ವೀಕೆಂಡ್​ ಪಾರ್ಟಿ ವೇಳೆ ಕಿರಿಕ್​: ಸ್ನೇಹಿತನನ್ನೇ ಕೊಂದು ಆರೋಪಿ ಪರಾರಿ

ವೀಕೆಂಡ್​ ಪಾರ್ಟಿ ವೇಳೆ ಕಿರಿಕ್​: ಸ್ನೇಹಿತನನ್ನೇ ಕೊಂದು ಆರೋಪಿ ಪರಾರಿ


ಸ್ನೇಹಿತನನ್ನೇ ಕೊಂದು ಆರೋಪಿ ಪರಾರಿ

ಬೆಂಗಳೂರು, ಅಕ್ಟೋಬರ್ 27: ಮದ್ಯದ ನಾಶೆಯಲ್ಲಿ ಕೂಲಿ ಕಾರ್ಮಿಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು (ಬೆಂಗಳೂರು) ಉತ್ತರ ತಾಲೂಕಿನ ನವರತ್ನ ಅಗ್ರಹಾರ ಬಳಿ ನಡೆದಿದೆ. ಅಸ್ಸಾಂ ಮೂಲದ ಶಂಭು ತಂತಿ ಮೃತ ಆರೋಪಿ, ಆರೋಪಿ ರಾಧೇಶ್ಯಾಮ್ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಸ್ನೇಹಿತರಾಗಿದ್ದರೆ, ತಡ ರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದರು. ಆ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ.

ನವರತ್ನ ಅಗ್ರಹಾರ ಬಳಿಯ ಖಾಸಗಿ ಅಪಾರ್ಟ್‌ಮೆಂಟ್ ಕಟ್ಟಡ ಕಾಮಗಾರಿಗೆಂದು ಅಸ್ಸಾಂ ಮತ್ತು ಬಿಹಾರ ಮೂಲದ ಅನೇಕರು ಬಂದಿದ್ದು, ಅಲ್ಲೇ ಪಕ್ಕದ ಶೆಡ್‌ಗಳನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಶನಿವಾರದವರೆಗೂ ಕೆಲಸ ಮಾಡಿದ್ದ ತಂಡ ನಿನ್ನೆ ಭಾನುವಾರದ ಹಿನ್ನಲೆ ಪಾರ್ಟಿ ನಡೆಸಿದೆ. ಈ ವೇಳೆ ಮದ್ಯದ ನಶೆಯಲ್ಲಿದ್ದ ಶಂಭು ತಂತಿ ಮತ್ತು ರಾಧೇಶ್ಯಾಮ್ ನಡುವೆ ಯಾವುದೋ ಕ್ಷುಲಕ ವಿಚಾರಕ್ಕೆ ಕಿರಿಕ್ ಆಗಿದ್ದು, ಜಗಳ ವಿಕೋಪಕ್ಕೆ ಹೋಗಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಎಲ್ಲರೂ ಹೊಡೆದಾಡಿದ್ದಾರೆ. ಈ ವೇಳೆ ರಾಧೇಶ್ಯಾಮ್ ಜೋರಾಗಿ ಹಲ್ಲೆ ನಡೆಸಿದ್ದು, ಅಲ್ಲೇ ಕುಸಿದು ಬಿದ್ದು ಶಂಭುತಂತಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಗಂಗಾವತಿ ಬಿಜೆಪಿ ಯುವ ಮುಖಂಡ ವೆಂಕಟೇಶ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 10 ಆರೋಪಿಗಳ ಬಂಧನ ಬೆನ್ನಲ್ಲೇ ಹೊರಬಂತು ಸತ್ಯ!

ಇಷ್ಟೆಲ್ಲ ನಡೆದರೂ ಅತಿಯಾಗಿ ಮದ್ಯ ಸೇವಿಸಿದ್ದ ರಾಧೇಶ್ಯಾಮ್‌ಗೆ ಸ್ನೇಹಿತರಾಗಿದ್ದ ಬಗ್ಗೆ ಅರಿವೇ ಇರಲಿಲ್ಲ. ಬೆಳಗಿನ ಜಾವದ ವೇಳೆ ಆತನಿಗೆ ಈ ಬಗ್ಗೆ ಗೊತ್ತಾಗಿದ್ದು, ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಇತ್ತ ಬೆಳಗ್ಗೆ ಎಷ್ಟು ಎಬ್ಬಿಸಿದರೂ ಶಂಭುತಂತಿ ಎದ್ದೇಳದ ಕಾರಣ, ಶೆಡ್ ನಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ವಿಚಾರ ತಿಳಿಯದಂತೆ ಈಶಾನ್ಯ ವಿಭಾಗ ಡಿಸಿಪಿ ಸಜಿತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಅಧಿಕಾರಿ. ತಲೆ ಮರೆಸಿಕೊಂಡಿರೋ ಆರೋಪಿ ರಾಧೇಶ್ಯಾಮ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *