ಹಾಸನ, ಜನವರಿ 18: ರಾಜ್ಯದಲ್ಲಿ ಖಾಸಗಿ ಫೈನಾನ್ಸ್ಗಳ ಹಾವಳಿ ಮಿತಿ ಮೀರಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಎದುರಾಗಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆ ಬೀಗ ಹಾಕಿರುವ ಆರೋಪ ಕೇಳಿಬಂದಿದೆ.
2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡಮಾನ ಇಟ್ಟು ಖಾಸಗಿ ಫೈನಾನ್ಸ್ ಬಳಿ 2 ಲಕ್ಷ ರೂ. ಸಾಲವನ್ನು ವೃದ್ಧ ದಂಪತಿ ಪಡೆದಿದ್ದರು. ಒಂದು ವರ್ಷ ಸಾಲದ ಕಂತುಕೂಡ ಕಟ್ಟಿದ್ದರು ಎನ್ನಲಾಗಿತ್ತು, ಫೈನಾನ್ಸ್ ಕಂಪನಿಯ ಮಾನವೀಯ ಕೃತ್ಯಕ್ಕೆ ಜನರ ಆಕ್ರೋಶ ವ್ಯಕ್ತವಾಗಿದೆ. ಒಂದು ವಾರದಿಂದ ಮನೆಯ ಹೊರಗೇ ವಾಸ ಮಾಡ್ತಿರೋ ದಂಪತಿ, ನಾವು ಸಾಲ ಕಟ್ಟುತ್ತೇವೆ ಸಮಯ ಕೊಡಿ ಎಂದು ಕೈ ಮುಗಿದು ಅಂಗಲಾಚುತ್ತಿದ್ದಾರೆ. ಜೊತೆಗೆ ಸಾಲ ತೀರಿಸಲು ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚೋರ್ ಮಗ ಚಂಡಾಳ್ ಅಪ್ಪ; ದೇಗುಲದಲ್ಲಿ ಕದ್ದು ಸಿಕ್ಕಿಬಿದ್ದ ಐನಾತಿಗಳು!
ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದಕ್ಕೆ ಹಲ್ಲೆ ಆರೋಪ
ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದ ಮಹಿಳೆಯ ಮೇಲೆ ಹಲ್ಲೆ ಆರೋಪದ ಹುಣಸೂರು ತಾಲ್ಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ಕೇಳಿಬಂದಿದೆ. ನೀಲಮ್ಮ ಎಂಬ ಮಹಿಳೆಯ ಮೇಲೆ ಹಲ್ಲೆ ರವಿ, ಅಂಕಿತ, ರೋಷನ್ ಹಲ್ಲೆ ಎನ್ನಲಾಗುತ್ತದೆ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಹಲ್ಲೆಗೊಳಗಾದ ನೀಲಮ್ಮ ಪತಿ ಶಿವರಾಜ್ ಭಾರತೀಯ ಸೇನೆಯಲ್ಲಿದ್ದು, ತಮ್ಮ ಸಂಬಂಧಿ ರವಿ ಪತ್ನಿ ಲೀಲಾವತಿಗೆ 10 ಸಾವಿರ ಹಣವನ್ನು ನೀಡಿದ್ದರು. ಹೀಗಾಗಿ ಪತಿ ಕೊಟ್ಟ ಹಣ ಹಿಂತಿರುಗಿ ನೀಡುವಂತೆ ನೀಲಮ್ಮ ಕೇಳಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಏಕಾಏಕಿ ಹಲ್ಲೆ ನಡೆಸಿದಾಗ, ಘಟನೆಯಲ್ಲಿ ನೀಲಮ್ಮ ತಲೆಗೆ ಪೆಟ್ಟಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.