ಬರ್ಬರ ಕೊಲೆ; ದೇವಸ್ಥಾನದ ಎದುರೇ ಹರಿದ ನೆತ್ತರು


ಧಾರವಾಡ, ಡಿಸೆಂಬರ್ 24: ಬಸಪ್ಪನ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹುಣಸಿಕಚ್ಚಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿ ವಿಟ್ಠಲ್ ಕೂರಾಡಿ ಮೃತ ದುರ್ದೈವಿ, ಆರೋಪಿಗಳು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಕಸ್ತೂರಿ ವಿವಾಹ ವಿಠ್ಠಲ್, ಪೆಂಡಾಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಿತ್ಯವೂ ಕುಡಿದು ಬಂದು ಈತ ಜಗಳ ಮಾಡುತ್ತಿರುವ ಹಿನ್ನೆಲೆ ಪತ್ನಿ ಕಸ್ತೂರಿ ತವರುಮನೆಗೆ ಬಂದು ಹೆತ್ತವರ ಜೊತೆ ವಾಸವಿದ್ದರು. ಕಸ್ತೂರಿ ಮತ್ತು ವಿಟ್ಠಲ್ ದಂಪತಿಗೆ ಮೂವರು ಮಕ್ಕಳು ಇದ್ದು, ಮಾವನ ಮನೆಗೆ ಆಗಾಗ ವಿಟ್ಠಲ್ ಬಂದು ಹೋಗಿದ್ದಾರೆ. ಅದರಂತೆ ನಿನ್ನೆ ರಾತ್ರಿಯೂ ಮಾವನ ಮನೆಗೆ ಬಂದಿದ್ದರು. ಬಳಿಕ ದೇವಸ್ಥಾನದಲ್ಲಿ ಮಲಗಿದ್ದರು. ಆದರೆ ರಾತ್ರಿ ಬೆಳಗಾಗುವುದರೊಳಗೆ ವಿಟ್ಠಲ್ ಕೊಲೆಯಾಗಿದೆ.

ಇದನ್ನೂ ಓದಿ: ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!

ಈ ಬಗ್ಗೆ ಮಾಹಿತಿ ಸಿಗದಂತೆ ಕಲಘಟಗಿ ಠಾಣೆಗೆ ಭೇಟಿ ನೀಡಿದ ಪ್ರಕರಣವನ್ನು ಪರಿಶೀಲಿಸಲಾಗಿದೆ. ಆರೋಪಿಗಳ ಪತ್ತೆಗೆ ಖಾಕಿ ಮುಂದಾದಾಗ ಕೊಲೆಯಾದ ವಿಟ್ಠಲ್ ಸಹೋದರ ಅಣ್ಣಪ್ಪ ಮತ್ತು ಕಸ್ಸೂರಿ ಅವರ ಸಹೋದರ ಪುಂಡಲೀಕ ಎಂಬುದು ಬಹಿರಂಗವಾಗಿದೆ.

ಕಳ್ಳತನವನ್ನೂ ವಿಠ್ಠಲ್ ಮಾಡುತ್ತಿದ್ದರು ಎನ್ನಲಾಗುತ್ತದೆ, ಸಹೋದರನ ಬೈಕ್ ಕದ್ದು ಅದಕ್ಕೆ ಬೆಂಕಿ ಹಚ್ಚಿದ್ದರಂತೆ. ಹೀಗಾಗಿ ಅಣ್ಣಪ್ಪ, ವಿಟ್ಠಲ್ ಮೇಲೆ ಸಿಟ್ಟಾಗಿದ್ದ. ಇನ್ನೊಂದು ಕಡೆ ಕುಡಿದು ಬಂದು ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಕಾರಣ ಪುಂಡಲೀಕ ಕೂಡ ಮುನಿಸಿಕೊಂಡಿದ್ದ. ಹೀಗಾಗಿ ಈ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ವಿಠ್ಠಲ್‌ಗೆ ಸರಿಯಾಗಿ ಮದ್ಯ ಸೇವಿಸಿದ್ದು, ರಾತ್ರಿ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆತನನ್ನು ಬರ್ಬರವಾಗಿ ಕೊಲೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ವಿಠ್ಠಲ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ಬೇರೆಯವರ ಪಾತ್ರವಿದೆ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 4:55 pm, ಬುಧವಾರ, 24 ಡಿಸೆಂಬರ್ 25



Source link

Leave a Reply

Your email address will not be published. Required fields are marked *