Headlines

Video: ತಮ್ಮ ಸಾವಿಗೂ ಮುನ್ನ ಬೊಂಡಿ ಬೀಚ್ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

Video: ತಮ್ಮ ಸಾವಿಗೂ ಮುನ್ನ ಬೊಂಡಿ ಬೀಚ್ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ


ಸಿಡ್ನಿ, ಡಿಸೆಂಬರ್ 17: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬೋಂಡಿ ಬೀಚ್‌ನಲ್ಲಿ ಕಳೆದ ಭಾನುವಾರ ಇಬ್ಬರು ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದರು. ದಂಪತಿ ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಡ್ಯಾಶ್‌ಕ್ಯಾಮ್ ವೀಡಿಯೊದಲ್ಲಿ, ಪಾದಚಾರಿ ಮಾರ್ಗದಲ್ಲಿ ದಂಪತಿಗಳು ಬಂದೂಕುಧಾರಿಯೊಂದಿಗೆ ಸೆಣಸಾಡುತ್ತಿರುವುದನ್ನು ಕಾಣಬಹುದು.ವೀಡಿಯೋದಲ್ಲಿ ಶಾರ್ಟ್ಸ್ ಮತ್ತು ಲ್ಯಾವೆಂಡರ್ ಟಿ-ಶರ್ಟ್ ಧರಿಸಿದ ವೃದ್ಧ ವ್ಯಕ್ತಿ ಬಿಳಿ ಪ್ಯಾಂಟ್ ಧರಿಸಿದ ಬಂದೂಕು ಹಿಡಿದಿರುವ ವ್ಯಕ್ತಿ ಹೋರಾಡುತ್ತಿರುವುದನ್ನು ಕಾಣಬಹುದು. ದಾಳಿಯಲ್ಲಿ ಅವರು ಬದುಕುಳಿಯದೇ ಇದ್ದರೂ ಅವರ ಕಾರ್ಯ ಶ್ಲಾಘನೀಯ.

ದಂಪತಿಗಳು ತಮ್ಮ ಜೀವದ ಹಂಗನ್ನು ತೊರೆದರು, ತಮ್ಮ ಶಕ್ತಿಗೂ ಮೀರಿ ಪ್ರಯತ್ನಿಸಿದರು. ಕೊನೆಗೆ ಹಣ್ಣು ಮಾರಾಟಗಾರ ಅಹ್ಮದ್ ಎಂಬುವವರು ದಾಳಿಕೋರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅವರಿಗೂ ಕೂಡ ಎರಡು ಗುಂಡು ತಗುಲಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *