ಗಂಟೆಗಟ್ಟಲೆ ಉಜ್ಜೋದು ಬೇಡ, ಈ ಲಿಕ್ವಿಡ್ ಬಳಸಿದರೆ ಎಕ್ಸಾಸ್ಟ್ ಫ್ಯಾನ್ ಜಿಡ್ಡು ತಾನಾಗಿಯೇ ಬಿಡುತ್ತೆ

ಗಂಟೆಗಟ್ಟಲೆ ಉಜ್ಜೋದು ಬೇಡ, ಈ ಲಿಕ್ವಿಡ್ ಬಳಸಿದರೆ ಎಕ್ಸಾಸ್ಟ್ ಫ್ಯಾನ್ ಜಿಡ್ಡು ತಾನಾಗಿಯೇ ಬಿಡುತ್ತೆ

ಗಂಟೆಗಟ್ಟಲೆ ಉಜ್ಜೋದು ಬೇಡ, ಈ ಲಿಕ್ವಿಡ್ ಬಳಸಿದರೆ ಎಕ್ಸಾಸ್ಟ್ ಫ್ಯಾನ್ ಜಿಡ್ಡು ತಾನಾಗಿಯೇ ಬಿಡುತ್ತೆ

Kitchen exhaust fan cleaning: ಎಕ್ಸಾಸ್ಟ್ ಫ್ಯಾನ್ ಮೇಲಿರುವ ಜಿಗುಟು ಎಣ್ಣೆ ಮತ್ತು ಧೂಳನ್ನು ಕಂಡು ಬೇಸತ್ತಿದ್ದೀರಾ? ಅದನ್ನು ಸ್ವಚ್ಛಗೊಳಿಸುವುದು ದೊಡ್ಡ ಕೆಲಸ ಎಂದು ಮರುಗಬೇಡಿ. ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಯೇ ಅದನ್ನು ಕೇವಲ ಐದೇ ನಿಮಿಷದಲ್ಲಿ ಹೊಸದರಂತೆ ಮಾಡಬಹುದು.

ಅಡುಗೆ ಮನೆಯಲ್ಲಿ ಎಣ್ಣೆ ಮತ್ತು ಮಸಾಲೆಗಳ ಬಳಕೆಯಿಂದಾಗಿ ಎಕ್ಸಾಸ್ಟ್ ಫ್ಯಾನ್ ಬೇಗನೆ ಜಿಗುಟು ಹಿಡಿಯುತ್ತದೆ. ವಿಶೇಷವಾಗಿ ಸಣ್ಣ ಅಡುಗೆ ಮನೆ ಅಥವಾ ಕಿಟಕಿ ಇಲ್ಲದ ಮನೆಗಳಲ್ಲಿ ಇದರ ಬಳಕೆ ಹೆಚ್ಚು, ಹಾಗಾಗಿ ಇದು ಬೇಗನೆ ಕೊಳೆಯಾಗುತ್ತದೆ. ಇದನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂದು ಇಲ್ಲಿ ತಿಳಿಯೋಣ.

ದುಬಾರಿ ಕೆಮಿಕಲ್‌ಗಳ ಬದಲು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ. ಸ್ವಚ್ಛಗೊಳಿಸುವ ಮೊದಲು ಸ್ವಿಚ್ ಆಫ್ ಮಾಡುವುದನ್ನು ಮರೆಯಬೇಡಿ.

ಈಗ ಒಂದು ಬಟ್ಟಲಿನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅಡುಗೆ ಸೋಡಾ (Baking Soda) ಮತ್ತು ಒಂದು ಚಮಚ ಡಿಶ್‌ವಾಶ್ ಲಿಕ್ವಿಡ್ ಬೆರೆಸಿ. ಒಂದು ವೇಳೆ ಅಡುಗೆ ಸೋಡಾ ಇಲ್ಲದಿದ್ದರೆ, ಅದರ ಬದಲಿಗೆ ಯಾವುದಾದರೂ ಶಾಂಪೂ ಬಳಸಬಹುದು.

ಹಳೆಯ ಟೂತ್ ಬ್ರಷ್ ಸಹಾಯದಿಂದ ಈ ದ್ರಾವಣವನ್ನು ಫ್ಯಾನ್ ರೆಕ್ಕೆಗಳಿಗೆ ಮತ್ತು ಜಾಲರಿಗೆ ಹಚ್ಚಿ ಸ್ವಲ್ಪ ಉಜ್ಜಿರಿ. ಕೆಲವೇ ನಿಮಿಷಗಳಲ್ಲಿ ಜಿಗುಟು ಬಿಟ್ಟು ಫ್ಯಾನ್ ಸ್ವಚ್ಛವಾಗುತ್ತದೆ.

ಕಡಿಮೆ ಸಮಯದಲ್ಲಿ ಫ್ಯಾನ್ ಸ್ವಚ್ಛಗೊಳಿಸಬೇಕೆಂದರೆ ಕೈಗೆ ಒಂದು ಮೃದುವಾದ ಬಟ್ಟೆಯನ್ನು ಸುತ್ತಿಕೊಂಡು ಫ್ಯಾನ್ ರೆಕ್ಕೆಗಳನ್ನು ಜಾಗರೂಕತೆಯಿಂದ ಒರೆಸಿ. ಇದರಿಂದ ಧೂಳು ಮತ್ತು ಜಿಗುಟು ಸುಲಭವಾಗಿ ಬಟ್ಟೆಗೆ ಅಂಟಿಕೊಳ್ಳುತ್ತದೆ ಮತ್ತು ಫ್ಯಾನ್ ಬೇಗನೆ ಕ್ಲೀನ್ ಆಗುತ್ತದೆ.

Source link

Leave a Reply

Your email address will not be published. Required fields are marked *