Headlines

ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ; 800 ಬಿಲಿಯನ್ ಡಾಲರ್ ಆಸ್ತಿವಂತನೆನಿಸಿದ ಮೊದಲ ಮನುಷ್ಯ

ಪ್ರವಾಹದಂತೆ ಉಕ್ಕುತ್ತಿದೆ ಇಲಾನ್ ಮಸ್ಕ್ ಶ್ರೀಮಂತಿಕೆ; 800 ಬಿಲಿಯನ್ ಡಾಲರ್ ಆಸ್ತಿವಂತನೆನಿಸಿದ ಮೊದಲ ಮನುಷ್ಯ


ನವದೆಹಲಿ, ಫೆಬ್ರುವರಿ 5: ಟೆಸ್ಲಾ, ಕಂಪನಿಎಕ್ಸ್, ನ್ಯೂರಾಲಿಂಕ್ ಇತ್ಯಾದಿ ಸಂಸ್ಥೆಗಳ ಒಡೆಯರಾದ ಇಲಾನ್ ಮಾಸ್ಕ್ (ಎಲಾನ್ ಮಸ್ಕ್) ಅವರ ವಿಶ್ವದ ನಂಬರ್ ಒನ್ ಶ್ರೀಮಂತನೆಂಬ ಬಿರುದು ಅಬಾಧಿತವಾಗಿ ಮುಂದುವರಿಯುವುದು ಖಚಿತವಾಗಿದೆ. ಅವರ ಆಸ್ತಿ ಮೌಲ್ಯ 800 ಬಿಲಿಯನ್ ಡಾಲರ್ ದಾಟಿದೆ. 800 ಬಿಲಿಯನ್ ಎಂದರೆ 72 ಲಕ್ಷ ಕೋಟಿ ರೂ. ಈ 800 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಜಗತ್ತಿನ ಮೊದಲ ವ್ಯಕ್ತಿ ಇಲಾನ್ ಮಾಸ್ಕ್.

ಅವರದ್ದೇ ಮಾಲಕತ್ವದ ಸಂಸ್ಥೆಗಳಾದ ಎಕ್ಸ್ ಮತ್ತು ಎಕ್ಸ್‌ಎ ವಿಲೀನ ನಂತರ ಮಾಸ್ಕ್ ಅವರ ಶ್ರೀಮಂತಿಕೆ ತಾರಕಕ್ಕೇರಿದೆ. ಎಕ್ಸ್‌ಎಐ ಅನ್ನು ಖರೀದಿಸಿದ ಬಳಿಕಎಕ್ಸ್‌ನ ಮೌಲ್ಯ ಬಹಳ ಹೆಚ್ಚಿದೆ. ಈ ಡೀಲ್‌ಗೆ ಮುನ್ನ ಎಕ್ಸ್ ಮೌಲ್ಯ 336 ಬಿಲಿಯನ್ ಡಾಲರ್ ಇತ್ತು. ಎಕ್ಸ್‌ಎಐ ಮೌಲ್ಯ 122 ಬಿಲಿಯನ್ ಡಾಲರ್ ಇತ್ತು. ಒಪ್ಪಂದದ ಬಳಿಕಎಕ್ಸ್ನ ಮೌಲ್ಯ542 ಬಿಲಿಯನ್ ಡಾಲರ್ಗೆ ಏರಿದೆ. ಇದರಲ್ಲಿ ಇಲಾನ್ ಮಾಸ್ಕ್ ಅವರ ಷೇರುಪಾಲು ಶೇ. 43ರಷ್ಟಿದ್ದು, ಅದರ ಮೌಲ್ಯ 542 ಬಿಲಿಯನ್ ಡಾಲರ್ ಇದೆ. ಇದರ ಜೊತೆಗೆ ಇಲಾನ್ ಮಾಸ್ಕ್ ಅವರು ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರು ಮಾಲಕತ್ವ ಉತ್ಪನ್ನ.

ಇಲಾನ್ ಮಸ್ಕ್ ಅವರ ಆಸ್ತಿಗಳೆಲ್ಲವೂ ಷೇರುಗಳ ಸ್ವರೂಪದಲ್ಲೇ ಇವೆ. ಫೋರ್ಬ್ಸ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ ಅವರ ಆಸ್ತಿ ಮೌಲ್ಯ 854 ಬಿಲಿಯನ್ ಡಾಲರ್ಗೆ ಏರಿತು. ಈ ವರದಿ ಬರೆಯುವ ಸಂದರ್ಭದಲ್ಲಿ ಅವರ ಆಸ್ತಿಮೌಲ್ಯ 841 ಬಿಲಿಯನ್ ಡಾಲರ್ ಇತ್ತು. ಟೆಸ್ಲಾದಲ್ಲಿ 178 ಬಿಲಿಯನ್ ಡಾಲರ್ ಮೌಲ್ಯದ ಷೇರುದಾರಿಕೆ ಇರುವುದರ ಜೊತೆಗೆ 124 ಬಿಲಿಯನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್ಸ್ ಕೂಡ ಮಾಸ್ಕ್ ಅವರಿಗಿದೆ. ಟೆಸ್ಲಾದ ಬ್ಯೂಸಿನೆಸ್ ಗುರಿಯನ್ನು ಸ್ಥಾಪಿಸಿದರೆ ಈ ಸ್ಟಾಕ್ ಆಪ್ಷನ್‌ಗಳು ಷೇರುಗಳಾಗಿ ಪರಿವರ್ತನೆ ಆಗುತ್ತವೆ. ಆಗ ಮಾಸ್ಕ್ ಅವರ ಶ್ರೀಮಂತಿಕೆಯ ಮೌಲ್ಯ 1 ಟ್ರಿಲಿಯನ್ ಡಾಲರ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತವೆ.

ಇದನ್ನೂ ಓದಿ: ಎಂಸಿ ಪ್ರಾಜೆಕ್ಟ್ ರೇಸ್ನಿಂದ ಎಚ್ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತು ಈ ಸಂಗತಿ?

ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಶ್ರೀಮಂತರಿವರು…

  1. ಇಲಾನ್ ಮಾಸ್ಕ್: 841.1 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 272.4 ಬಿಲಿಯನ್ ಡಾಲರ್
  3. ಸೆರ್ಗೆ ಬ್ರಿನ್: 251.3 ಬಿಲಿಯನ್ ಡಾಲರ್
  4. ಜೆಫ್ ಬೇಜೋಸ್: 244.3 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 229.3 ಬಿಲಿಯನ್ ಡಾಲರ್
  6. ಲ್ಯಾರಿ ಎಲಿಸನ್: 190.6 ಬಿಲಿಯನ್ ಡಾಲರ್
  7. ಬರ್ನಾರ್ಡ್ ಆರ್ನಾಲ್ಟ್: 165.3 ಬಿಲಿಯನ್ ಡಾಲರ್
  8. ಜೆನ್ಸೆನ್ ಹುಆಂಗ್: 151.3 ಬಿಲಿಯನ್ ಡಾಲರ್
  9. ವಾರನ್ ಬಫೆಟ್: 149.5 ಬಿಲಿಯನ್ ಡಾಲರ್
  10. ಅಮಾನ್ಷಿಯೋ ಆರ್ಟೆಗಾ: 148.5 ಬಿಲಿಯನ್ ಡಾಲರ್
  11. ರಾಬ್ ವಾಲ್ಟನ್: 146 ಬಿಲಿಯನ್ ಡಾಲರ್
  12. ಜಿಮ್ ವಾಲ್ಟನ್: 143.3 ಬಿಲಿಯನ್ ಡಾಲರ್
  13. ಅಲೈಸ್ ವಾಲ್ಟನ್: 134.1 ಬಿಲಿಯನ್ ಡಾಲರ್
  14. ಮಿಚೆಲ್ ಡೆಲ್: 130 ಬಿಲಿಯನ್ ಡಾಲರ್
  15. ಸ್ಟೀವ್ ಬಾಲ್ಮರ್: 129.7 ಬಿಲಿಯನ್ ಡಾಲರ್
  16. ಮೈಕೆಲ್ ಬ್ಲೂಂಬರ್ಗ್: 109.4 ಬಿಲಿಯನ್ ಡಾಲರ್
  17. ಕಾರ್ಲೋಸ್ ಸ್ಲಿಮ್ ಹೆಲು: 108 ಬಿಲಿಯನ್ ಡಾಲರ್
  18. ಬಿಲ್ ಗೇಟ್ಸ್: 105.5 ಬಿಲಿಯನ್ ಡಾಲರ್
  19. ಮುಕೇಶ್ ಅಂಬಾನಿ: 103.4 ಬಿಲಿಯನ್ ಡಾಲರ್
  20. ಫ್ರಾಂಕಾಯ್ಸ್ ಬೆಟೆನ್‌ಕೋರ್ಟ್ ಮೆಯರ್ಸ್: 97.3 ಬಿಲಿಯನ್ ಡಾಲರ್
  21. ಥಾಮಸ್ ಪೀಟರ್ಫಿ: 85.3 ಬಿಲಿಯನ್ ಡಾಲರ್
  22. ಜೂಲಿಯಾ ಕೋಚ್: 81.1 ಬಿಲಿಯನ್ ಡಾಲರ್
  23. ಚಾಂಗ್‌ಪೆಂಗ್ ಝಾಹೋ: 78.8 ಬಿಲಿಯನ್ ಡಾಲರ್
  24. ಚಾರ್ಲ್ಸ್ ಕೋಚ್: 73.7 ಬಿಲಿಯನ್ ಡಾಲರ್
  25. ಝೋಂಗ್ ಶಂಶನ್: 70 ಬಿಲಿಯನ್ ಡಾಲರ್
  26. ಝಾಂಗ್ ಯಿಮಿಂಗ್: 69.3 ಬಿಲಿಯನ್ ಡಾಲರ್
  27. ಗೌತಮ್ ಅದಾನಿ: 67.1 ಬಿಲಿಯನ್ ಡಾಲರ್
  28. ಜೆಫ್ ಯಾಸ್: 65.6 ಬಿಲಿಯನ್ ಡಾಲರ್
  29. ಜರ್ಮನ್ ಲಾರಿಯಾ ಮೊಟಾ ವೆಲಾಸ್ಕೋ: 63.1 ಬಿಲಿಯನ್ ಡಾಲರ್
  30. ಮಾ ಹುವಾಟೆಂಗ್: 57.7 ಬಿಲಿಯನ್ ಡಾಲರ್

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *