ಬದುಕಿನಲ್ಲಿ ಏನೇ ಸಮಸ್ಯೆಗಳು ಬರಲಿ, ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ಬಹಳ ಮುಖ್ಯ. ಪ್ರಾಣಿಗಳ ಕೆಲ ವಿಡಿಯೋಗಳು ಇದಕ್ಕೆ ಉದಾಹರಣೆಯಾಗಿದೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಮಾತು ಸತ್ಯ ಎನಿಸದೇ ಇರದು. ಆನೆಯೊಂದು (ಆನೆ) ರಂಧ್ರದಲ್ಲಿ ಸಿಲುಕಿದ್ದ ಕಲ್ಲಂಗಡಿ ಹಣ್ಣನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆಯುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಆನೆಯ ಬುದ್ಧಿವಂತಿಕೆಯನ್ನು ಮೆಚ್ಚಿದ್ದಾರೆ.
ಲೆಕ್ ಚೈಲರ್ಟ್ (lek chailert) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಆನೆಯೊಂದು ರಂಧ್ರದಲ್ಲಿ ಸಿಲುಕಿ ಕೊಂಡಿರುವ ಕಲ್ಲಂಗಡಿ ಹಣ್ಣನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿರುವ ದೃಶ್ಯವು ಗೋಚರಿಸುತ್ತದೆ. ಸೊಂಡಿಲನ್ನು ಬಳಸಿ ಕಲ್ಲಂಗಡಿ ಹಣ್ಣನ್ನು ತೆಗೆಯಲು ಪ್ರಯತ್ನಿಸಿದ್ದು ಕೊನೆಗೆ ಈ ಪ್ರಯತ್ನದಲ್ಲಿ ಗೆದ್ದಿದೆ. ಹೊರತೆಗೆದ ಕಲ್ಲಂಗಡಿ ಹಣ್ಣನ್ನು ಬಾಯಿ ಚಪ್ಪರಿಸಿಕೊಂಡು ತಿಂದ ಆನೆಯನ್ನು ನೀವಿಲ್ಲಿ ಕಾಣುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಸೈಕಲ್ ಏರಿ ಹೊರಟ ಮಾಲೀಕನನ್ನು ತಡೆದು ನಿಲ್ಲಿಸಿದ ಗಜರಾಜ
ಈ ವಿಡಿಯೋವನ್ನು ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ಬಹಳ ಬುದ್ಧಿವಂತ ಆನೆಗಾಗಿ. ಮತ್ತೊಬ್ಬರು, ಸೃಷ್ಟಿಯಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಅತಂತ್ಯ ಶಕ್ತಿಶಾಲಿ ಸೊಂಡಿಲು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ