ಸ್ಪರ್ಧಿಗಳು ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ ಸೀಸನ್ 12) ಮನೆಯ ನಿಯಮಾವಳಿಗಳನ್ನು ಉಲ್ಲಂಘಿಸಲು ಶಿಕ್ಷೆ ಆಗುತ್ತಿದೆ. ಈ ವಾರದ ನಿಯಮಗಳು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ನಿಯಮ ಮುರಿದವರಿಗೆ ಶಿಕ್ಷೆ ನೀಡುವುದು ಕ್ಯಾಪ್ಟನ್ ರಘು ಅವರ ಕೆಲಸ. ರಕ್ಷಿತಾ ಶೆಟ್ಟಿ (ರಕ್ಷಿತಾ ಶೆಟ್ಟಿ) ಅವರು ಸರಿಯಾಗಿ ಮೈಕ್ ಧರಿಸಿರಲಿಲ್ಲ. ಆದ್ದರಿಂದ ಅವರು ಎಲ್ಲರ ಬಳಿ ಹೋಗಿ ಕ್ಷಮೆ ಕೇಳಬೇಕು ಎಂದು ಕ್ಯಾಪ್ಟನ್ ರಘು ಆದೇಶ ನೀಡಿದ್ದಾರೆ. ತಮ್ಮ ಬಳಿ ಕ್ಷಮೆ ಕೇಳಲು ಬಂದ ರಕ್ಷಿತಾ ಶೆಟ್ಟಿಯನ್ನು ಧ್ರುವಂತ್ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಅದನ್ನು ಕಂಡು ಇನ್ನುಳಿದವರಿಗೆ ಸಖತ್ ನಗು ಬಂದಿದೆ. ಇದರಿಂದ ಬೇಸರಗೊಂಡ ರಕ್ಷಿತಾ ಶೆಟ್ಟಿ ಅವರು ‘ಇನ್ನು ಯಾವತ್ತೂ ಮೈಕ್ ತಪ್ಪಾಗಿ ಹಾಕಿಕೊಳ್ಳಲ್ಲ’ ಎಂದು ನಿರ್ಧರಿಸಿದ್ದಾರೆ. ರಕ್ಷಿತಾ ಅವರನ್ನು ಕಂಡರೆ ಧ್ರುವಂತ್ (ದ್ರುವಂತ್) ಅವರಿಗೆ ಅಸಮಾಧಾನ ಇದೆ. ಅದನ್ನು ಅವರು ಅನೇಕ ಬಾರಿ ಹೇಳಿದ್ದುಂಟು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.