Headlines

ಹೋಳಿ ಹುಣ್ಣಿಮೆಯಂದೇ ಗ್ರಹಣ: ಜಲಕಂಟಕ, ಅಗ್ನಿ ಅನಾಹುತ!, ಸಾಲು ಸಾಲು ಅವಘಡಗಳು ಫಿಕ್ಸ್​​?

ಹೋಳಿ ಹುಣ್ಣಿಮೆಯಂದೇ ಗ್ರಹಣ: ಜಲಕಂಟಕ, ಅಗ್ನಿ ಅನಾಹುತ!, ಸಾಲು ಸಾಲು ಅವಘಡಗಳು ಫಿಕ್ಸ್​​?


ಬೆಂಗಳೂರು, ಮಾರ್ಚ್ 03: ಹೋಳಿ ಹುಣ್ಣಿಮೆಯಂದು ಗ್ರಹಣ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಜಲಕಂಟಕ ಅಗ್ನಿ ಮತ್ತು ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಏಕೆಂದರೆ ಚಂದ್ರನು ಜಲಕಾರಕನಾಗಿದ್ದಾನೆ ಮತ್ತು ಹೋಳಿ ಹುಣ್ಣಿಮೆಯು ಅಗ್ನಿಗೆ ಸಂಬಂಧಿಸಿದೆ. ಈ ಅವಘಡಗಳು ಸಂಭವಿಸದಂತೆ ಪರಮೇಶ್ವರನಲ್ಲಿ ಪ್ರಾರ್ಥಿಸುವುದರಿಂದ ಎಲ್ಲವೂ ನಿವೃತ್ತಿಯಾಗುತ್ತವೆ ಎಂದು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್. ಭಾರತದಲ್ಲಿ ಕೇವಲ 16 ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಂಡರೂ, ಸಣ್ಣ ಪ್ರಮಾಣದಲ್ಲಿ ತೊಂದರೆಗಳು ಬರಬಹುದು. ಆದರೆ, ಈ ತೊಂದರೆಗಳಿಂದ ಮುಕ್ತಿಯಾಗಲು ಪರಮೇಶ್ವರನ ಪ್ರಾರ್ಥನೆ ಅಗತ್ಯ. ಪ್ರಸ್ತುತ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧಕ್ಕೂ ಮತ್ತು ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ. ಭಾರತ ದೇಶವು ಕರ್ಮಭೂಮಿ, ಜಪಭೂಮಿ, ತಪೋಭೂಮಿ ಮತ್ತು ಯಜ್ಞಭೂಮಿ ಆಗಿರುವುದರಿಂದ ಯಾವುದೇ ತೊಂದರೆಗಳು ಬರದಂತೆ ಪರಮೇಶ್ವರನನ್ನು ಪ್ರಾರ್ಥಿಸುವುದು. ಒಂದು ಕೊಳಗ ಹಾಲಿಗೆ ಒಂದು ಚಮಚ ಮೊಸರು ಹಾಕಿದರೆ ಹಾಲು ಕೆಡುವಂತೆ, ಗ್ರಹಣವು ಸಣ್ಣ ಪ್ರಮಾಣದಲ್ಲಿ ಕಂಡರೂ ಅದರ ದೋಷ ಇದ್ದೇ ಇರುತ್ತದೆ. ಈ ದೋಷ ದೇಶಕ್ಕೆ ತೊಂದರೆ ನೀಡದಿರಲಿ ಎಂದು ಪ್ರಾರ್ಥಿಸುವುದು ಈ ದಿನದ ವಿಶೇಷ ವಿಶೇಷ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *