Headlines

ಬ್ಯಾಡಗಿ ಮೆಣಸಿನಕಾಯಿ ಮೇಲೆ ಯುದ್ಧದ ಕಾರ್ಮೋಡ: ರಫ್ತು ಬಂದ್, ಆತಂಕದಲ್ಲಿ ಬೆಳೆಗಾರರು

ಬ್ಯಾಡಗಿ ಮೆಣಸಿನಕಾಯಿ ಮೇಲೆ ಯುದ್ಧದ ಕಾರ್ಮೋಡ: ರಫ್ತು ಬಂದ್, ಆತಂಕದಲ್ಲಿ ಬೆಳೆಗಾರರು

ಬ್ಯಾಡಗಿ ಮೆಣಸಿನಕಾಯಿ ಮೇಲೆ ಯುದ್ಧದ ಕಾರ್ಮೋಡ: ರಫ್ತು ಬಂದ್, ಆತಂಕದಲ್ಲಿ ಬೆಳೆಗಾರರು

ಇರಾನ್-ಇಸ್ರೇಲ್-ಅಮೆರಿಕಾ ಯುದ್ಧದ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ಬ್ಯಾಡಗಿ ಮೆಣಸಿನಕಾಯಿ ರಫ್ತು ಸ್ಥಗಿತಗೊಂಡಿದೆ.  ಇದರಿಂದಾಗಿ ಮಾರುಕಟ್ಟೆಯಲ್ಲಿ ವಹಿವಾಟು ಕುಸಿಯುವ ಮತ್ತು ರೈತರು ಬೆಳೆದ ಮೆಣಸಿನಕಾಯಿ ಬೆಲೆ ಕಡಿಮೆಯಾಗುವ ಆತಂಕ ಎದುರಾಗಿದೆ.

ಹಾವೇರಿ: ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ಯುದ್ಧದ ಕಾವು ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೂ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಪ್ತು ಆಗುತ್ತಿತ್ತು. ಆದರೆ ತನ್ನ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಕಂಗೆಟ್ಟ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿರುವುದರಿಂದಾಗಿ ಗಲ್ಪ್‌ ರಾಷ್ಟ್ರಗಳಲ್ಲಿ ಆತಂಕದ ವಾತಾವರಣವಿದ್ದು, ರಪ್ತು ಆಮದು ಎಲ್ಲವೂ ಬಂದ್ ಆಗಿದೆ.

ಹೀಗಾಗಿ ಈಗ ಗಲ್ಫ್ ರಾಷ್ಟ್ರಕ್ಕೆ ಹೋಗಬೇಕಾಗಿದ್ದ ಮೆಣಸಿನಕಾಯಿ ಹಾಗೆಯೇ ಮಾರುಕಟ್ಟೆಗಳಲ್ಲಿ ಸಿಲುಕುವಂತಾಗಿದೆ. ಗಲ್ಫ್ ಬದಲು ಬೇರೆ ದೇಶಗಳಿಗೆ ರಪ್ತು ಮಾಡೋಣ ಅಂದರೆ ರಪ್ತು ಮಾಡುವ ಸುಂಕ ಬಾಡಿಗೆಯೂ ಕೂಡಾ ಹೆಚ್ಚಳವಾಗಿದೆ. ಈ ಬ್ಯಾಡಗಿ ಮೆಣಸಿನಕಾಯಿ ಮಸಾಲೆ ಪದಾರ್ಥಗಳ ತಯಾರಿಕೆ, ಖಾರದ ಪುಡಿ ತಯಾರಿಕೆ ಅಷ್ಟೇ ಅಲ್ಲಸೌಂದರ‍್ಯವರ್ಧಕ ಲಿಪ್‌ಸ್ಟಿಕ್‌, ನೇಲ್‌ಪಾಲಿಷ್‌ ತಯಾರಿಕೆಯಲ್ಲೂ ಬಳಕೆಯಾಗುತ್ತದೆ.

ಮಲೇಶಿಯಾ ಇಂಡೋನೇಶಿಯಾ, ಬಾಲಿ, ಥೈಲ್ಯಾಂಡ್, ಸಿಂಗಪೂರ್ ದೇಶಗಳಿಗೆ ಈ ಬ್ಯಾಡಗಿ ಮೆಣಸಿನಕಾಯಿ ರಫ್ತಾಗುತ್ತೆ. ಆದರೆ ಮೆಣಸಿನಕಾಯಿ ರಪ್ತು ಮಾಡುವ ಕಂಟೇನರ್‌ಗಳ ಬೆಲೆಯಲ್ಲೂ ದಿಢೀರ್ ಏರಿಕೆಯಾಗಿದೆ. ಮೊದಲು ಒಂದು ಕಂಟೇನರ್‌ಗೆ 800 ಯು.ಎಸ್ ಡಾಲರ್ ಬಾಡಿಗೆ ಇತ್ತು.

ಈಗ ಒಂದು ಕಂಟೇನರ್ ಗಳ ಬಾಡಿಗೆ 3500 ಯುಎಸ್ ಡಾಲರ್ ದಾಟಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 1 ಕಂಟೇನರ್ ಗೆ 1,50,000 ಬಾಡಿಗೆ ಇತ್ತು. ಆದರೆ ಈಗ ಒಂದು ಕಂಟೇನರ್‌ಗೆ ಮೂರುವರೆ ಲಕ್ಷ ರೂಪಾಯಿ ದಾಟಿದೆ.

ರಪ್ತು ಬಾಡಿಗೆ ಹೆಚ್ಚಳವಾಗಿರುವುದು ಸಹಜವಾಗೇ ಮೆಣಸಿನಕಾಯಿ ರಫ್ತಿನ ಮೇಲೆ ಮಾರಕ ಪರಿಣಾಮ ಬೀರಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ ಸರಾಸರಿ 800 ರಿಂದ1000 ಕೋಟಿ ರೂ.ವಹಿವಾಟು ನಡೆಯುತ್ತಿತ್ತು. ಬ್ಯಾಡಗಿಗೆ ರಾಜ್ಯದ ಬಳ್ಳಾರಿ ಹಾಗೂ ಆಂಧ್ರಪದೇಶದ ನಾನಾ ಕಡೆಯಿಂದಲೂ ಮೆಣಸಿನಕಾಯಿ ಮಾರಾಟಕ್ಕೆ ವ್ಯಾಪಾರಿಗಳು ಬರುತ್ತಾರೆ.

ಇದನ್ನೂ ಓದಿ: ಸತ್ತಿರುವುದಾಗಿ ಘೋಷಿಸಿದ ವೈದ್ಯರು: 35 ನಿಮಿಷ ನಿರಂತರ ಸಿಪಿಆರ್ ಮಾಡಿ ಪತ್ನಿಯ ಬದುಕಿಸಿದ ಪತಿ..

ಆದರೆ ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರು ತರುವ ಮೆಣಸಿನಕಾಯಿ ಬೆಲೆ ಕಡಿಮೆ ಆಗಲಿದೆ ಎಂದು ವರ್ತಕರು ಹೇಳುತ್ತಿದ್ದು,ಇದರಿಂದ ಮೆಣಸಿನಕಾಯಿ ಬೆಳೆದ ರೈತರಲ್ಲೂ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ನನ್ನ ಬ್ರೇಕಪ್‌ಗೆ ಇವರೇ ಕಾರಣ : ಅವಳಿ ಸೋದರಿಗೆ 40 ಬಾರಿ ಇರಿದು ಕೊಂದ ಟೆಕ್ಕಿ, ತಾಯಿ ಮೇಲೂ ಹಲ್ಲೆ

Source link

Leave a Reply

Your email address will not be published. Required fields are marked *